alex Certify ಶುಭ ಹಾಗೂ ಅಶುಭ ಫಲಕ್ಕೆ ಕಾರಣವಾಗುತ್ತೆ ನೀವು ಧರಿಸುವ ಬಂಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಹಾಗೂ ಅಶುಭ ಫಲಕ್ಕೆ ಕಾರಣವಾಗುತ್ತೆ ನೀವು ಧರಿಸುವ ಬಂಗಾರ

ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಚಿನ್ನ ಕೂಡ ಒಂದು. ಇದರಲ್ಲಿ ಬಹಳ ಶುಭ ಹಾಗೂ ಅಶುಭ ಗುಣಗಳಿವೆ. ಇದನ್ನು ಹಾಕಿಕೊಂಡ್ರೆ ಕೆಲವರ ಭಾಗ್ಯದ ಬಾಗಿಲು ತೆರೆದ್ರೆ ಮತ್ತೆ ಕೆಲವರ ಭಾಗ್ಯದ ಬಾಗಿಲು ಮುಚ್ಚುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಅನೇಕ ಗ್ರಹಗಳ ಜೊತೆ ಹೋಲಿಸಲಾಗುತ್ತದೆ. ಮುಖ್ಯವಾಗಿ ದೇವಗುರು ಬೃಹಸ್ಪತಿ ರೂಪದಲ್ಲಿ ನೋಡಲಾಗುತ್ತದೆ. ಬಂಗಾರ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಅದನ್ನು ಹಾಕಿಕೊಳ್ಳುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಬಂಗಾರವನ್ನು ಯಾರು, ಯಾವಾಗ ಹಾಕಿಕೊಳ್ಳಬೇಕು ಗೊತ್ತಾ…? ಇಲ್ಲಿದೆ ನೋಡಿ:

ಶೀತ, ಉಸಿರಾಟದ ತೊಂದರೆಯಿರುವವರು ಕನಿಷ್ಠ ಬಂಗಾರದ ಉಂಗುರವನ್ನಾದರೂ ಹಾಕಿಕೊಳ್ಳಬೇಕು.

ಕೊಬ್ಬಿನ ಹೊಟ್ಟೆ ಇರುವವರು, ಮುಂಗೋಪಿಗಳು ಬಂಗಾರವನ್ನು ಹಾಕಿಕೊಳ್ಳಬಾರದು.

ಜಾತಕದಲ್ಲಿ ಬೃಹಸ್ಪತಿ ಅಶುಭವಾಗಿದ್ದರೆ ಚಿನ್ನವನ್ನು ಧರಿಸಬಾರದು.

ಮೇಷ, ಕರ್ಕ, ಸಿಂಹ ಮತ್ತು ಧನು ರಾಶಿಯವರು ಬಂಗಾರವನ್ನು ಧರಿಸಿದರೆ ಶುಭ ಪ್ರಾಪ್ತಿಯಾಗುತ್ತದೆ. ಮೀನ ರಾಶಿ, ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಬಂಗಾರವನ್ನು ಧರಿಸಬಾರದು. ತುಲಾ ಹಾಗೂ ಮಕರ ರಾಶಿಯವರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಂಗಾರವನ್ನು ಧರಿಸಬೇಕು.

ಶನಿಗೆ ಸಂಬಂಧಿಸಿದ ಯಾವುದೇ ವ್ಯಾಪಾರ ಮಾಡುವವರು ಬಂಗಾರವನ್ನು ಹಾಕಿಕೊಳ್ಳಬಾರದು.

ಗರ್ಭಿಣಿ ಹಾಗೂ ವೃದ್ಧ ಮಹಿಳೆಯರು ಬಂಗಾರವನ್ನು ಧರಿಸಬಾರದು.

ಪರಿಗಣಿಸಲಾಗುತ್ತದೆ.

ಚಿನ್ನವನ್ನು ಉಡುಗೊರೆಯಾಗಿ ಕೇವಲ ಪ್ರಿಯವಾದವರಿಗೆ ಮಾತ್ರ ನೀಡಿ.

ಚಿನ್ನದ ಆಭರಣವನ್ನು ಕಾಲಿಗೆ ಹಾಕಬೇಡಿ.

ಮದ್ಯ ಹಾಗೂ ಮಾಂಸ ಸೇವನೆ ವೇಳೆಯೂ ಬಂಗಾರವನ್ನು ಧರಿಸಬಾರದು.

ಸೊಂಟಕ್ಕೆ ಚಿನ್ನದ ಆಭರಣ ಹಾಕಿಕೊಂಡರೆ ಗರ್ಭಕೋಶ, ಹೊಟ್ಟೆಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...