ಮುತ್ತಿಕ್ಕುವಾಗ ಕಣ್ಮುಚ್ಚಿಕೊಳ್ಳುವುದೇಕೆ ಗೊತ್ತಾ…..?

 

ಸಂಗಾತಿಗಳು ಪರಸ್ಪರ ಮುತ್ತು ನೀಡುವಾಗ ಕಣ್ಣು ಮುಚ್ಚಿಕೊಳ್ಳುವುದೇಕೆಂಬುದರ ಗುಟ್ಟು ರಟ್ಟಾಗಿದೆ. ಈ ಕುರಿತು ಸಂಶೋಧನೆ ನಡೆಸಿದ್ದ ಸಂಶೋಧಕರು ಈ ಗುಟ್ಟನ್ನು ಹೊರಗೆಡವಿದ್ದಾರೆ.

ಮೆದುಳು ಇದಕ್ಕೆ ಕಾರಣ ಎಂಬುದು ಗಮನಾರ್ಹ. ಮುತ್ತಿನ ಮೇಲೆ ಗಮನ ಕೇಂದ್ರಿಕರಿಸುವಾಗ ಸಹಜವಾಗಿಯೇ ಕಣ್ಣು ಮುಚ್ಚಿಕೊಳ್ಳುತ್ತಾರಂತೆ. ಮೆದುಳು ಏಕ ಕಾಲದಲ್ಲಿ ಎರಡು ಕಾರ್ಯಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗದ್ದರಿಂದ ಕಣ್ಣು ಮುಚ್ಚಿಕೊಳ್ಳುತ್ತಾರಂತೆ.

ಹಲವರನ್ನು ಈ ಸಂಶೋಧನೆಗೆ ಒಳಪಡಿಸಿದ ವೇಳೆ, ಕಣ್ಣು ತೆರೆದು ಮುತ್ತಿಕ್ಕಿದವರು ಪರಿಪೂರ್ಣತೆಯನ್ನು ಅನುಭವಿಸದಿರುವುದು ಕಂಡು ಬಂದಿದ್ದರೆ, ಕಣ್ಮುಚ್ಚಿಕೊಂಡು ಮುತ್ತಿಕ್ಕಿದವರು ಮತ್ತಿನಲ್ಲಿ ತೇಲಾಡಿದ್ದಾರೆ. ಒಟ್ಟಿನಲ್ಲಿ ‘ಮುತ್ತಿನ ಮತ್ತೇ ಗಮ್ಮತ್ತು’ ಎನ್ನುವವರಿಗೆ ಕಣ್ಣು ಮುಚ್ಚಿಕೊಳ್ಳುವ ಕುರಿತು ಹೇಳಲು ಈಗ ಕಾರಣವೊಂದು ಸಿಕ್ಕಿದಂತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read