ಮದುವೆ ಇಬ್ಬರ ಜೀವನದಲ್ಲಿ ನಡೆಯುವ ಮಹತ್ವದ ಬದಲಾವಣೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ಬಹಳ ಮುಖ್ಯ. ಇಬ್ಬರ ನಡುವಿನ ಪ್ರತಿಯೊಂದು ಘಟನೆ ಕೂಡ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ವಿಧಾನ ಕೂಡ ಸಂಗಾತಿ ನಡುವೆ ಹೀಗಿದೆ ಪ್ರೀತಿ ಎಂಬುದನ್ನು ಹೇಳುತ್ತದೆ.
ಪುರುಷ ಸಂಗಾತಿ ಮಹಿಳಾ ಸಂಗಾತಿಯನ್ನು ತಬ್ಬಿ ಮಲಗುವುದು ಒಂದು ವಿಧಾನ. ಸಾಮಾನ್ಯವಾಗಿ ನವ ದಂಪತಿ ಈ ವಿಧಾನ ಅನುಸರಿಸ್ತಾರೆ. ನಾಲ್ಕೈದು ವರ್ಷಗಳ ನಂತ್ರವೂ ಪುರುಷ ಸಂಗಾತಿ ಮಹಿಳಾ ಸಂಗಾತಿಯನ್ನು ತಬ್ಬಿ ಮಲಗಿದ್ರೆ ನೀವು ಅದೃಷ್ಟವಂತರು ಎಂದೇ ಅರ್ಥ.
ಪತಿ ಭುಜದ ಮೇಲೆ ಪತ್ನಿ ತಲೆಯಿಟ್ಟು ಮಲಗುವ ವಿಧಾನಕ್ಕೂ ಒಂದು ಅರ್ಥವಿದೆ. ಸಂಗಾತಿ ಹೀಗೆ ಮಲಗಿದ್ರೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ತುಂಬಾ ವಿಶ್ವಾಸವಿದೆ. ಹಾಗೆ ನಿಮ್ಮನ್ನು ತುಂಬಾ ಪ್ರೀತಿ ಮಾಡ್ತಾರೆ ಎಂದರ್ಥ.
ಒಬ್ಬರ ಬೆನ್ನಿಗೆ ಇನ್ನೊಬ್ಬರು ಬೆನ್ನು ಹಾಕಿ ಮಲಗಿದ್ರೆ ಪರಸ್ಪರರ ವೈಯಕ್ತಿಕ ವಿಚಾರಕ್ಕೆ ಮಹತ್ವ ನೀಡ್ತಾರೆ ಎಂದರ್ಥ. ಇಬ್ಬರೂ ಆಕರ್ಷಿತರಾಗಿದ್ದು, ಸಂಬಂಧವನ್ನು ಸಾಕಷ್ಟು ಸುರಕ್ಷಿತವೆಂದು ಪರಿಗಣಿಸುತ್ತಾರೆಂದು ಅರ್ಥ.
ಹಾಸಿಗೆ ಮೇಲೆ ದೂರ-ದೂರ ಮಲಗುವ ಸಂಗಾತಿ ಮಧ್ಯೆ ಪ್ರೀತಿಯಿಲ್ಲವೆಂದೇ ಅರ್ಥ. ಕೆಲವೊಮ್ಮೆ ಕೆಲಸದ ಒತ್ತಡ ಸುಸ್ತು ಮಾಡಿದ್ದು, ಇಬ್ಬರೂ ಶಾರೀರಿಕ ಸಂಬಂಧ ಬಯಸುತ್ತಿಲ್ಲ ಎಂದಾದಾಗ ಸಂಗಾತಿಗಳು ಬೇರೆಯಾಗಿ ಮಲಗ್ತಾರೆ.