alex Certify ಆರೋಗ್ಯಕರ ಜೀವನಶೈಲಿಗೆ ನಿಮ್ಮ ಡಯೆಟ್ ಚಾರ್ಟ್ ನಲ್ಲಿರಲಿ ತರಕಾರಿಗಳಿಗೆ ಮೊದಲ ಆದ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಜೀವನಶೈಲಿಗೆ ನಿಮ್ಮ ಡಯೆಟ್ ಚಾರ್ಟ್ ನಲ್ಲಿರಲಿ ತರಕಾರಿಗಳಿಗೆ ಮೊದಲ ಆದ್ಯತೆ

ಇತ್ತೀಚೆಗೆ ಅನೇಕ ಜನರು ಮಾಂಸಾಹಾರದ ಸೇವನೆಯನ್ನು ಬಿಟ್ಟು ಸಸ್ಯಹಾರಿಗಳಾಗಲು ಬಯಸುತ್ತಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಬಹಳಾನೇ ಉತ್ತಮ. ಶುದ್ಧ ಶಾಕಾಹಾರವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಬಹಳಷ್ಟಿದೆ. ಆರೋಗ್ಯಕರ ಜೀವನಶೈಲಿ ನಿಮ್ಮದಾಗಬೇಕಿದ್ದಲ್ಲಿ ನಿಮ್ಮ ಡಯೆಟ್ ಚಾರ್ಟ್ ನಲ್ಲಿ ತರಕಾರಿಗಳಿಗೆ ಮೊದಲ ಆದ್ಯತೆ ನೀಡಿ.

ತರಕಾರಿಗಳಲ್ಲಿ ಫೈಬರ್ ಯಥೇಚ್ಛವಾಗಿರುವುದರಿಂದ ಇದು ಕರುಳಿನ ಕಾರ್ಯ ನಿರ್ವಹಣೆಗೆ ಅವಶ್ಯಕವಾಗಿದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ತರಕಾರಿಗಳನ್ನು ರೂಢಿಸಿಕೊಂಡರೆ, ಅತಿ ಹೆಚ್ಚು ಪೌಷ್ಟಿಕಾಂಶವು ದೊರೆತು, ಆರೋಗ್ಯಕರ ಚಯಾಪಚಯಕ್ಕೆ ಅಗತ್ಯವಿರುವ ಅಮೈನೊ ಆ್ಯಸಿಡ್ ದೊರೆಯುತ್ತದೆ.

ಹಾಗೆಯೇ ಸಸ್ಯಾಹಾರಿ ಆಹಾರಗಳಲ್ಲಿ ಕೊಬ್ಬು ಮತ್ತು ಸೋಡಿಯಂ ಅಂಶ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವುದರಲ್ಲಿ ಸಹಾಯ ಮಾಡುತ್ತದೆ. ಮಾಂಸಾಹಾರಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿಗಳ ಕೊಬ್ಬು ಇರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.

ಶಾಕಾಹಾರಿ ಆಹಾರದಲ್ಲಿ ಕಂಡುಬರುವ ಹಲವಾರು ಖನಿಜಗಳು, ಫೋಟೋಕೆಮಿಕಲ್ ಜೀವಸತ್ವಗಳು, ಹೆಚ್ಚಿನ ರೀತಿಯ ಪೋಷಕಾಂಶಗಳಿರುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ದೇಹಕ್ಕೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದ್ದರಿಂದ ನಿಮ್ಮ ನಿತ್ಯದ ಜೀವನದಲ್ಲಿ ಶಾಕಾಹಾರವನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಮತ್ತು ದೀರ್ಘಾಯುಷ್ಯವನ್ನು ಪಡೆದುಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...