HomeIndiaಶಬರಿಮಲೆ ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ಮೂರು ವಿಶೇಷ ರೈಲು ಸೇವೆ ಆರಂಭ

ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ಮೂರು ವಿಶೇಷ ರೈಲು ಸೇವೆ ಆರಂಭ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ದಕ್ಷಿಣ ಕರಾವಳಿ ರೈಲ್ವೆ ಸಿಹಿ ಸುದ್ದಿ ನೀಡಿದೆ. ಮಂಡಲ ದೀಕ್ಷೆ ಮತ್ತು ಮಕರವಿಳಕ್ಕು ಪೂಜೆಯ ಸಮಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಯ್ಯಪ್ಪ ಭಕ್ತರು ಶಬರಿಮಲೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವಾರು ವಿಶೇಷ ರೈಲುಗಳನ್ನು ಘೋಷಿಸಲಾಗಿದೆ.

ರೈಲ್ವೆ ಸಿಪಿಆರ್‌ಒ ಬಾಲಾಜಿ ಕಿರಣ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಅಯ್ಯಪ್ಪ ಭಕ್ತರಿಗೆ ಅನುಕೂಲವಾಗುವಂತರ ಆಂಧ್ರಪ್ರದೇಶದಿಂದ ಕೇರಳದ ಕೊಲ್ಲಂ ನಿಲ್ದಾಣಕ್ಕೆ ಮೂರು ಜೋಡಿ ವಿಶೇಷ ರೈಲುಗಳು ಚಲಿಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲನೆಯ ವಿಶೇಷ ರೈಲು:

ಶ್ರೀಕಾಕುಲಂ ರಸ್ತೆಯಿಂದ ಕೊಲ್ಲಂಗೆ: ಶ್ರೀಕಾಕುಲಂ ರಸ್ತೆಯಿಂದ ಕೊಲ್ಲಂಗೆ ಹೋಗುವ ವಿಶೇಷ ರೈಲು (08539) ನವೆಂಬರ್ 22ರಿಂದ ಜನವರಿ 24ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 9.20ಕ್ಕೆ ಶ್ರೀಕಾಕುಲಂನಿಂದ ಹೊರಡಲಿದೆ. ಸೋಮವಾರ ರಾತ್ರಿ 9.30ಕ್ಕೆ ಕೊಲ್ಲಂ ತಲುಪಲಿದೆ. ಹಿಂದಿರುಗುವ ರೈಲು (08540) ನವೆಂಬರ್ 24ರಿಂದ ಜನವರಿ 26ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 2.30ಕ್ಕೆ ಕೊಲ್ಲಂನಿಂದ ಹೊರಟು ಬುಧವಾರ ಸಂಜೆ 4.50ಕ್ಕೆ ಶ್ರೀಕಾಕುಲಂ ತಲುಪಲಿದೆ.

ಈ ರೈಲು ಪಾದೂರು, ಚೀಪುರುಪಲ್ಲೆ, ವಿಜಯನಗರಂ, ವಿಶಾಖಪಟ್ಟಣಂ, ವಿಜಯವಾಡ, ನೆಲ್ಲೂರು ಮತ್ತು ರೇಣಿಗುಂಟ ಸೇರಿದಂತೆ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಹವಾನಿಯಂತ್ರಿತ, ಸ್ಲೀಪರ್ ಮತ್ತು ಸಾಮಾನ್ಯ ಕೋಚ್‌ಗಳು ಲಭ್ಯವಿರುತ್ತವೆ. ಭಕ್ತರಿಗೆ ಅನುಕೂಲಕರ ಪ್ರಯಾಣ ಒದಗಿಸುವ ಉದ್ದೇಶ ಇದಾಗಿದೆ.

ಎರಡನೆಯ ವಿಶೇಷ ರೈಲು:

ಮಚಲಿಪಟ್ನಂನಿಂದ ಕೊಲ್ಲಂಗೆಮಚಲಿಪಟ್ನಂ ಪ್ರದೇಶದ ಭಕ್ತರಿಗಾಗಿ ಮತ್ತೊಂದು ವಿಶೇಷ ಎಕ್ಸ್‌ಪ್ರೆಸ್ (07231) ಕೇವಲ ಎರಡು ಟ್ರಿಪ್‌ಗಳನ್ನು ಮಾತ್ರ ನಡೆಸಲಿದೆ. ನವೆಂಬರ್ 20 ಮತ್ತು 27ರಂದು ಶುಕ್ರವಾರ ಸಂಜೆ 4.30ಕ್ಕೆ ಮಚಲಿಪಟ್ನಂನಿಂದ ಹೊರಟು ಶನಿವಾರ ರಾತ್ರಿ 9.30ಕ್ಕೆ ಕೊಲ್ಲಂ ತಲುಪಲಿದೆ. ಹಿಂದಿರುಗುವ ರೈಲು (07232) ನವೆಂಬರ್ 22 ಮತ್ತು 29ರಂದು ಭಾನುವಾರ ಬೆಳಿಗ್ಗೆ 2.30ಕ್ಕೆ ಕೊಲ್ಲಂನಿಂದ ಹೊರಟು ಸೋಮವಾರ ಬೆಳಿಗ್ಗೆ 8.50ಕ್ಕೆ ಮಚಲಿಪಟ್ನಂ ತಲುಪಲಿದೆ. ಇದು ಗುಡಿವಾಡ, ವಿಜಯವಾಡ, ತೆನಾಲಿ, ಕಟ್ಪಾಡಿ, ಸೇಲಂ ಮತ್ತು ಇತರ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಸುರಕ್ಷತಾ ಮಾನದಂಡಗಳೊಂದಿಗೆ 23 ಎಲ್‌ಹೆಚ್‌ಬಿ ಕೋಚ್‌ಗಳೊಂದಿಗೆ ಚಲಿಸುತ್ತದೆ.

ಮೂರನೆಯ ವಿಶೇಷ ರೈಲು:

ಕಾಕಿನಾಡದಿಂದ ಕೊಲ್ಲಂಗೆಕಾಕಿನಾಡ ಟೌನ್-ಕೊಲ್ಲಂ ವಿಶೇಷ ರೈಲು (07233) ನವೆಂಬರ್ 19ರಿಂದ ಜನವರಿ 21ರವರೆಗೆ ಹತ್ತು ಟ್ರಿಪ್‌ಗಳಿಗೆ ಚಲಿಸಲಿದೆ. ಪ್ರತಿ ಗುರುವಾರ ಬೆಳಿಗ್ಗೆ 8.20ಕ್ಕೆ ಕಾಕಿನಾಡದಿಂದ ಹೊರಟು ಶುಕ್ರವಾರ ರಾತ್ರಿ 9.30ಕ್ಕೆ ಕೊಲ್ಲಂ ತಲುಪಲಿದೆ. ಹಿಂದಿರುಗುವ ರೈಲು (07234) ನವೆಂಬರ್ 21ರಿಂದ ಜನವರಿ 23ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ 2.30ಕ್ಕೆ ಹೊರಟು ಭಾನುವಾರ ಸಂಜೆ 6.30ಕ್ಕೆ ಕಾಕಿನಾಡ ತಲುಪಲಿದೆ.

ಈ ರೈಲು ಸಮರ್ಲಕೋಟ, ರಾಜಮಂಡ್ರಿ, ಎಲೂರು, ಗುಂಟೂರು, ನಂದ್ಯಾಲ್, ಗುಥಿ, ಧರ್ಮಾವರಂ ಮತ್ತು ಕದಿರಿ ಮೂಲಕ ಪ್ರಯಾಣಿಸಲಿದೆ. ವಿವಿಧ ವರ್ಗಗಳ ಎಸಿ, ಸ್ಲೀಪರ್ ಮತ್ತು ಜನರಲ್ ಕೋಚ್‌ಗಳನ್ನು ಹೊಂದಿರುತ್ತದೆ.

ಈ ರೈಲುಗಳಿಂದಾಗಿ ಅಯ್ಯಪ್ಪ ಭಕ್ತರಿಗೆ ಅನುಕೂಲವಾಗಲಿದೆ. ಕೇರಳಕ್ಕೆ ಪ್ರಯಾಣಿಸಲು ಸಾಮಾನ್ಯ ರೈಲುಗಳಲ್ಲಿ ಬರ್ತ್ ಪಡೆಯಲು ಅಯ್ಯಪ್ಪ ಭಕ್ತರು ಪರದಾಡುತ್ತಿದ್ದರು. ಅಂತಹ ಸಮಯದಲ್ಲಿ ದಕ್ಷಿಣ ಕರಾವಳಿ ರೈಲ್ವೆ ತೆಗೆದುಕೊಂಡ ಈ ನಿರ್ಧಾರವು ಸಾವಿರಾರು ಭಕ್ತರಿಗೆ ಸಹಾಯವಾಗಲಿದೆ. ಟಿಕೆಟ್‌ಗಳನ್ನು ಅಧಿಕೃತ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಅಥವಾ ನೇರವಾಗಿ ಮೀಸಲಾತಿ ಕೌಂಟರ್‌ಗಳಲ್ಲಿ ಮುಂಚಿತವಾಗಿ ಬುಕ್ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular