HomeEntertainmentಪ್ರೇಕ್ಷಕರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ ಚಿತ್ರತಂಡ ಗಲ್ಲಾಪೆಟ್ಟಿಗೆಯಲ್ಲಿ ಜಯಭೇರಿ ಬಾರಿಸಿ ಐವತ್ತು ದಿನ ಪೂರೈಸಿದ ಪ್ರೇಮದ...

ಪ್ರೇಕ್ಷಕರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ ಚಿತ್ರತಂಡ ಗಲ್ಲಾಪೆಟ್ಟಿಗೆಯಲ್ಲಿ ಜಯಭೇರಿ ಬಾರಿಸಿ ಐವತ್ತು ದಿನ ಪೂರೈಸಿದ ಪ್ರೇಮದ ಊರಲಿ

ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿರುವ ಪ್ರೇಮದ ಊರಲಿ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ದಿನದಿಂದಲೂ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಗಳಿಸಿಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಅಧಿಕೃತವಾಗಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿರುವ ಚಿತ್ರತಂಡ, ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ.

ಸಿನಿಮಾದ ಈ ಅದ್ಭುತ ಯಶಸ್ಸಿನ ಖುಷಿಯನ್ನು ಹಂಚಿಕೊಂಡಿರುವ ಚಿತ್ರದ ನಿರ್ಮಾಪಕರು ಹಾಗೂ ತಂತ್ರಜ್ಞರು, ಪ್ರೇಕ್ಷಕರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಗಲು ಕಾರಣರಾದ ಕರ್ನಾಟಕದ ಸಮಸ್ತ ಸಿನಿಪ್ರೇಮಿಗಳ ಪ್ರೀತಿ ಹಾಗೂ ಬೆಂಬಲವೇ ಮುಖ್ಯ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಹಂಚಿಕೊಳ್ಳುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಪ್ರೇಕ್ಷಕರಿಂದ ದೊರೆತ ಸಕಾರಾತ್ಮಕ ಪ್ರತಿಕ್ರಿಯೆಯೇ ಚಿತ್ರದ ಈ ದೀರ್ಘಾವಧಿಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಪ್ರೇಮದ ಊರಲಿ ಚಿತ್ರದಲ್ಲಿ ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಂಗಾಯಣ ರಘು ಹಾಗೂ ರಾಮಿಕಾ ಶಿವು ಮುಂತಾದ ಪ್ರತಿಭಾವಂತ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಮನೋಜ್ ಕುಮಾರ್ ಅವರ ಆಕರ್ಷಕ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಲನಚಿತ್ರಕ್ಕೆ ವನಿಲ್ಲಾ ಎಂಟರ್ಟೈನ್ಮೆಂಟ್ಸ್ ಹಾಗೂ ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮಮತಾ ದೇವೇಂದ್ರ, ಪ್ರಶಾಂತ್ ಡಿ ಎಸ್ ಮತ್ತು ರಮೇಶ್ ಎನ್ ಅವರು ಬಂಡವಾಳ ಹೂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದ ಕ್ರಿಯೇಟಿವ್ ನಿರ್ಮಾಪಕರಾಗಿ ದೇವೇಂದ್ರ ಎಂ ಕಾರ್ಯನಿರ್ವಹಿಸಿದ್ದರೆ, ಮುಕುಲ್ ಗೌಡ, ಡಾ ಕೆ ಮಂಜುನಾಥ್, ರವಿ ಹೊಳಲು ಹಾಗೂ ಡಾ ಪ್ರವೀಣ್ ರಾಮಚಂದ್ರ ಸಹ ನಿರ್ಮಾಪಕರಾಗಿದ್ದಾರೆ. ರಾಜ್ಕಾಂತ್ ಎಸ್ ಕೆ ಅವರ ಸುಂದರ ಕ್ಯಾಮೆರಾ ಕೈಚಳಕ ಹಾಗೂ ಹರ್ಷಿತ್ ಪ್ರಭು ಅವರ ಹದವಾದ ಸಂಕಲನ ಸಿನಿಮಾದ ಮೌಲ್ಯವನ್ನು ಹೆಚ್ಚಿಸಿದೆ. ಅಲ್ಲದೆ, ಮನೋಜ್ ಕುಮಾರ್, ಹುಸೇನ್ ಎಚ್ ಡಿಸಿ ಮತ್ತು ಪ್ರಭು ಅವರ ನೃತ್ಯ ಸಂಯೋಜನೆ ಹಾಗೂ ಸ್ಟೋನ್ ಲಿಯೋಪಾರ್ಡ್ ಆರ್ಟ್ಸ್ ನ ಡಿಐ ಹಾಗೂ ಕೊಂಡೂರು ದೀಪಕ್ ರಾಜು ಅವರ ಬಣ್ಣ ಸಂಯೋಜನೆ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular