HomeKarnatakaಬೆಂಗಳೂರಿನಲ್ಲಿ ಈ ವಾರಾಂತ್ಯದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

ಬೆಂಗಳೂರಿನಲ್ಲಿ ಈ ವಾರಾಂತ್ಯದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾರಾಂತ್ಯದ ಹಿನ್ನೆಲೆಯಲ್ಲಿ ಪುಸ್ತಕ ಪ್ರಿಯರು, ಮಕ್ಕಳು, ಕಲಾಸಕ್ತರು ಹಾಗೂ ಕ್ರೀಡಾಪ್ರೇಮಿಗಳಿಗಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಪುಸ್ತಕ ಮೇಳದಿಂದ ಹಿಡಿದು ಸಂಗೀತ ಕಾರ್ಯಕ್ರಮದವರೆಗೆ ಇಲ್ಲಿದೆ ಮಾಹಿತಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಅಟ್ಟಾ ಗಲಾಟಾದಲ್ಲಿ ವಾರ್ಷಿಕ ಪುಸ್ತಕ ಮಾರಾಟ ಮೇಳ

ಇಂದಿರಾನಗರದ ಅಟ್ಟಾ ಗಲಾಟಾದಲ್ಲಿ ವಾರ್ಷಿಕ ಪುಸ್ತಕ ಮಾರಾಟ ಮೇಳ ನಡೆಯಲಿದೆ. ಕಾದಂಬರಿ, ಕವನ, ಮಕ್ಕಳ ಪುಸ್ತಕಗಳು ಸೇರಿದಂತೆ ವಿವಿಧ ಪ್ರಕಾರದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಹಳೆಯ ಪುಸ್ತಕಗಳು ಹಾಗೂ ಮುದ್ರಣ ದೋಷವಿರುವ ಪುಸ್ತಕಗಳೂ ಲಭ್ಯವಿರಲಿವೆ.

ಸ್ಥಳ: ಅಟ್ಟಾ ಗಲಾಟಾ, ಇಂದಿರಾನಗರ

ದಿನಾಂಕ: ನವೆಂಬರ್ 14 ಮತ್ತು 15

ಸಮಯ: ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ.

2. ಮಕ್ಕಳಿಗಾಗಿ ಆನ್‌ಲೈನ್ ಕಥೆ ಹೇಳುವ ಸ್ಪರ್ಧೆ

ವ್ಯಾಸ ಪ್ರಾಜೆಕ್ಟ್ ವತಿಯಿಂದ ‘ರೀಡರ್ಸ್ ಕ್ವೆಸ್ಟ್ 2026’ ಎಂಬ ಒಂದು ವಾರದ ಆನ್‌ಲೈನ್ ಕಥೆ ಹೇಳುವ ಸವಾಲು ಆಯೋಜಿಸಲಾಗಿದೆ. 1ರಿಂದ 7ನೇ ತರಗತಿಯ ಮಕ್ಕಳಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿದೆ.

ದಿನಾಂಕ: ನವೆಂಬರ್ 14ರಿಂದ 20ರವರೆಗೆ

ವೆಬ್‌ಸೈಟ್: www.vyasaproject.com/quest2026

3. ಸಾವಿರದ ಶರಣವ್ವ ಸಂಗೀತ ಕಾರ್ಯಕ್ರಮ

ಸಂಗಮಂ ವತಿಯಿಂದ ಪದ್ಮಶ್ರೀ ಡಾ. ಬಿ. ಜಯಶ್ರೀ ಅವರ ನೇತೃತ್ವದಲ್ಲಿ ‘ಸಾವಿರದ ಶರಣವ್ವ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಂಗಭೂಮಿ ಗೀತೆಗಳು, ಜನಪದ ಹಾಗೂ ಶಾಸ್ತ್ರೀಯ ಸಂಗೀತದ ಸಮ್ಮಿಲನ ಈ ಕಾರ್ಯಕ್ರಮದ ವಿಶೇಷವಾಗಿದೆ.

ಸ್ಥಳ: ಬಿಐಸಿ ಸಭಾಂಗಣ, ಡೊಮ್ಲೂರು

ದಿನಾಂಕ: ನವೆಂಬರ್ 14

ಸಮಯ: ಸಂಜೆ 6 ಗಂಟೆ.

4. ಕೆನರಾ ಬ್ಯಾಂಕ್ ಮ್ಯಾರಥಾನ್

ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್ ಮ್ಯಾರಥಾನ್ ಆಯೋಜಿಸಲಾಗಿದೆ. ಓಟಗಾರರು, ಕುಟುಂಬಗಳು ಹಾಗೂ ಫಿಟ್ನೆಸ್ ಆಸಕ್ತರು ಭಾಗವಹಿಸಬಹುದಾಗಿದೆ.

ಸ್ಥಳ: ಶ್ರೀ ಕಂಠೀರವ ಕ್ರೀಡಾಂಗಣ

ದಿನಾಂಕ: ನವೆಂಬರ್ 22.

5. ರಾಕೆಟ್ ಕಾಮಿಕ್ಸ್ ಮ್ಯಾಗಜೀನ್ ಬಿಡುಗಡೆ

ಇಂಡಿಯನ್ ಸಮ್ಮರ್ ಪ್ರೆಸ್ ಮತ್ತು ಸ್ಟುಡಿಯೋ ನಿಯೆಟ್ ವತಿಯಿಂದ ಎಲ್ಲ ವಯೋಮಾನದವರಿಗಾಗಿ ‘ರಾಕೆಟ್’ ಎಂಬ ಹೊಸ ಕಾಮಿಕ್ಸ್ ಮ್ಯಾಗಜೀನ್ ಬಿಡುಗಡೆ ಮಾಡಲಾಗುತ್ತಿದೆ. ಕಥೆ ಹೇಳುವಿಕೆ, ಕಾಮಿಕ್ಸ್ ರಚನೆ ಚಟುವಟಿಕೆಗಳು ಹಾಗೂ ಪ್ರಕಾಶಕರು ಮತ್ತು ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ಸ್ಥಳ: ಅಟ್ಟಾ ಗಲಾಟಾ, ಇಂದಿರಾನಗರ

ದಿನಾಂಕ: ನವೆಂಬರ್ 14

ಸಮಯ: ಸಂಜೆ 5.30.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular