HomeKarnatakaಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್; ನವೆಂಬರ್ 13ರಂದು ನೇರ ಸಂದರ್ಶನ

ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್; ನವೆಂಬರ್ 13ರಂದು ನೇರ ಸಂದರ್ಶನ

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಶಿವಮೊಗ್ಗ ವತಿಯಿಂದ ದಿನಾಂಕ 13-11-2026 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

 ಈ ನೇರ ಸಂದರ್ಶನದಲ್ಲಿ ‘ಸಾಯಿ ಇಂಡಿಯಾ ಪ್ರೈ. ಲಿ.’ ಖಾಸಗಿ ಕಂಪನಿಯು ಭಾಗವಹಿಸುತ್ತಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.

 ಶೈಕ್ಷಣಿಕ ಅರ್ಹತೆ: ಐಟಿಐ ಮತ್ತು ಯಾವುದೇ ವಿಷಯದಲ್ಲಿ ಡಿಪ್ಲೊಮಾ ಮಾಡಿರುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರವೇಶ ಉಚಿತವಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ರಿಸ್ಯೂಮ್ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 9380663606, 9108235132 ಮೂಲಕ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

 ಕಾನೂನು ಸೇವೆಗಳ ದಿನಾಚರಣೆ: ಶಿವಮೊಗ್ಗದಲ್ಲಿ ಯಶಸ್ವಿ ಸೈಕಲ್ ಜಾಥಾ – *ಉಚಿತ ಕಾನೂನು ನೆರವು ಹಾಗೂ ಲೋಕ್ ಅದಾಲತ್ ಸದುಪಯೋಗಕ್ಕೆ ಕರೆ”

 ಸಾರ್ವಜನಿಕರಲ್ಲಿ ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಮೂಲಭೂತವಾದ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ” ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು‌ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ. ಎಸ್. ತಿಳಿಸಿದರು.

ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದ ಆವರಣದಿಂದ ಸೋಮವಾರದಂದು ಬೃಹತ್ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ಕಾನೂನು ಸೇವೆಗಳ ಪ್ರಾಧಿಕಾರದ ಅಧಿನಿಯಮ, 1987 ರ ಧ್ಯೇಯ ವಾಕ್ಯವು ‘ನ್ಯಾಯ ನಿಮ್ಮದು ನೆರವು ನಮ್ಮದು’ ಹಾಗೂ ‘ಮನೆಮನೆಗೂ ನ್ಯಾಯ’ ಎಂಬುದಾಗಿದೆ.ಅಲ್ಲದೆ, ಉಚಿತ ಕಾನೂನು ಸಲಹೆ ಮತ್ತು ನೆರವಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ: 15100 ಅನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

ವಿಶೇಷ ಹಾಗೂ ರಾಷ್ಟ್ರೀಯ ಲೋಕ್ ಅದಾಲತ್ ದಿನಾಂಕಗಳು:

 ನವೆಂಬರ್ 21, 2026: ಚೆಕ್ ಅಮಾನ್ಯ ಪ್ರಕರಣಗಳಿಗಾಗಿ ವಿಶೇಷ ಲೋಕ್ ಅದಾಲತ್.

ಡಿಸೆಂಬರ್ 12, 2026: ಎಲ್ಲಾ ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.

ಸಂಚಾರಿ ಇ-ಚಲನ್ ದಂಡಕ್ಕೆ 50% ರಿಯಾಯಿತಿ:

ದಿನಾಂಕ 21/11/2026 ರಿಂದ 11/12/2026 ರವರೆಗೆ ಸಂಚಾರಿ ಇ-ಚಲನ್ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಸರ್ಕಾರವು 50% ರಿಯಾಯಿತಿ ಘೋಷಿಸಿದ್ದು, ವಾಹನ ಮಾಲೀಕರು ಈ ಅವಕಾಶವನ್ನು ಬಳಸಿಕೊಂಡು ಬಾಕಿ ದಂಡ ಪಾವತಿಸಬೇಕೆಂದು ಅವರು ಮನವಿ ಮಾಡಿದರು..

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ. ಆರ್. ರಾಘವೇಂದ್ರ ಸ್ವಾಮಿ ಮಾತನಾಡಿ, “ಪಕ್ಷಗಾರರು ಲೋಕ್ ಅದಾಲತ್ ಹಾಗೂ ಮಧ್ಯಸ್ಥಿಕೆಯಂತಹ ವೇದಿಕೆಗಳನ್ನು ಬಳಸಿಕೊಂಡು ಅತ್ಯಲ್ಪ ಅವಧಿಯಲ್ಲಿ ಕಾನೂನಾತ್ಮಕ ಮತ್ತು ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿವಮೊಗ್ಗ ಮಹಾನಗರ ಪಾಲಿಕೆ, ಸೈಕಲ್ ಕ್ಲಬ್, ಯೂಥ್ ಹಾಸ್ಟೆಲ್ ಅಸೋಸಿಯೇಷನ್, ವಿವಿಧ ರೋಟರಿ ಹಾಗೂ ಜೆ ಸಿ ಐ ಸಂಸ್ಥೆಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಜಾಥಾ ಜರುಗಿತು.

ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ಮಕ್ಕಳಾದ ಸುಮುಖ ಎಂ. ಎಸ್., ಶ್ರೇಯಸ್, ವಿಹಾನ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಸೈಕಲ್ ಜಾಥಾದ ಮುಂಚೂಣಿಯಲ್ಲಿ ಸಾಗಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದರು.

ಜಾಥಾ ಮಾರ್ಗ: ನ್ಯಾಯಾಲಯದಿಂದ ಪ್ರಾರಂಭಗೊಂಡು ಮಹಾವೀರ ಸರ್ಕಲ್ ನಿಂದ ಟಿ. ಸೀನಪ್ಪ ಶೆಟ್ಟಿ ವೃತದ ಮಾರ್ಗವಾಗಿ ಅಮೀ‌ರ್ ಅಹಮದ್ ವೃತದಿಂದ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಸರ್ಕಿಟ್‌ ಹೌಸ್‌ ಸಿಗ್ನಲ್‌ ಮೂಲಕ ಜೈಲ್‌ ವೃತದಿಂದ ನೆಹರು ಕ್ರೀಡಾಂಗಣ ಮುಂದಿರುವ ರಸ್ತೆಯ ಮಾರ್ಗವಾಗಿ ಮರಳಿ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ನವ್ಯಶ್ರೀ ನಾಗೇಶ್, ಶ್ರೀ ವಿಜಯ್ ಕುಮಾರ್, ಮನೋಹರ, ವೀರಣ್ಣ ಹುಗ್ಗಿ, ಜೆಸಿಐ ಸದಸ್ಯರು, ಪ್ರಾಧಿಕಾರದ ಮುಖ್ಯ ಎಲ್.ಎ.ಡಿ.ಸಿ. ಹೆಚ್. ಬಿ. ದೇವೇಂದ್ರಪ್ಪ, ಪ್ಯಾನೆಲ್ ವಕೀಲರಾದ ಜಿ. ಜಗದೀಶ್, ಪಿ.ಎಲ್.ವಿ. ಪ್ರಜ್ವಲ್ ಗೌಡ ಹಾಗೂ ಪೊಲೀಸ್ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular