HomeKarnatakaಶಾಸಕ ರಮೇಶ್ ಜಾರಕಿಹೊಳಿ ಗನ್​ಮ್ಯಾನ್​ನಿಂದಲೇ ದರೋಡೆಗೆ ಯತ್ನ: 7 ಆರೋಪಿಗಳು ಅರೆಸ್ಟ್

ಶಾಸಕ ರಮೇಶ್ ಜಾರಕಿಹೊಳಿ ಗನ್​ಮ್ಯಾನ್​ನಿಂದಲೇ ದರೋಡೆಗೆ ಯತ್ನ: 7 ಆರೋಪಿಗಳು ಅರೆಸ್ಟ್

ಬೆಳಗಾವಿ: ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಗನ್​ಮ್ಯಾನ್​ನಿಂದಲೇ ಹಣ ದುಪ್ಪಟ್ಟು ಮಾಡಿಕೊಡುವ ಹೆಸರಲ್ಲಿ ದರೋಡೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಅಕ್ಟೋಬರ್ 30ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಮೇಶ್ ಜಾರಕಿಹೊಳಿ ಗನ್ ಮ್ಯಾನ್ ಚಿದಾನಂದ ಕುರಬೆಟ್ ಮನಿ ಡಬ್ಲಿಂಗ್ ಹೆಸರಲ್ಲಿ 2.68 ಕೋಟಿ ರೂ ದರೋಡೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಸಂಬಂಧ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಗನ್​ಮ್ಯಾನ್​ ಚಿದಾನಂದ ಕುರಬೆಟ್, ಸಂಜೀವ್ ಅರಭಾವಿ, ರಾಜಾರಾಮ್, ರಮೇಶ್ ಮಾಳ್ಯಾಗೋಳ, ಪ್ರಕಾಶ್​, ರಾಘವೇಂದ್ರ ಕೊಪ್ಪದ್, ರಾಮಪ್ಪ ತಳವಾರ ಬಂಧಿತರು. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಮೇಶ್​ ಎಂಬ ವ್ಯಕ್ತಿ ಶಿವಂ ಅಸೋಸಿಯೇಟ್​ನಲ್ಲಿ ಹಣ ಕಳೆದುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಗನ್​ಮ್ಯಾನ್​ ಚಿದಾನಂದ ಕುರಬೆಟ್, ಹೆಚ್ಚಿನ ಹಣ ಮಾಡಿ ಕೊಡುವುದಾಗಿ ನಂಬಿಸಿದ್ದ. 1 ಲಕ್ಷಕ್ಕೆ 30 ಸಾವಿರ ರೂ ಹೆಚ್ಚಿನ ಆಮಿಷವೊಡ್ಡಿದ್ದಾರೆ. ಹಣ ಕೊಟ್ಟರೆ ಅಕೌಂಟ್​ಗೆ ಜಮಾ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ಗನ್​ಮ್ಯಾನ್ ಮಾತು ನಂಬಿದ ಕಲ್ಮೇಶ್,​ ಬ್ಯಾಂಕ್, ಸೊಸೈಟಿ ಮತ್ತು ಸ್ನೇಹಿತರಿಂದ ಬರೋಬ್ಬರಿ 2.68 ಕೋಟಿ ರೂ. ಸಂಗ್ರಹಿಸಿದ್ದಾರೆ. ಬಳಿಕ ಚಿದಾನಂದಗೆ ಕರೆ ಮಾಡಿ ತಿಳಿಸಿದ್ದಾರೆ.

ಈ ವೇಳೆ ಚಿದಾನಂದ ಕುರಬೆಟ್ ಆ್ಯಂಡ್​ ಗ್ಯಾಂಗ್ ಹಣ ಎಣಿಕೆಗೆ ಶೆಡ್​ಗೆ ಕರೆದಿದ್ದಾರೆ. ಹಣ ತರುತ್ತಿದ್ದಂತೆ ಚಿದಾನಂದ ಟೀಮ್​ನಿಂದ ಶೆಡ್ ಮೇಲೆ ದಾಳಿ ಮಾಡಿ, ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದೆ. ಆದರೆ ಕಲ್ಮೇಶ್​​​, ಶೆಡ್ ಸುತ್ತಲೂ ಹುಡುಗರನ್ನು ಮೊದಲೇ ಕಾವಲಿಗೆ ನಿಲ್ಲಿಸಿದ್ದ. ಕೂಡಲೇ ಚಿದಾನಂದ ಆ್ಯಂಡ್​ ಗ್ಯಾಂಗ್​​ನನ್ನು​ ಶೆಡ್ ಹೊರಗಿದ್ದ ಕಲ್ಮೇಶ್ ಹುಡುಗರು ಹಿಡಿದಿದ್ದಾರೆ. ಆರೋಪಿಗಳ ಮೇಲೆ ಹಲ್ಲೆ ಮಾಡಿ ಬಳಿಕ ಕಲ್ಮೇಶ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ 2.39 ಕೋಟಿ ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಆರೋಪಿ ಪರಾರಿ ಆಗಿದ್ದು ಮತ್ತು ಉಳಿದ ಹಣಕ್ಕೆ ಶೋಧ ಕಾರ್ಯ ಮುಂದುವರೆದಿದೆ.

ದರೋಡೆ ಕೇಸ್​ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ​ ಗನ್​ಮ್ಯಾನ್​ ಚಿದಾನಂದ ಬಂಧನ ಬೆನ್ನಲ್ಲೇ ಅವರನ್ನ ಅಮಾನತು ಮಾಡಿ ಬೆಳಗಾವಿ ಎಸ್​ಪಿ ಕೆ.ರಾಮರಾಜನ್ ಆದೇಶ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular