HomeUncategorizedರಾಜ್ಯದ ವಿಚಾರದಲ್ಲಿ ರಾಹುಲ್ ಗಾಂಧಿ ಕಣ್ಣು ಮುಚ್ಚಿಕೊಂಡಿರುವುದು ವಿಪರ್ಯಾಸ

ರಾಜ್ಯದ ವಿಚಾರದಲ್ಲಿ ರಾಹುಲ್ ಗಾಂಧಿ ಕಣ್ಣು ಮುಚ್ಚಿಕೊಂಡಿರುವುದು ವಿಪರ್ಯಾಸ

ಬೆಂಗಳೂರು: ಕೇಂದ್ರ ಸಚಿವರು ಪಲಾನುಭವಿಗಳ ಆಯ್ಕೆಗೆ ಮತಪಟ್ಟಿ ಯಲ್ಲಿ ಹೆಸರು ಜೋಡಣೆ ಮಾಡುವಂತಹ ಚಿಂತನೆಯ ಬಗ್ಗೆ ವಿರೋಧ ಮಾಡಿರುವ ಲೊಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಅವರದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ವೋಟರ್ ಲಿಸ್ಟ್ ನಲ್ಲಿ ಹೆಸರು ಇರುವವರಿಗೆ ಮಾತ್ರ ಗ್ಯಾರೆಂಟಿ ಅನ್ವಯಿಸುತ್ತದೆ ಎಂದು ಸಿಎಂ ಹೇಳಿರುವ ಬಗ್ಗೆ ರಾಹುಲ್ ಗಾಂಧಿಯವರು ಕಣ್ಣು ಮುಚ್ಚಿಕೊಂಡು ಕೇಂದ್ರದ ವಿರುದ್ದ ಟೀಕೆ ಮಾಡುವುದಕ್ಕೋಸ್ಕರ ವಿರೋಧ ಮಾಡುತ್ತಿರುವಂತದ್ದು ಅತ್ಯಂತ ವಿಪರ್ಯಾಸ ಇದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಎಕ್ಸ್ ಮಾಡಿರುವ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ​ರಾಹುಲ್ ಗಾಂಧಿಯವರು, ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಸಚಿವರಾದ ರಾಜೀವ್ ರಂಜನ್ (ಲಲನ್) ಸಿಂಗ್ ಅವರು, ಪಲಾನುಭವಿಗಳ ಆಯ್ಕೆಗೆ ಮತಪಟ್ಟಿ ಯಲ್ಲಿ ಹೆಸರನ್ನು ಜೋಡಣೆ ಮಾಡುವಂತಹ ಚಿಂತನೆ ಇದೆ ಅಂತ ಮಾತ್ರ ಹೇಳಿದ್ದಾರೆ. ಇನ್ನೂ ಅದನ್ನು ಆದೇಶ ಕೂಡ ಮಾಡಿಲ್ಲ. ಆಗಲೇ ರಾಹುಲ್ ಗಾಂಧಿಯವರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಇದೇ ಒಂದು ಚಿಂತನೆ ಮತ್ತು ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟ ಮಾಡಿದ್ದಾರೆ. ಕರ್ನಾಟಕದಲ್ಲಿ ಗ್ಯಾರೆಂಟಿ ಮತ್ತು ಇತರ ಫಲಾನುಭವಿಗಳಿಗೆ ವೋಟರ್ ಲಿಸ್ಟ್ ನಲ್ಲಿ ಹೆಸರು ಇರುವವರಿಗೆ ಮಾತ್ರ ಅದು ಅನ್ವಯಿಸುತ್ತದೆ ಅನ್ನುವಂತ ಮಾತನ್ನು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಹುಲ್ ಗಾಂಧಿಯವರು ತಮ್ಮ ರಾಜ್ಯದಲ್ಲಿಯೇ ನಡೆಯುತ್ತಿರುವುದರ ಬಗ್ಗೆ ಕಣ್ಣು ಮುಚ್ಚಿಕೊಂಡು ಕೇಂದ್ರದ ವಿರುದ್ದ ಟೀಕೆ ಮಾಡುವುದಕ್ಕೋಸ್ಕರ ವಿರೋಧ ಮಾಡುತ್ತಿರುವಂತದ್ದು ಅತ್ಯಂತ ವಿಪರ್ಯಾಸ. ಹಲವಾರು ಈ ರೀತಿಯ ಪ್ರಕರಣಗಳಿವೆ. ಅವರ ಸ್ವಂತ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವುದನ್ನು ಅವರು ಕೇಂದ್ರದಿಂದ ಅಪೇಕ್ಷೆ ಮಾಡುತ್ತಿರುವಂತದ್ದು ನಿಜವಾಗಲೂ ಕೂಡ ಅವರು ಎಲ್ಲ ವಿಷಯದಲ್ಲಿ ರಾಜಕೀಯ ಮಾಡುರುವುದು ಬಹಳ ಸ್ಪಷ್ಟವಾಗಿದೆ. ಇದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular