HomeLatest News2018ರ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ‘ಆ ಸ್ಯಾಂಡ್‌ಪೇಪರ್ ಹಗರಣದಲ್ಲಿ ಇಡೀ ತಂಡವೇ ಶಾಮೀಲಾಗಿತ್ತು’...

2018ರ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ‘ಆ ಸ್ಯಾಂಡ್‌ಪೇಪರ್ ಹಗರಣದಲ್ಲಿ ಇಡೀ ತಂಡವೇ ಶಾಮೀಲಾಗಿತ್ತು’ ಎಂದ ಖವಾಜಾ!

ವರ್ಷಗಳ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಬೆಚ್ಚಿಬೀಳಿಸಿದ್ದ 2018ರ ಸ್ಯಾಂಡ್‌ಪೇಪರ್ ಅಥವಾ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಬ್ರೇಕಿಂಗ್ ಹೇಳಿಕೆ ನೀಡಿದ್ದಾರೆ. ಕೇಪ್‌ಟೌನ್‌ ಟೆಸ್ಟ್ ಪಂದ್ಯದ ವೇಳೆ ನಡೆದ ಈ ವಿವಾದದಲ್ಲಿ ಇಡೀ ತಂಡವೇ ಭಾಗಿಯಾಗಿತ್ತು ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಕೇವಲ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಅವರನ್ನು ಮಾತ್ರ ತಪ್ಪಿತಸ್ಥರೆಂದು ಮಾಡಿ ಶಿಕ್ಷೆ ವಿಧಿಸಿತ್ತು. ಆದರೆ ಈ ಕುರಿತು ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಖವಾಜಾ, “ಆ ಪಂದ್ಯದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವು. ಕೇವಲ ಬ್ಯಾಟರ್‌ಗಳು, ಬೌಲರ್‌ಗಳು ಅಥವಾ ಸಪೋರ್ಟ್ ಸ್ಟಾಫ್ ಮಾತ್ರವಲ್ಲ, ಇಡೀ ತಂಡವೇ ಅದರಲ್ಲಿ ಸೇರಿತ್ತು,” ಎಂದು ಹೇಳಿದ್ದಾರೆ.

ಎಂಟು ವರ್ಷಗಳು ಕಳೆದರೂ ಸತ್ಯ ಹೊರಬರದಿದ್ದಾಗ, ಶಿಕ್ಷೆಗೆ ಒಳಗಾದ ಮೂವರು ಆಟಗಾರರಿಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ ತಾವು ಈ ವಿಷಯವನ್ನು ಬಹಿರಂಗಪಡಿಸುತ್ತಿರುವುದಾಗಿ ಖವಾಜಾ ಸ್ಪಷ್ಟಪಡಿಸಿದ್ದಾರೆ. ಅಂದು ಪಂದ್ಯ ಮುಗಿದ ಬಳಿಕ ಡೆಸಿಂಗ್ ರೂಮ್‌ನಲ್ಲೇ ಇಡೀ ತಂಡ ಜಂಟಿಯಾಗಿ ಜವಾಬ್ದಾರಿ ಹೊರಬೇಕೆಂದು ತಾವು ಸಲಹೆ ನೀಡಿದ್ದಾಗಿಯೂ, ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಮೂವರನ್ನು ಮಾತ್ರ ಬಲಿಪಶು ಮಾಡಿತು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ ತನಿಖೆ ನಡೆಸಿದ ಮಂಡಳಿಯ ಅಧಿಕಾರಿಗಳು ತಮ್ಮನ್ನು ವಿಚಾರಣೆಗೇ ಒಳಪಡಿಸಿರಲಿಲ್ಲ. ಬ್ಯಾನ್‌ಕ್ರಾಫ್ಟ್ ಪಕ್ಕದಲ್ಲೇ ಕುಳಿತಿದ್ದರೂ ತಮ್ಮನ್ನು ತನಿಖೆಯಿಂದ ದೂರವಿಡಲಾಗಿತ್ತು, ಏಕೆಂದರೆ ತಾವು ಸತ್ಯವನ್ನು ಮುಚ್ಚಿಡದೆ ಸಂಪೂರ್ಣ ಸತ್ಯವನ್ನು ಹೇಳಿಬಿಡುತ್ತೇವೆ ಎಂಬ ಭಯ ಅವರಿಗಿತ್ತು ಎಂದು ಖವಾಜಾ ಆರೋಪಿಸಿದ್ದಾರೆ. ಇದರಿಂದಾಗಿ ಮೂವರು ಆಟಗಾರರು ಸುಮ್ಮನೆ ನಿಂದನೆಗೆ ಒಳಗಾಗುವಂತಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular