HomeAutoದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್: 7 -ಸೀಟರ್ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ ಬರೋಬ್ಬರಿ 4.1...

ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್: 7 -ಸೀಟರ್ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ ಬರೋಬ್ಬರಿ 4.1 ಲಕ್ಷ ರೂ. ಭಾರಿ ಕಡಿತ!

ನವದೆಹಲಿ: ದೀಪಾವಳಿ ಹಬ್ಬದ ಬೆನ್ನಲ್ಲೇ 7 ಸೀಟರ್ ಎಲೆಕ್ಟ್ರಿಕ್ ಕಾರಿನ ದರ ಭಾರಿ ಕಡಿತವಾಗಿದೆ. ಭಾರತದಲ್ಲಿ ವಾಹನ ಖರೀದಿದಾರರನ್ನು ಸೆಳೆಯಲು ಆಟೋಮೊಬೈಲ್ ಕಂಪನಿಗಳು ಭರ್ಜರಿ ಆಫರ್‌ಗಳನ್ನು ನೀಡುತ್ತಿವೆ. ಸುಮಾರು ಆರು ತಿಂಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ವಿಯೆಟ್ನಾಂನ ಇವಿ ದೈತ್ಯ ವಿನ್ ಫಾಸ್ಟ್ (VinFast) ತನ್ನ 7-ಸೀಟರ್ ಎಲೆಕ್ಟ್ರಿಕ್ ಮಲ್ಟಿ-ಪರ್ಪಸ್ ವೆಹಿಕಲ್ ‘MPV 7’ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.

ಕಂಪನಿಯು ಈ ಕಾರನ್ನು ಆರಂಭದಲ್ಲಿ ₹24.49 ಲಕ್ಷ (Ex-showroom) ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಇದೀಗ ಹಬ್ಬದ ಸೀಸನ್ ಪ್ರಯುಕ್ತ ಇದರ ಬೆಲೆಯನ್ನು ನೇರವಾಗಿ ₹20.39 ಲಕ್ಷಕ್ಕೆ ಇಳಿಸಿದೆ. ಈ ಮೂಲಕ ಬೆಲೆಯಲ್ಲಿ ₹4.1 ಲಕ್ಷದಷ್ಟು ಭಾರಿ ರಿಯಾಯಿತಿ ಸಿಕ್ಕಂತಾಗಿದೆ. ಬೆಲೆ ಕಡಿಮೆಯಾಗಿದ್ದರೂ ಕಾರಿನ ಯಾವುದೇ ತಾಂತ್ರಿಕ ವೈಶಿಷ್ಟ್ಯ ಅಥವಾ ಫೀಚರ್ಸ್‌ಗಳಲ್ಲಿ ಕಂಪನಿ ಯಾವುದೇ ಬದಲಾವಣೆ ಮಾಡಿಲ್ಲ.

ಸ್ಪರ್ಧಿಗಳಿಗಿಂತ ಅತ್ಯಂತ ಕಡಿಮೆ ಬೆಲೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ 3 – ಸಾಲಿನ ಸೀಟಿಂಗ್ (Three rows of seating) ವ್ಯವಸ್ಥೆ ಹೊಂದಿರುವ ಇತರ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ ವಿನಫಾಸ್ಟ್ VF MPV 7 ಬೆಲೆ ಕೊಂಚ ದುಬಾರಿಯಾಗಿತ್ತು. ಆದರೆ, ಈ ಹೊಸ ದರ ಕಡಿತದ ನಂತರ ಈ ಕಾರು ಸಾಮಾನ್ಯ ಗ್ರಾಹಕರಿಗೂ ಕೈಗೆಟುಕುವಂತಾಗಿದೆ. ವಿಶೇಷವೆಂದರೆ, ಭಾರತದಲ್ಲಿ ಈ ಮಾಡೆಲ್ ಕೇವಲ ಒಂದೇ ಒಂದು ಫುಲ್ಲಿ-ಲೋಡೆಡ್ (Fully-loaded) ಹೈ-ಎಂಡ್ ವೇರಿಯೆಂಟ್‌ನಲ್ಲಿ ಮಾತ್ರ ಮಾರಾಟವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇದರ ಪ್ರತಿಸ್ಪರ್ಧಿ ಕಾರುಗಳ ಟಾಪ್-ಸ್ಪೆಕ್ (Top-spec) ಆವೃತ್ತಿಗಳಿಗೆ ಹೋಲಿಸಿದರೆ ವಿನಫಾಸ್ಟ್ ಈಗ ಬರೋಬ್ಬರಿ ₹9.76 ಲಕ್ಷದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಮಾರಾಟ ಹೆಚ್ಚಿಸಲು ಕಂಪನಿಯ ಹೊಸ ಕಾರ್ಯತಂತ್ರ:

ಭಾರತದಲ್ಲಿ ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಮತ್ತು ಮಾರಾಟ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ ಬಿಡುಗಡೆಯಾದಾಗಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ವಿನಫಾಸ್ಟ್ VF MPV 7 ಕಾರಿನ ಮಾರಾಟ ಪ್ರಕ್ರಿಯೆಯು ನಿರೀಕ್ಷಿತ ಮಟ್ಟ ತಲುಪದೇ ತಣ್ಣಗಾಗಿತ್ತು. ಹಾಗಾಗಿ ಗ್ರಾಹಕರನ್ನು ಆಕರ್ಷಿಸಲು ಮತ್ತು ಹಬ್ಬದ ದಿನಗಳಲ್ಲಿ ಹೆಚ್ಚಿನ ಮಾರಾಟದ ಗುರಿ ತಲುಪಲು ಕಂಪನಿಯು ಈ ಬೆಲೆ ಕಡಿತದ ಮಾಸ್ಟರ್ ಪ್ಲಾನ್ ಜಾರಿಗೆ ತಂದಿದೆ. ಗ್ರಾಹಕರ ಖರೀದಿ ಚಟುವಟಿಕೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಈ ನಿರ್ಧಾರ ಕಂಪನಿಗೆ ವರದಾನವಾಗುವ ಸಾಧ್ಯತೆ ಇದೆ.

ವಿನಫಾಸ್ಟ್ VF MPV 7 ಎಂಜಿನ್ ಮತ್ತು ಬ್ಯಾಟರಿ ಸಾಮರ್ಥ್ಯ: ಈ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರಿನಲ್ಲಿ ಶಕ್ತಿಶಾಲಿ 60.13 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ (Battery Pack) ಬಳಸಲಾಗಿದೆ. ಇದು ಕಾರಿನ ಮುಂಭಾಗದ ಆಕ್ಸಲ್‌ನಲ್ಲಿರುವ ಎಲೆಕ್ಟ್ರಿಕ್ ಮೋಟಾರ್‌ಗೆ ಪವರ್ ನೀಡುತ್ತದೆ. ಈ ಎಲೆಕ್ಟ್ರಿಕ್ ಪವರ್‌ಟ್ರೇನ್ ಬರೋಬ್ಬರಿ 201 bhp ಪವರ್ ಮತ್ತು 280 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ವೇಗದ ವಿಚಾರದಲ್ಲೂ ಈ ಕಾರು ಸೈ ಎನಿಸಿಕೊಂಡಿದ್ದು, ಕೇವಲ 9 ಸೆಕೆಂಡುಗಳಲ್ಲಿ 0 ಇಂದ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ ಹಾಗೂ ಇದರ ಗರಿಷ್ಠ ವೇಗ ಗಂಟೆಗೆ 140 ಕಿಮೀ ಆಗಿದೆ. ಅತ್ಯಂತ ಪ್ರಮುಖವಾಗಿ ಈ ಕಾರನ್ನು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಬರೋಬ್ಬರಿ 517 ಕಿಲೋಮೀಟರ್ ವರೆಗೆ ಚಲಿಸಬಹುದು (Range) ಎಂದು ಕಂಪನಿ ಪ್ರಮಾಣೀಕರಿಸಿದೆ. ಚಾರ್ಜಿಂಗ್ ಸುಲಭಗೊಳಿಸಲು ಇದು 6.9 kW AC ಚಾರ್ಜಿಂಗ್ ಮತ್ತು 80 kW ವೇಗದ DC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಬೆಂಬಲಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular