HomeLatest Newsನನ್ನ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ ಜೋ ರೂಟ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತೆರೆದಿಟ್ಟ ಮನದ...

ನನ್ನ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ ಜೋ ರೂಟ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತೆರೆದಿಟ್ಟ ಮನದ ಮಾತು!

ಇಂಗ್ಲೆಂಡ್‌ನ ಜೋ ರೂಟ್ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಮಹಾನ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಸಾರ್ವ ಕಾಲಿಕ ರನ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಈ ಕುರಿತು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿರುವ ತೆಂಡೂಲ್ಕರ್, ರೂಟ್ ಪಾದಾರ್ಪಣೆ ಮಾಡಿದ ದಿನದಿಂದಲೇ ಅವರ ಪ್ರತಿಭೆಯ ಬಗ್ಗೆ ತಮಗೆ ಅಪಾರ ಗೌರವವಿತ್ತು ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ನಡೆದ ಪ್ರಶ್ನೋತ್ತರ ಸಂವಾದದಲ್ಲಿ ಭಾಗವಹಿಸಿದ್ದ ಸಚಿನ್, “ನಾನು ಯಾವಾಗಲೂ ರೂಟ್ ಬ್ಯಾಟಿಂಗ್ ಶೈಲಿಯನ್ನು ಗೌರವಿಸುತ್ತೇನೆ. 2012 ರ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಅವರು ಪಾದಾರ್ಪಣೆ ಮಾಡಿದಾಗಲೇ ದೊಡ್ಡ ಮಟ್ಟದ ಸಾಧನೆ ಮಾಡಲಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಅರಿವಾಗಿತ್ತು” ಎಂದು ನೆನಪಿಸಿಕೊಂಡಿದ್ದಾರೆ.

ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ 169 ಪಂದ್ಯಗಳನ್ನಾಡಿರುವ ರೂಟ್ 14,278 ರನ್ ಗಳಿಸಿದ್ದು, ಸಚಿನ್ ಅವರ 15,921 ರನ್‌ಗಳ ವಿಶ್ವ ದಾಖಲೆಯಿಂದ ಕೇವಲ 1,643 ರನ್‌ಗಳಷ್ಟೇ ಹಿಂದುಳಿದಿದ್ದಾರೆ. ಸಚಿನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೊದಲು 200 ಪಂದ್ಯಗಳಿಂದ ಈ ಬೃಹತ್ ಮೊತ್ತವನ್ನು ಕಲೆಹಾಕಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂವಾದದ ವೇಳೆ ತಮ್ಮಿಷ್ಟದ ವಿದೇಶಿ ಆಟಗಾರರನ್ನು ಹೆಸರಿಸಿದ ತೆಂಡೂಲ್ಕರ್, ಹ್ಯಾರಿ ಬ್ರೂಕ್, ಜೋ ರೂಟ್ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ಆಟವನ್ನು ಮೆಚ್ಚಿಕೊಂಡರು.

ಇದೇ ವೇಳೆ ಏಕದಿನ ಕ್ರಿಕೆಟ್ ಸ್ವರೂಪಕ್ಕೆ ಹೊಸ ಜೀವ ನೀಡಲು 50 ಓವರ್‌ಗಳ ಪಂದ್ಯವನ್ನು ತಲಾ 25 ಓವರ್‌ಗಳ ಎರಡು ಇನಿಂಗ್ಸ್‌ಗಳಾಗಿ ವಿಂಗಡಿಸುವ ತಮ್ಮ ಹಳೆಯ ಸಲಹೆಯನ್ನು ಸಚಿನ್ ಮರುಪರಿಶೀಲಿಸಿದರು. ಈ ನಿಯಮದಿಂದ ಹಿಮದ (Dew) ಪ್ರಭಾವ ಸಮಾನವಾಗಿ ಹಂಚಿಕೆಯಾಗಿ ಬ್ಯಾಟರ್ ಹಾಗೂ ಬೌಲರ್ ಇಬ್ಬರಿಗೂ ಸಮಾನ ಅವಕಾಶ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular