ವಾಷಿಂಗ್ಟನ್: ಮಂಗಳವಾರ ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಭರ್ಜರಿ ಜಯ ಸಾಧಿಸುವ ಮೂಲಕ ಅಮೆರಿಕ ಕಾಂಗ್ರೆಸ್‌ನ ಸಂಪೂರ್ಣ ನಿಯಂತ್ರಣವನ್ನು ತನ್ನ ಕೈವಶ ಮಾಡಿಕೊಂಡಿದೆ. ಈ ಫಲಿತಾಂಶವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷಕ್ಕೆ ತೀವ್ರ ಹಿನ್ನಡೆಯನ್ನು ಉಂಟುಮಾಡಿದೆ.
ಈ ಡೆಮಾಕ್ರಟಿಕ್ ಅಲೆಯು, ಆರ್ಥಿಕತೆಯನ್ನು ನಿರ್ವಹಿಸುವಲ್ಲಿ ಅಧ್ಯಕ್ಷ ಟ್ರಂಪ್ ಅವರ ವೈಫಲ್ಯ ಹಾಗೂ ಇರಾನ್ ವಿರುದ್ಧ ಯುದ್ಧ ಸಾರುವ ಅವರ ನಿರ್ಧಾರದ ಬಗ್ಗೆ ಮತದಾರರಿಗಿದ್ದ ತೀವ್ರ ಅಸಮಾಧಾನವನ್ನು ಎತ್ತಿ ತೋರಿಸಿದೆ. ಇರಾನ್ ವಿರುದ್ಧದ ಯುದ್ಧದ ನಿರ್ಧಾರದಿಂದಾಗಿ ಇಂಧನ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದವು.
ಯುಎಸ್ ಮಧ್ಯಂತರ ಚುನಾವಣಾ ಫಲಿತಾಂಶ: ಪ್ರಮುಖರು ಹಾಗೂ ಭಾರತೀಯ ಮೂಲದ ವಿಜೇತರು
ಜಾನ್ ಒಸ್ಸಾಫ್ -ಜಾರ್ಜಿಯಾ -ಡೆಮಾಕ್ರಟಿಕ್ ಪಾರ್ಟಿ
ಕ್ರಿಸ್ ಪಪ್ಪಾಸ್ -ನ್ಯೂ ಹ್ಯಾಂಪ್‌ಶೈರ್ -ಡೆಮಾಕ್ರಟಿಕ್ ಪಾರ್ಟಿ
ರಾಯ್ ಕೂಪರ್ -ನಾರ್ತ್ ಕೆರೊಲಿನಾ -ಡೆಮಾಕ್ರಟಿಕ್ ಪಾರ್ಟಿ
ಸುಹಾಸ್ ಸುಬ್ರಮಣ್ಯಂ -ವರ್ಜೀನಿಯಾದ 10 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಹರ್ಬ್ ಕೊನವೇ -ನ್ಯೂಜೆರ್ಸಿಯ 3 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಸೇಥ್ ಮ್ಯಾಗಜೀನರ್ ರೋಡ್ -ಐಲೆಂಡ್‌ನ 2 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಜಿಮ್ಮಿ ಪ್ಯಾಟ್ರೋನಿಸ್ -ಫ್ಲೋರಿಡಾದ 1 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ರಿಪಬ್ಲಿಕನ್ ಪಾರ್ಟಿ
ಆಶ್ಲೇ ಮೂಡಿ -ಫ್ಲೋರಿಡಾ -ರಿಪಬ್ಲಿಕನ್ ಪಾರ್ಟಿ
ಲಾರೆಲ್ ಲೀ -ಫ್ಲೋರಿಡಾದ 15 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ರಿಪಬ್ಲಿಕನ್ ಪಾರ್ಟಿ
ಪಿಯಾ ದಾಂಡಿಯಾ -ಫ್ಲೋರಿಡಾದ 22 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ರೆಬೆಕ್ಕಾ ಬೆನೆಟ್ -ನ್ಯೂಜೆರ್ಸಿಯ 7 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಆನಿ ಆಂಡ್ರ್ಯೂಸ್ -ಸೌತ್ ಕೆರೊಲಿನಾ -ಡೆಮಾಕ್ರಟಿಕ್ ಪಾರ್ಟಿ
ಜೇಮ್ಸ್ ತಲಾರಿಕೊ -ಟೆಕ್ಸಾಸ್ -ಡೆಮಾಕ್ರಟಿಕ್ ಪಾರ್ಟಿ
ಶೆರಾಡ್ ಬ್ರೌನ್ -ಓಹಿಯೋ -ಡೆಮಾಕ್ರಟಿಕ್ ಪಾರ್ಟಿ
ಆಡಮ್ ಹ್ಯಾಮಿಲ್ಟನ್ -ಕಾನ್ಸಾಸ್ -ಡೆಮಾಕ್ರಟಿಕ್ ಪಾರ್ಟಿ
ಜೋಶ್ ಟುರೆಕ್ -ಅಯೋವಾ -ಡೆಮಾಕ್ರಟಿಕ್ ಪಾರ್ಟಿ
ಡೇವಿಡ್ ಕ್ರೌಲಿ -ವಿಸ್ಕಾನ್ಸಿನ್ -ಡೆಮಾಕ್ರಟಿಕ್ ಪಾರ್ಟಿ
ಸಾರಾ ಟ್ರೋನ್ ಗ್ಯಾರಿಯಟ್ -ಅಯೋವಾದ 3ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಬೆನ್ ಮ್ಯಾಕ್ ಆಡಮ್ಸ್- ಉತಾಹ್‌ನ 1ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಬಾಬಿ ಪುಲಿಡೊ -ಟೆಕ್ಸಾಸ್‌ನ 15ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಜೂಲಿಯಾ ಲೆಟ್ಲೋ -ಲೂಸಿಯಾನ -ರಿಪಬ್ಲಿಕನ್ ಪಾರ್ಟಿ
ಪೆಗ್ಗಿ ಫ್ಲಾನಗನ್ -ಮಿನ್ನೇಸೋಟ -ಡೆಮಾಕ್ರಟಿಕ್ ಪಾರ್ಟಿ
ಅಬ್ದುಲ್ ಎಲ್-ಸಯೀದ್ -ಮಿಚಿಗನ್ -ಡೆಮಾಕ್ರಟಿಕ್ ಪಾರ್ಟಿ
ಅಮಿ ಬೆರಾ -ಕ್ಯಾಲಿಫೋರ್ನಿಯಾದ 3ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ -ಡೆಮಾಕ್ರಟಿಕ್ ಪಾರ್ಟಿ
ಯುಎಸ್ ಮಧ್ಯಾವಧಿ ಚುನಾವಣೆಯ ಗವರ್ನರ್‌ಶಿಪ್ ವಿಜೇತರ ಪೂರ್ಣ ಪಟ್ಟಿ
ಆಮಿ ಆಕ್ಟನ್ -ಓಹಿಯೋ -ಡೆಮಾಕ್ರಟಿಕ್ ಪಕ್ಷ
ಆಮಿ ಕ್ಲೋಬುಚಾರ್ -ಮಿನ್ನೇಸೋಟ -ಡೆಮಾಕ್ರಟಿಕ್ ಪಕ್ಷ
ಫಿಲ್ ಸ್ಕಾಟ್ -ವರ್ಮೊಂಟ್ -ರಿಪಬ್ಲಿಕನ್ ಪಕ್ಷ
ಗಿನಾ ಹಿನೋಜೋಸಾ -ಟೆಕ್ಸಾಸ್ -ಡೆಮಾಕ್ರಟಿಕ್ ಪಕ್ಷ
ಕೀಶಾ ಲ್ಯಾನ್ಸ್ ಬಾಟಮ್ಸ್ -ಜಾರ್ಜಿಯಾ -ಡೆಮಾಕ್ರಟಿಕ್ ಪಕ್ಷ
ಮಾರ್ಷಾ ಬ್ಲಾಕ್ ಬರ್ನ್ -ಟೆನ್ನೆಸ್ಸೀ -ರಿಪಬ್ಲಿಕನ್ ಪಕ್ಷ
ಕ್ಸೇವಿಯರ್ ಬೆಸೆರಾ -ಕ್ಯಾಲಿಫೋರ್ನಿಯಾ -ಡೆಮಾಕ್ರಟಿಕ್ ಪಕ್ಷ
ಕೆಲ್ಲಿ ಅಯೊಟ್ಟೆ -ನ್ಯೂ ಹ್ಯಾಂಪ್‌ಶೈರ್ -ರಿಪಬ್ಲಿಕನ್ ಪಕ್ಷ
ಅಲನ್ ವಿಲ್ಸನ್ -ಸೌತ್ ಕೆರೊಲಿನಾ -ರಿಪಬ್ಲಿಕನ್ ಪಕ್ಷ
ಕೇಟೀ ಹಾಬ್ಸ್ -ಅರಿಜೋನಾ -ಡೆಮಾಕ್ರಟಿಕ್ ಪಕ್ಷ
ಟೀನಾ ಕೋಟೆಕ್ -ಒರೆಗಾನ್ -ಡೆಮಾಕ್ರಟಿಕ್ ಪಕ್ಷ
ಜಿಮ್ ಪಿಲ್ಲೆನ್ -ನೆಬ್ರಸ್ಕಾ -ರಿಪಬ್ಲಿಕನ್ ಪಕ್ಷ
ಆರನ್ ಫೋರ್ಡ್ -ನೆವಾಡಾ -ಡೆಮಾಕ್ರಟಿಕ್ ಪಕ್ಷ
ಜೋಸೆಲಿನ್ ಬೆನ್ಸನ್ -ಮಿಚಿಗನ್ -ಡೆಮಾಕ್ರಟಿಕ್ ಪಕ್ಷ
ಮೂವರು ಭಾರತೀಯ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಗೆಲುವು; ವಿವೇಕ್ ರಾಮಸ್ವಾಮಿ ಹಿನ್ನಡೆ
ಅಮೆರಿಕದಲ್ಲಿ ನಡೆದ 2026ರ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಹಲವು ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಭಾರತೀಯ ಮೂಲದ ಅಮೆರಿಕನ್ನರ ಸ್ಪರ್ಧೆಯೂ ಈ ಬಾರಿಯ ಚುನಾವಣೆಯಲ್ಲಿ ಗಮನ ಸೆಳೆದಿದೆ. ಡೆಮಾಕ್ರಟಿಕ್ ಪಕ್ಷದ ಮೂವರು ಭಾರತೀಯ ಮೂಲದ ಅಭ್ಯರ್ಥಿಗಳು ಗೆಲುವು ಅಥವಾ ಮರು ಆಯ್ಕೆಯಾಗಿದ್ದು, ರಿಪಬ್ಲಿಕನ್ ಪಕ್ಷದ ವಿವೇಕ್ ರಾಮಸ್ವಾಮಿ ಅವರು ಓಹಿಯೋ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಆಮಿ ಆಕ್ಟನ್ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ.
ಪಿಯಾ ದಾಂಡಿಯಾ -ಫ್ಲೋರಿಡಾದ 22ನೇ ಕಾಂಗ್ರೆಸ್ ಕ್ಷೇತ್ರದಲ್ಲಿ ಗೆಲುವು
ಸುಹಾಸ್ ಸುಬ್ರಮಣ್ಯಂ -ವರ್ಜೀನಿಯಾದ 10ನೇ ಕಾಂಗ್ರೆಸ್ ಕ್ಷೇತ್ರದಿಂದ ಮರು ಆಯ್ಕೆ
ರೋ ಖನ್ನಾ -ಕ್ಯಾಲಿಫೋರ್ನಿಯಾದ 17ನೇ ಕ್ಷೇತ್ರದಿಂದ ಮರು ಆಯ್ಕೆ
ಅಮಿ ಬೇರಾ – ಕ್ಯಾಲಿಫೋರ್ನಿಯಾದ 3ನೇ ಕ್ಷೇತ್ರದಿಂದ ಎಂಟನೇ ಅವಧಿಗೆ ಆಯ್ಕೆ
ಪ್ರಮೀಳಾ ಜಯಪಾಲ್ – ವಾಷಿಂಗ್ಟನ್‌ನ 7ನೇ ಕ್ಷೇತ್ರದಿಂದ ಆರನೇ ಅವಧಿಗೆ ಆಯ್ಕೆ
ಅರುಣಾ ಮಿಲ್ಲರ್ – ಮೇರಿಲ್ಯಾಂಡ್ ಲೆಫ್ಟಿನೆಂಟ್ ಗವರ್ನರ್ ಆಗಿ ಮರು ಆಯ್ಕೆ
ಫ್ಲೋರಿಡಾದಲ್ಲಿ ಪಿಯಾ ದಾಂಡಿಯಾ ಅವರು ರಿಪಬ್ಲಿಕನ್ ಅಭ್ಯರ್ಥಿ ಕೇಸಿ ಅಸ್ಕರ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಅಮೆರಿಕದ ಕಾಂಗ್ರೆಸ್ ಪ್ರವೇಶಿಸಿದ್ದಾರೆ. ವರ್ಜೀನಿಯಾದಲ್ಲಿ ಸುಹಾಸ್ ಸುಬ್ರಮಣ್ಯಂ ಅವರು ಡೇವ್ ಬೆಕ್ವಿತ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ವಿವೇಕ್ ರಾಮಸ್ವಾಮಿಗೆ ಸೋಲು
ಈ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದ ಪೈಪೋಟಿಗಳಲ್ಲಿ ಓಹಿಯೋ ರಾಜ್ಯದ ಗವರ್ನರ್ ಚುನಾವಣೆ ಪ್ರಮುಖವಾಗಿತ್ತು. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಉದ್ಯಮಿ ವಿವೇಕ್ ರಾಮಸ್ವಾಮಿ ಅವರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ನೀಡಿದ್ದರು.
ಆದರೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಮಿ ಆಕ್ಟನ್ ಅವರು ರಾಮಸ್ವಾಮಿ ಅವರನ್ನು ಸೋಲಿಸಿ ಓಹಿಯೋ ರಾಜ್ಯದ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಓಹಿಯೋದಲ್ಲಿ 2006ರ ನಂತರ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೊಬ್ಬರು ಗವರ್ನರ್ ಸ್ಥಾನ ಗೆದ್ದಂತಾಗಿದೆ. ಅಲ್ಲದೆ, ರಾಜ್ಯದ ಮೊದಲ ಮಹಿಳಾ ಗವರ್ನರ್ ಎಂಬ ಹೆಗ್ಗಳಿಕೆಗೂ ಆಮಿ ಆಕ್ಟನ್ ಪಾತ್ರರಾಗಿದ್ದಾರೆ.
ಅಮೆರಿಕ ಕಾಂಗ್ರೆಸ್‌ನಲ್ಲಿ ಅಧಿಕಾರ ಬದಲಾವಣೆ
ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಅಮೆರಿಕದ ಪ್ರತಿನಿಧಿಗಳ ಸಭೆಯ 435 ಸ್ಥಾನಗಳು, ಸೆನೆಟ್‌ನ 35 ಸ್ಥಾನಗಳು ಹಾಗೂ 36 ರಾಜ್ಯಗಳ ಗವರ್ನರ್ ಹುದ್ದೆಗಳಿಗೆ ಚುನಾವಣೆ ನಡೆದಿದೆ.
ಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಡೆಮಾಕ್ರಟಿಕ್ ಪಕ್ಷ ಬಹುಮತ ಗಳಿಸಿರುವುದಾಗಿ ವರದಿಗಳು ತಿಳಿಸಿವೆ. ಇದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಮುಂದಿನ ಎರಡು ವರ್ಷಗಳ ಕಾರ್ಯವೈಖರಿಗೆ ಕಾಂಗ್ರೆಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಹೆಚ್ಚಿನ ಸವಾಲು ಎದುರಾಗುವ ಸಾಧ್ಯತೆಯಿದೆ.
ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರು 2027ರ ಜನವರಿ 3ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸೂಚನೆ: ಈ ವರದಿಯಲ್ಲಿ ಲಭ್ಯವಾದ ನವೆಂಬರ್ 4ರ ಚುನಾವಣಾ ವರದಿಗಳ ಆಧಾರದಲ್ಲಿ ಗೆಲುವು ಖಚಿತಗೊಂಡಿರುವ ಪ್ರಮುಖ ಅಭ್ಯರ್ಥಿಗಳನ್ನು ಪಟ್ಟಿ ಮಾಡಲಾಗಿದೆ. ಕೆಲವು ಇತರ ಕ್ಷೇತ್ರಗಳ ಫಲಿತಾಂಶಗಳು ಪ್ರಕಟವಾಗುವ ಹಂತದಲ್ಲಿದ್ದವು.

