ಸ್ಯಾಂಡಲ್ವುಡ್ನ ಜನಪ್ರಿಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಲಕ್ಷ್ಮಿಪುತ್ರ’ ಚಿತ್ರದ ‘ಐ ಲವ್ ಯು ಪರಿಮಳ’ ಎಂಬ ರೊಮ್ಯಾಂಟಿಕ್ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎಪಿ ಅರ್ಜುನ್ ಈ ಚಿತ್ರವನ್ನು ನಿರ್ಮಿಸಿದ್ದು, ರವಿಕಿರಣ್ ಎಂ ಗೌಡ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ವಿಜಯ್ ಎಸ್ ಸ್ವಾಮಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಖ್ಯಾತ ನಿರ್ದೇಶಕ ಎಪಿ ಅರ್ಜುನ್ ಕಥೆ ಮತ್ತು ಸಾಹಿತ್ಯ ಬರೆದಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಆಕರ್ಷಕ ಹಾಡಿಗೆ ಗಾಯಕ ನವೀನ್ ಸಜ್ಜು ತಮ್ಮ ವಿಶಿಷ್ಟ ಕಂಠದಲ್ಲಿ ಜೀವ ತುಂಬಿದ್ದಾರೆ. ಈ ಹಾಡಿನಲ್ಲಿ ಚಿಕ್ಕಣ್ಣ ಮತ್ತು ನಾಯಕಿ ವಂದಿತಾ ಗೌಡ ಜೋಡಿಯ ಕೆಮಿಸ್ಟ್ರಿ ಜೊತೆಗೆ ಭೂಷಣ್ ಅವರ ನೃತ್ಯ ನಿರ್ದೇಶನ ಗಮನ ಸೆಳೆಯುತ್ತಿದೆ.
ಚಿತ್ರದಲ್ಲಿ ತಾರಾ ಅನುರಾಧಾ, ಕುರಿ ಪ್ರತಾಪ್, ಧರ್ಮಣ್ಣ, ಮನು ಹಾಗೂ ಮಿತ್ರ ಸೇರಿದಂತೆ ದಂಡು ಪ್ರಮುಖ ಪಾತ್ರಗಳಲ್ಲಿ ನಟಿಸಿದೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸಂಭಾಷಣೆಯನ್ನು ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಜಂಟಿಯಾಗಿ ಬರೆದಿದ್ದಾರೆ.

