HomeKarnatakaಗೂಗಲ್ ಲೆನ್ಸ್ ಆ್ಯಪ್ ಬಳಸಿ ವಿಎ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪರ್: ಅಭ್ಯರ್ಥಿ ಅರೆಸ್ಟ್

ಗೂಗಲ್ ಲೆನ್ಸ್ ಆ್ಯಪ್ ಬಳಸಿ ವಿಎ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪರ್: ಅಭ್ಯರ್ಥಿ ಅರೆಸ್ಟ್

ಹಾವೇರಿ: ಗ್ರಾಮ ಲೆಕ್ಕಾಧಿಕಾರಿ (ವಿಎ) ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿದ್ದ ಹಾವೇರಿಯ ಶಂಕರ್ ಬನ್ನೂರ್ ನ ಪರೀಕ್ಷಾ ಅಕ್ರಮ ಬಟಾಬಯಲಾಗಿದೆ.

ಸದ್ಯ ಆರೋಪಿಯನ್ನು ಹಾವೇರಿ ಪೊಲೀಸರು ಬಂಧಿಸಿದ್ದು, ಶಿಗ್ಗಾವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಾನ್ಸ್​​​ಟೇಬಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದ ಶಂಕರ್ ವಿಎ ಪರೀಕ್ಷೆಯಲ್ಲಿ 151 ಅಂಕ ಪಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆದೇಶದಂತೆ ಹಾವೇರಿ ಜಿಲ್ಲಾಧಿಕಾರಿ ನಡೆಸಿದ ತನಿಖೆಯಲ್ಲಿ ಶಂಕರ್, ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವುದು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಹಾನಗಲ್ ಪೊಲೀಸರು ಶಂಕರ್ ನನ್ನು ವಶಕ್ಕೆ ಪಡೆದು ಶಿಗ್ಗಾಂವಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಎ ಪರೀಕ್ಷೆ ವೇಳೆ ಶಿಗ್ಗಾಂವಿ ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದ ಶಂಕರ್, ಗೂಗಲ್ ಲೆನ್ಸ್ ಆ್ಯಪ್ ಮೂಲಕ ಪ್ರಶ್ನೆ ಪ್ರಶ್ನೆ ಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರ ಬರೆದಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮರಾ ಸೆರೆಯಾಗಿದೆ.

ಇದೇ ಸಾಕ್ಷಿಯನ್ನು ಆಧರಿಸಿ ಪೊಲೀಸರು, ಶಂಕರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೋಪ್ಪಿಕೊಂಡಿದ್ದಾನೆ. ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಆಧಾರ್ ಕಾರ್ಡ್ ಮಾತ್ರ ಕೇಳಿದರು. ಅದನ್ನ ತೋರಿಸಿ ಮೊಬೈಲ್ ಸಮೇತ ಕೊಠಡಿ ಒಳಗೆ ಹೋದೆ. ಕೊಠಡಿ ಕೊನೆಯ‌ ಡೆಸ್ಕ್ ನಲ್ಲಿ ನನ್ನ ನಂಬರ್ ಇತ್ತು. ಗೂಗಲ್ ಸಹಾಯದ ಒಎಂಆರ್ ಭರ್ತಿ ಮಾಡಿದೆ. ಯಾರು‌ ಗಮನಿಸಲಿಲ್ಲ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಶಂಕರ್ ಬನ್ನೂರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕಷ್ಟಪಟ್ಟು ಓದಿದ್ದಾಗಿ ಹೇಳಿದ್ದ. ನಾನು ಪಿಯುಸಿ ಪರೀಕ್ಷೆ ಪಾಸಾಗಿದ್ದು 2012 ರಲ್ಲಿ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಾನು 2026 ರಲ್ಲಿ ಪಿಯುಸಿ ಮುಗಿಸಿದ್ದೇನೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ದಾಖಲೆಗಳಲ್ಲಿ ಯಾಕೆ ಆ ರೀತಿ ತಪ್ಪಾಗಿ ಬಿಂಬಿತವಾಗಿದೆಯೋ ನನಗೆ ತಿಳಿದಿಲ್ಲ. ಈ ಸಂಬಂಧ ಪೊಲೀಸರು ಮತ್ತು ತಹಶೀಲ್ದಾರ್‌ಗೆ ನನ್ನೆಲ್ಲಾ ಅಸಲಿ ದಾಖಲೆಗಳನ್ನು ಹಾಜರುಪಡಿಸಿದ್ದೇನೆ ಎಂದಿದ್ದ.

ನಾನು ಅತ್ಯಂತ ಬಡ ಕುಟುಂಬದಿಂದ ಬಂದವನು. ಹೊಟೇಲ್ ಹಾಗೂ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುತ್ತಲೇ ಸತತವಾಗಿ ಓದಿಕೊಂಡಿದ್ದೇನೆ. ಇದುವರೆಗೆ 45 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ಹಲವು ಪರೀಕ್ಷೆಗಳಲ್ಲಿ ಸಂದರ್ಶನದವರೆಗೂ ಹೋಗಿದ್ದೆ, ಕೆಲವು ಪರೀಕ್ಷೆಗಳಲ್ಲಿ ದೈಹಿಕ ಪರೀಕ್ಷೆ ಕ್ಲಿಯರ್ ಆಗದೆ ನೌಕರಿ ಕೈತಪ್ಪಿತ್ತು. ನಿರಂತರ ಪರಿಶ್ರಮದಿಂದಲೇ ಈಗ ವಿಎ ಪರೀಕ್ಷೆಯಲ್ಲಿ ಟಾಪರ್ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದ. ಇದೀಗ ತನಿಖೆ ವೇಳೆ ಟಾಪರ್ ಕಳ್ಳಾಟ ಬಯಲಾಗಿದೆ.

ಅಕ್ಟೋಬರ್ 04 ರಂದು ನಡೆದಿದ್ದ KSRP ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಪಡೆದ ಶಂಕರ ಬನ್ನೂರು, VAO ಪರೀಕ್ಷೆಯಲ್ಲಿ 151.25 ಅಂಕ ಪಡೆದು ರಾಜ್ಯಕ್ಕೆ ಟಾಫರ್ ಆಗಿದ್ದ.ಕಾನ್ಸ್​​ಟೇಬಲ್ ಪರೀಕ್ಷೆ ನಡೆದ ಕೇವಲ 15 ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ ಹೇಗೆ ಟಾಫರ್ ಆದ? ಎನ್ನುವ ಪ್ರಶ್ನಿಗಳು ಉದ್ಭವಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಇಎ ತನಿಖೆಗೆ ಆದೇಶಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಈ ವೇಳೆ ಅಕ್ರಮ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular