HomeKarnatakaಶಿವಂ ಅಸೋಸಿಯೇಟ್ಸ್ ಹಗರಣ; ಶಿವಾನಂದ ನೀಲಣ್ಣನವರ್ ನ 427 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಶಿವಂ ಅಸೋಸಿಯೇಟ್ಸ್ ಹಗರಣ; ಶಿವಾನಂದ ನೀಲಣ್ಣನವರ್ ನ 427 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಜಾರಿ ನಿರ್ದೇಶನಾಲಯ- ಇ.ಡಿ ಬಿಗ್ ಶಾಕ್‌ ನೀಡಿದೆ. ಶಿವಾನಂದ ನೀಲಣ್ಣನವರ್ ಅವರ ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಇಡಿ ತನಿಖೆಯಲ್ಲಿ ವಂಚನೆ ನಡೆದಿರುವುದು ದೃಢವಾಗಿದೆ. ಫಿಕ್ಸೆಡ್ ಡೆಪಾಸಿಟ್‌,‌ ಬ್ಯಾಂಕ್ ಖಾತೆ, ಷೇರು ಹೂಡಿಕೆ, ಕೃಷಿ ಜಮೀನು, ಬಂಗಲೆ ಜಪ್ತಿ ಮಾಡಿದೆ. ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ರೂ. ವಂಚನೆ ಆಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರೋಬ್ಬರಿ 427 ಕೋಟಿ ರೂ. ‌ಮೌಲ್ಯದ ಆಸ್ತಿ‌ಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಪೈಕಿ 47 ಬ್ಯಾಂಕ್ ಖಾತೆಗಳಲ್ಲಿದ್ದ 44 ಕೋಟಿ ಹಣ‌ ಸೀಜ್ ಮಾಡಲಾಗಿದೆ. ಫಿಕ್ಸೆಡ್ ಡೆಪಾಸಿಟ್‌ ಇಟ್ಟಿದ್ದ 367‌ ಕೋಟಿ‌‌‌, ಬ್ಯಾಂಕ್ ಖಾತೆಯಲ್ಲಿದ್ದ 44 ಕೋಟಿ, ಸ್ಥಿರಾಸ್ತಿಗಳು 13 ಕೋಟಿ, ಷೇರು ಮಾರುಕಟ್ಟೆ 1.31 ಕೋಟಿ ಸೇರಿದಂತೆ ಒಟ್ಟು 427 ಕೋಟಿ ರೂ. ಸೀಜ್‌ ಮಾಡಲಾಗಿದೆ.

ಶಿವಂ ಅಸೋಸಿಯೇಟ್ಸ್ ಕಂಪನಿಯಿಂದ ವಂಚನೆಯಾಗುತ್ತಿರುವ ಬಗ್ಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಪ್ರಾಥಮಿಕ ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಆಗಿರುವ ವಿಚಾರ ಗೊತ್ತಾಗ್ತಿದ್ದಂತೆ‌ ಇಡಿ ಎಂಟ್ರಿ ಕೊಟ್ಟಿದೆ.

2026ರ ಆಗಸ್ಟ್ ತಿಂಗಳಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿ 8 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ದಾಖಲೆ, ಕೈಬರಹದ ಲೆಕ್ಕಪತ್ರಗಳು, ಮೊಬೈಲ್‌ ಸೇರಿದಂತೆ ಡಿಜಿಟಲ್ ಸಾಕ್ಷ್ಯ ಸೀಜ್ ಮಾಡಿದ್ದರು.

ಹಣ ಹೇಗೆ ಸಂಗ್ರಹಿಸಲಾಗಿದೆ, ವರ್ಗಾಯಿಸಲಾಗಿದೆ ಮತ್ತು ಎಲ್ಲಿ ಹೂಡಿಕೆ ಆಗಿದೆ ಅನ್ನೋದು ಬಯಲಾಗಿತ್ತು. ಶಿವಾನಂದ ನೀಲಣ್ಣನವರ್‌ನನ್ನು ಆಗಸ್ಟ್ 8ರಂದು ಬಂಧಿಸಲಾಗಿತ್ತು. ತನಿಖೆ ವೇಳೆ 35,000 ಕ್ಕೂ ಹೆಚ್ಚು ಹೂಡಿಕೆದಾರರಿಂದ 2,459 ಕೋಟಿ ರೂ. ಹಣ ಸಂಗ್ರಹಿಸಿರುವ ವಿಚಾರ ಬಯಲಾಗಿದೆ. ಅಕ್ಟೋಬರ್ 9ರಂದು ಶಿವಾನಂದ್‌‌ ನೀಲಣ್ಣನವರ್‌ ಸೇರಿ ಐವರ ಮೇಲೆ ಇಡಿ ಚಾರ್ಜ್‌ಶೀಟ್ ಸಲ್ಲಿಸಿದೆ.

ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಹೂಡಿಕೆದಾರರಿಂದ ಸಂಗ್ರಹಿಸಿದ ಹಣ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಇದರಿಂದ 185.95 ಕೋಟಿ ರೂ. ನಿವ್ವಳ ನಷ್ಟ ಉಂಟಾಗಿತ್ತು ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಸುಮಾರು 25 ಕೋಟಿ ರೂ. ಹಣ ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳ ಮೂಲಕ ವರ್ಗಾಯಿಸಲಾಗಿತ್ತು.

ಫಿಕ್ಸೆಡ್ ಡೆಪಾಸಿಟ್‌ ಸೃಷ್ಟಿಸಿ, ಅದರ ಆಧಾರದಲ್ಲಿ ಸಹಚರರ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು. ಈ ಸಾಲದ ಹಣವನ್ನು ಜಮೀನು ಖರೀದಿಸಲು ಬಳಸಲಾಗಿತ್ತು. ಪತ್ನಿ ಸಂಗೀತಾ ಮತ್ತು ಮಗ ಸಿದ್ಧಾಂತ್ ಬ್ಯಾಂಕ್ ಖಾತೆಗಳಿಗೂ ವರ್ಗಾಯಿಸಲಾಗಿತ್ತು.

ಶಿವಾನಂದ್ ನೀಲಣ್ಣನವರ್ ವಿರುದ್ಧ ಇಡಿ ಅಧಿಕಾರಿಗಳು ಒಟ್ಟು 35,000 ಜನಕ್ಕೆ 2,165 ಕೋಟಿ ರೂ. ವಂಚನೆ ಮಾಡಿರುವುದಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದರು.

ಕಳೆದ ಎರಡು ತಿಂಗಳ ಹಿಂದೆ ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣನವರ್ ಅನ್ನು ಬಂಧಿಸಿದ್ದರು. ದಾಖಲಾತಿ ಪರಿಶೀಲನೆ ನಡೆಸಿ, ಇದೀಗ ಅಧಿಕಾರಿಗಳು ಶಿವಾನಂದ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಈಗಾಗಲೇ ನೀಲಣ್ಣನವರ್ ಬ್ಯಾಂಕ್‌ನಿಂದ 2.02 ಕೋಟಿ ರೂ.ಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪ್ರಕರಣದಲ್ಲಿ 185.95 ಕೋಟಿ ರೂ. ನಷ್ಟ ಆಗಿದೆ. 25 ಕೋಟಿ ರೂ.ಗಳನ್ನು ಸಹಕಾರಿ ಸಾಲ ಸಂಘಗಳಾದ `ಶ್ರೀಮತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್’ ಮತ್ತು `ಧನಶ್ರೀ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ಲಿಮಿಟೆಡ್’ ಹೂಡಿಕೆ ಮಾಡಿದ್ದಾರೆ. ಇದೇ ಠೇವಣಿಗಳ ಆಧಾರದ ಮೇಲೆ ಆಪ್ತರ ಹೆಸರಿನಲ್ಲಿ ಸಾಲ ಪಡೆದು ಭೂಮಿಯನ್ನು ಖರೀದಿಸಲಾಗಿದೆ.

ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲದೆ, ಹಣವನ್ನು ಆತನ ಪತ್ನಿ ಶ್ರೀಮತಿ ಸಂಗೀತಾ ಮತ್ತು ಅಪ್ರಾಪ್ತ ಮಗ ಸಿದ್ಧಾಂತ್ ಅವರ ಬ್ಯಾಂಕ್ ಖಾತೆಗಳಿಗೆ ಹಾಗೂ `ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್’ (19 ಕೋಟಿ ರೂ.), `ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್’ ಮತ್ತು `ಶಿವಂ ಫುಡ್ಸ್’ನಂತಹ ಸಂಬಂಧಿತ ವ್ಯಾಪಾರ ಉದ್ಯಮಗಳಿಗೆ ವರ್ಗಾಯಿಸಲಾಗಿದೆ. ಅಂತಿಮವಾಗಿ, ಸಾರ್ವಜನಿಕರಿಂದ ಸಂಗ್ರಹಿಸಲಾದ ಠೇವಣಿಗಳ ಪೈಕಿ 5 ಕೋಟಿ ರೂ.ಗಳನ್ನು ಚಲನಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ ಎಂದು ಚಾಅರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular