HomeAutoಸನೋಫಿ ಕನ್ಸ್ಯೂಮರ್ ಲಾಭದಲ್ಲಿ ಶೇ.22.2ರಷ್ಟು ಏರಿಕೆ; ಒಂದೇ ದಿನ ಷೇರು ಬೆಲೆ ಶೇ.15ಕ್ಕೂ ಹೆಚ್ಚು ಜಿಗಿತ

ಸನೋಫಿ ಕನ್ಸ್ಯೂಮರ್ ಲಾಭದಲ್ಲಿ ಶೇ.22.2ರಷ್ಟು ಏರಿಕೆ; ಒಂದೇ ದಿನ ಷೇರು ಬೆಲೆ ಶೇ.15ಕ್ಕೂ ಹೆಚ್ಚು ಜಿಗಿತ

ಬೆಂಗಳೂರು: ಕಾಂಬಿಫ್ಲಾಮ್, ಅಲೆಗ್ರಾದಂತಹ ಜನಪ್ರಿಯ ಔಷಧ ಬ್ರ್ಯಾಂಡ್‌ಗಳನ್ನು ಹೊಂದಿರುವ ಸನೋಫಿ ಕನ್ಸ್ಯೂಮರ್ ಹೆಲ್ತ್‌ಕೇರ್ ಇಂಡಿಯಾ ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಆರ್ಥಿಕ ಸಾಧನೆ ದಾಖಲಿಸಿದೆ. ಕಂಪನಿಯ ನಿವ್ವಳ ಲಾಭ ಶೇ.22.2ರಷ್ಟು ಏರಿಕೆಯಾಗಿ ₹77 ಕೋಟಿಗೆ ತಲುಪಿದ್ದು, ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ಬೆಲೆಯೂ ಭಾರಿ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಷೇರು ಬೆಲೆ ಶೇ.15ಕ್ಕಿಂತ ಹೆಚ್ಚು ಜಿಗಿದಿದ್ದು, ಹೂಡಿಕೆದಾರರ ಗಮನ ಸೆಳೆದಿದೆ.

ಕಂಪನಿಯ ಅದ್ಭುತ ತ್ರೈಮಾಸಿಕ ವರದಿಯ ಬೆನ್ನಲ್ಲೇ ಹೂಡಿಕೆದಾರರು ಸನೋಫಿ ಷೇರು ಬೆಲೆ ಬೆಳಗ್ಗಿನ ವಹಿವಾಟಿನಲ್ಲಿ ಶೇ. 15ಕ್ಕಿಂತ ಹೆಚ್ಚು ಏರಿಕೆ ಕಂಡು ಇಂಟ್ರಾಡೇ ವಹಿವಾಟಿನಲ್ಲಿ ಗರಿಷ್ಠ 3,751.70 ರೂ. ತಲುಪಿತ್ತು. ಇಂಟ್ರಾಡೇ ಕನಿಷ್ಠ ದರ 3,430 ರೂ. ಆಗಿದೆ.

ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಸಾಧನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ ಅತ್ಯುತ್ತಮ ಪ್ರದರ್ಶನ ದಾಖಲಿಸಿದ್ದು ನಿವ್ವಳ ಲಾಭವು ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 63 ಕೋಟಿ ರೂ.ಗಳಿಂದ ಶೇ. 22.2ರಷ್ಟು ಗಣನೀಯ ಏರಿಕೆ ಕಂಡು 77 ಕೋಟಿ ರೂ.ಗಳಿಗೆ ತಲುಪಿದೆ.

ಅದೇ ರೀತಿ, ಕಂಪನಿಯ ಒಟ್ಟು ಆದಾಯವು ಕಳೆದ ವರ್ಷದ 234 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 12.4ರಷ್ಟು ಹೆಚ್ಚಾಗಿದ್ದು, ಒಟ್ಟು 263 ಕೋಟಿ ರೂ.ಗೆ ಮುಟ್ಟಿದೆ. ಕಾರ್ಯಾಚರಣೆಯ ಮಟ್ಟದಲ್ಲೂ ಉತ್ತಮ ಪ್ರಗತಿ ಕಂಡುಬಂದಿದ್ದು, ಕಾರ್ಯಾಚರಣೆ ಲಾಭ (ಎಬಿಟ್ಡಾ) ಶೇ. 19.5ರಷ್ಟು ಏರಿಕೆಯೊಂದಿಗೆ 85 ಕೋಟಿ ರೂ.ಗಳಿಂದ 102 ಕೋಟಿ ರೂ.ಗಳಿಗೆ ಮುಟ್ಟಿದೆ.

ಇದರ ಪರಿಣಾಮವಾಗಿ ಕಾರ್ಯಾಚರಣೆಯ ಮಾರ್ಜಿನ್ ಶೇ. 36.4ರಿಂದ ಶೇ. 38.7ಕ್ಕೆ ಸುಧಾರಣೆ ಕಂಡಿದೆ. ಇವೆಲ್ಲದರ ಜೊತೆಗೆ, ಭಾರತದೊಳಗಿನ ದೇಶೀಯ ಮಾರಾಟದಲ್ಲಿ ಶೇ. 19ರಷ್ಟು ಭಾರಿ ಏರಿಕೆಯಾಗಿದೆ.

ಕಳೆದ 9 ತಿಂಗಳಲ್ಲೂ ಉತ್ತಮ ಸಾಧನೆ

ಕೇವಲ 3ನೇ ತ್ರೈಮಾಸಿಕ ಮಾತ್ರವಲ್ಲ, ಈ ವರ್ಷದ ಕಳೆದ 9 ತಿಂಗಳ ಲೆಕ್ಕಾಚಾರದಲ್ಲೂ ಕಂಪನಿಯ ಆದಾಯ ಶೇ. 16 ರಷ್ಟು ಹಾಗೂ ರಫ್ತು ಪ್ರಮಾಣ ಶೇ. 19ರಷ್ಟು ಪ್ರಗತಿ ಸಾಧಿಸಿದೆ.

ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಿಮಾಂಶು ಬಕ್ಷಿ, “ನಮ್ಮ ಸ್ಪಷ್ಟ ಕಾರ್ಯತಂತ್ರ ಮತ್ತು ಬ್ರಾಂಡ್‌ಗಳ ಸಾಮರ್ಥ್ಯಕ್ಕೆ ಈ ಸಾಧನೆಯೇ ಕನ್ನಡಿಯಾಗಿದೆ. ಪ್ರಮುಖ ಬ್ರಾಂಡ್‌ಗಳ ಮಾರಾಟ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ನಮ್ಮ ಪಾಲು ವಿಸ್ತರಣೆಯಾಗಿದೆ. ವಿತರಣಾ ಜಾಲವನ್ನು ವಿಸ್ತರಿಸಲು ನಾವು ಮಾಡಿದ ಹೂಡಿಕೆಗಳು, ಇಂದು ಹೆಚ್ಚಿನ ಗ್ರಾಹಕರಿಗೆ ಸೇವೆ ಒದಗಿಸಲು ನಮಗೆ ನೆರವಾಗುತ್ತಿವೆ,” ಎಂದಿದ್ದಾರೆ.

2024ರ ಜೂನ್ 1 ರಂದು ‘ಸನೋಫಿ ಇಂಡಿಯಾ ಲಿಮಿಟೆಡ್’ನಿಂದ ಪ್ರತ್ಯೇಕಗೊಂಡು ಕನ್ಸ್ಯೂಮರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿ, ಗ್ರಾಹಕರಿಗೆ ಚಿರಪರಿಚಿತವಾಗಿರುವ ಅಲೆಗ್ರಾ, ಡಿಪುರಾ, ಎವಿಲ್ ಮತ್ತು ಕಾಂಬಿಫ್ಲಾಮ್ನಂತಹ ಯಶಸ್ವಿ ಹೆಲ್ತ್‌ಕೇರ್ ಬ್ರಾಂಡ್‌ಗಳನ್ನು ಹೊಂದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular