HomeKarnatakaಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್: ವರ್ಷದಿಂದ ಉರಿಯುತ್ತಲೇ ಇದೆ ಗರ್ಭಗುಡಿಯಲ್ಲಿ ಹಚ್ಚಿದ ನಂದಾದೀಪ

ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್: ವರ್ಷದಿಂದ ಉರಿಯುತ್ತಲೇ ಇದೆ ಗರ್ಭಗುಡಿಯಲ್ಲಿ ಹಚ್ಚಿದ ನಂದಾದೀಪ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿದೇವತೆ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಹಾಗೂ ಮಠಾಧೀಶರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸ್ದ ಬಳಿಕ ದೇವಾಲಯದ ಬಾಗಿಲು ತೆರೆಯಲಾಯಿತು.

ಇಂದಿನಿಂದ ನ.11ರವರೆಗೆ ಹಾಸನಾಂಬ ದರ್ಶನೋತ್ಸವ ನಡೆಯಲಿದೆ. ಗೊನೆಯುಳ್ಳ ಬಾಳೆ ಕಂಬ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ, ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಮುಜರಾಯಿ ಸಚಿವ ಬಸವಂತಪ್ಪ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್​ ಪಟೇಲ್​, ಶಾಸಕ ಸ್ವರೂಪ್‌ ಪ್ರಕಾಶ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಡಿಸಿ ಕೆ.ಎಸ್.ಲತಾಕುಮಾರಿ, ಎಸ್​ಪಿ ಶುಭನ್ವಿತಾ ಸೇರಿ ವಿವಿಧ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ವರ್ಷ ದೇವಸ್ಥಾನದ ಗರ್ಭಗುಡಿಯಲ್ಲಿ ಹಚ್ಚಿದ್ದ ದೀಪ ಇಂದಿಗೂ ಉರಿಯುತ್ತಲೇ ಇದೆ. ಅಲ್ಲದೇ ಹಾಸನಾಂಬೆ ತಾಯಿಗೆ ಅರ್ಪಿಸಿದ ಹೂಮಾಲೆ, ವಿವಿಧ ಹೂಗಳು ಕೊಂಚವೂ ಬಾಡದೇ ಆಗತಾನೆ ಪೂಜೆ ನೆರವೇರಿಸಿದಂತೆ ಕಂಗೊಳಿಸುತ್ತಿದ್ದವು. ಈ ಅಪೂರ್ವ ಕ್ಷಣಗಳನ್ನು ನೆರೆದಿದ್ದ ಜನರು ಕಣ್ತುಂಬಿಕೊಂಡರು.

ಇಂದಿನಿಂದ ನವೆಂಬರ್ 11ರವರೆಗೆ ನಡೆಯಲಿರುವ ಹಾಸನಾಂಬೆ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ಇಂದು ಗರ್ಭಗುಡಿ ಬಾಗಿಲು ತೆರೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಕ್ಟೋಬರ್ 30ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 10ರವರೆಗೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತವು ₹1,000 ಮತ್ತು ₹300ರ ವಿಶೇಷ ದರ್ಶನದ ಟಿಕೆಟ್ ವ್ಯವಸ್ಥೆ ಮಾಡಿದೆ.

ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ನಗರಸಭೆ ವಸ್ತು ಪ್ರದರ್ಶನದ ಆವರಣದಲ್ಲಿ ಆಹಾರ ಮೇಳ, ಕುಸ್ತಿ, ವಾಲಿಬಾಲ್, ಕಬ್ಬಡಿ ಪಂದ್ಯಾವಳಿ, ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದೆ. ಹಳ್ಳಿಕಾರ್, ಅಮೃತ್‌ಮಹಲ್ ತಳಿಯ ಜಾನುವಾರುಗಳು, ಶ್ವಾನ, ಬೆಕ್ಕು, ಟಗರುಗಳ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಅಲ್ಲದೇ 11 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular