HomeKarnatakaBMTC ನೌಕರರಿಗೆ ಗುಡ್ ನ್ಯೂಸ್: ಅಪಘಾತ ವಿಮೆ ಪರಿಹಾರ ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಳ

BMTC ನೌಕರರಿಗೆ ಗುಡ್ ನ್ಯೂಸ್: ಅಪಘಾತ ವಿಮೆ ಪರಿಹಾರ ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಳ

ಬೆಂಗಳುರು :  ಬಿಎಂಟಿಸಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು,  ಬಿಎಂಟಿಸಿ ನೌಕರರ ಅಪಘಾತ ವಿಮೆ ಮೊತ್ತವನ್ನು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ. ಅನಿರೀಕ್ಷಿತ ಅಪಘಾತ ಅಥವಾ ದುರ್ಘಟನೆ ಸಂಭವಿಸಿದರೆ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ನೆರವಾಗಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆ ಹೊಂದಿರುವ ಬಿಎಂಟಿಸಿ ನೌಕರರ ಅಪಘಾತ ವಿಮೆ ಮೊತ್ತವನ್ನು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದ್ದು, ಮರಣ ಪರಿಹಾರ, ಅಂಗವೈಕಲ್ಯ ವಿಮೆ ಹಾಗೂ ವೈದ್ಯಕೀಯ ನೆರವಿನ ಸೌಲಭ್ಯವನ್ನೂ ಒದಗಿಸಲಾಗಿದೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಡುವಿನ ಒಪ್ಪಂದದ ಅನ್ವಯ, ಯೂನಿಯನ್ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿರುವ ಬಿಎಂಟಿಸಿ ನೌಕರರ ಅಪಘಾತ ವಿಮೆ ಮೊತ್ತವನ್ನು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ. ಒಪ್ಪಂದದ ಪ್ರಕಾರ, ಅಪಘಾತದಿಂದ ನೌಕರ ಮೃತಪಟ್ಟರೆ ಅವರ ನಾಮಿನಿಗೆ ₹1 ಕೋಟಿ ವಿಮಾ ಪರಿಹಾರ ದೊರೆಯಲಿದೆ. ನೈಸರ್ಗಿಕ ಅಥವಾ ಇತರ ಕಾರಣಗಳಿಂದ ನೌಕರ ಮೃತಪಟ್ಟರೆ, ಮಾಸಿಕ ₹25,000ಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ ₹5 ಲಕ್ಷ ಹಾಗೂ ₹25,000ಕ್ಕಿಂತ ಹೆಚ್ಚು ವೇತನ ಪಡೆಯುವವರಿಗೆ ₹10 ಲಕ್ಷ ಪರಿಹಾರ ನೀಡಲಾಗುತ್ತದೆ. ಅದೇ ರೀತಿ, ಶಾಶ್ವತ ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗುವ ನೌಕರರಿಗೆ ₹1 ಕೋಟಿವರೆಗೆ ವಿಮಾ ರಕ್ಷಣೆ ದೊರೆಯಲಿದೆ. ಇದರ ಜೊತೆಗೆ, ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ಮಾಸಿಕ ₹25,000ಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರಿಗೆ ₹4 ಲಕ್ಷ ಹಾಗೂ ₹25,000ಕ್ಕಿಂತ ಹೆಚ್ಚು ವೇತನ ಪಡೆಯುವ ನೌಕರರಿಗೆ ₹15 ಲಕ್ಷ ವಿಮಾ ಸೌಲಭ್ಯ ಲಭ್ಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟೇ ಅಲ್ಲದೆ, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ನೌಕರರಿಗೆ ವೈದ್ಯಕೀಯ ವೆಚ್ಚಕ್ಕಾಗಿ ವಾರ್ಷಿಕವಾಗಿ ಗರಿಷ್ಠ ₹30,000ದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಒಪ್ಪಂದದಿಂದ ಬಿಎಂಟಿಸಿ ನೌಕರರು ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಹೆಚ್ಚಲಿದ್ದು, ಅನಿರೀಕ್ಷಿತ ಅಪಘಾತ ಅಥವಾ ಇತರ ದುರ್ಘಟನೆಗಳ ಸಂದರ್ಭದಲ್ಲಿ ನೆರವಾಗಲಿದೆ.

ಬೆಂಗಳೂರು ಮೆಟ್ರೋ ಪಿಂಕ್ ಲೈನ್ ವೆಚ್ಚ ದುಪ್ಪಟ್ಟು! ಕಾಮಗಾರಿ ವಿಳಂಬಕ್ಕೆ ಜನರ ಆಕ್ರೋಶ

ಬೆಂಗಳೂರಿನ ಜನರ ಸಂಚಾರ ದಟ್ಟಣೆ ಕಡಿಮೆ ಮಾಡಿ, ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆ ಮೂಡಿಸಿರುವ ನಮ್ಮ ಮೆಟ್ರೋದ ಪಿಂಕ್ ಲೈನ್ ಯೋಜನೆಯ ವೆಚ್ಚ ಬರೋಬ್ಬರಿ ದುಪ್ಪಟ್ಟಾಗಿದೆ. ಆರಂಭದಲ್ಲಿ ₹8,730 ಕೋಟಿ ಅಂದಾಜು ಮಾಡಲಾಗಿದ್ದ ಯೋಜನೆಯ ವೆಚ್ಚ ಈಗ ₹17,346 ಕೋಟಿಗೆ ಏರಿಕೆಯಾಗಿದೆ. ಕಾಮಗಾರಿ ವಿಳಂಬ, ಸುರಂಗ ನಿರ್ಮಾಣದ ಹೆಚ್ಚಿನ ವೆಚ್ಚ, ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಯೋಜನೆಯ ವೆಚ್ಚ ಹೆಚ್ಚಾಗಿದೆ.

₹8,730 ಕೋಟಿಯಿಂದ ₹17,346 ಕೋಟಿಗೆ ಏರಿದ ವೆಚ್ಚ

ನಮ್ಮ ಮೆಟ್ರೋದ ಪಿಂಕ್ ಲೈನ್ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ. ಒಟ್ಟು 21.26 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ 7.5 ಕಿಲೋಮೀಟರ್ ಎಲಿವೇಟೆಡ್ ಮಾರ್ಗವಾಗಿದ್ದರೆ, 13.76 ಕಿಲೋಮೀಟರ್ ಭೂಗತ ಮಾರ್ಗವಾಗಿರಲಿದೆ.

ಮೂಲ ಯೋಜನಾ ವರದಿಯಲ್ಲಿ ₹8,730 ಕೋಟಿ ಅಂದಾಜು ಮಾಡಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನ ಪ್ರಕಾರ ಒಟ್ಟು ವೆಚ್ಚ ₹17,346 ಕೋಟಿಗೆ ತಲುಪಿದೆ. ಅಂದರೆ, ಮೂಲ ಅಂದಾಜಿಗಿಂತ ಸುಮಾರು ₹8,616 ಕೋಟಿ ಹೆಚ್ಚುವರಿ ವೆಚ್ಚವಾಗುತ್ತಿದೆ.

ಭೂಗತ ಮಾರ್ಗ ನಿರ್ಮಾಣಕ್ಕೇ ₹13,876 ಕೋಟಿ!

ಪಿಂಕ್ ಲೈನ್ ಯೋಜನೆಯಲ್ಲಿ ಭೂಗತ ಮಾರ್ಗ ನಿರ್ಮಾಣವೇ ಅತ್ಯಂತ ದುಬಾರಿ ಕಾಮಗಾರಿಯಾಗಿದೆ.

  • ಒಟ್ಟು ಯೋಜನಾ ವೆಚ್ಚ: ₹17,346 ಕೋಟಿ

  • ಮೂಲ ಅಂದಾಜು ವೆಚ್ಚ: ₹8,730 ಕೋಟಿ

  • ಭೂಗತ ಮಾರ್ಗದ ವೆಚ್ಚ: ₹13,876 ಕೋಟಿ

  • ಎಲಿವೇಟೆಡ್ ಮಾರ್ಗದ ವೆಚ್ಚ: ₹3,470 ಕೋಟಿ

  • ಒಟ್ಟು ಮಾರ್ಗದ ಉದ್ದ: 21.26 ಕಿ.ಮೀ.

  • ಭೂಗತ ಮಾರ್ಗದ ಉದ್ದ: 13.76 ಕಿ.ಮೀ.

ಎಲಿವೇಟೆಡ್ ಮಾರ್ಗದ ಉದ್ದ: 7.5 ಕಿ.ಮೀ.

ಭೂಗತ ಮಾರ್ಗದ ಪ್ರತಿ ಕಿಲೋಮೀಟರ್ ನಿರ್ಮಾಣಕ್ಕೆ ಸರಾಸರಿ ₹1,000 ಕೋಟಿಗೂ ಅಧಿಕ ವೆಚ್ಚವಾಗುತ್ತಿದೆ. ಸುರಂಗ ಕೊರೆಯುವ ತಂತ್ರಜ್ಞಾನ, ಭೂಗತ ನಿಲ್ದಾಣಗಳ ನಿರ್ಮಾಣ ಮತ್ತು ಇತರ ತಾಂತ್ರಿಕ ಕಾರ್ಯಗಳು ಈ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular