ಐಪಿಎಲ್‌ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ತನ್ನ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಅವರನ್ನು ಬ್ಯಾಟಿಂಗ್ ಕೋಚ್ ಸ್ಥಾನದಿಂದ ಮುಖ್ಯ ಕೋಚ್ ಆಗಿ ಬಡ್ತಿ ನೀಡಲಾಗಿದೆ. ತಂಡದ ಆಟಗಾರನಾಗಿ ಹಲವು ವರ್ಷಗಳ ಕಾಲ ಯಶಸ್ವಿ ಸೇವೆ ಸಲ್ಲಿಸಿದ್ದ ಪೊಲಾರ್ಡ್, ಇದೀಗ ಕೋಚ್ ಆಗಿಯೂ ತಂಡವನ್ನು ಮುನ್ನಡೆಸಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ದೀರ್ಘಕಾಲದ ಒಡನಾಟವನ್ನು ಮುಂದುವರಿಸಿರುವ ಪೊಲಾರ್ಡ್‌ಗೆ ಈ ಹೊಸ ಜವಾಬ್ದಾರಿ ನೀಡಲಾಗಿದೆ. ಆಟಗಾರನಾಗಿ ಹಾಗೂ ಕೋಚಿಂಗ್ ಸಿಬ್ಬಂದಿಯ ಭಾಗವಾಗಿ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ.
ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಕ್ಕೆ ಪೊಲಾರ್ಡ್ ಹೇಳಿದ್ದೇನು?
ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದಕ್ಕೆ ಕೀರನ್ ಪೊಲಾರ್ಡ್ ಸಂತಸ ವ್ಯಕ್ತಪಡಿಸಿದ್ದಾರೆ.
“ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನನಗೆ ಗೌರವದ ವಿಷಯ. ಈ ತಂಡ ನನ್ನ ಜೀವನ ಮತ್ತು ಕ್ರಿಕೆಟ್ ವೃತ್ತಿಜೀವನದ ಪ್ರಮುಖ ಭಾಗವಾಗಿದೆ. ತಂಡ, ಆಟಗಾರರು ಹಾಗೂ ಅಭಿಮಾನಿಗಳಾದ ‘ಪಲ್ಟನ್’ ಜೊತೆಗಿನ ಬಾಂಧವ್ಯ ನನಗೆ ಬಹಳ ಮಹತ್ವದ್ದಾಗಿದೆ.
ಆಟಗಾರನಾಗಿ ಮತ್ತು ನಂತರ ಕೋಚ್ ಆಗಿ ಈ ಪಯಣದಲ್ಲಿ ಭಾಗಿಯಾಗಿರುವುದರಿಂದ ಮುಂಬೈ ಇಂಡಿಯನ್ಸ್ ತಂಡದ ಮೌಲ್ಯಗಳು ಹಾಗೂ ಅದರ ಜವಾಬ್ದಾರಿಯ ಅರಿವು ನನಗಿದೆ. ನನ್ನ ಮೇಲೆ ನಂಬಿಕೆ ಇಟ್ಟಿರುವ ನೀತಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಇಡೀ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾನು ಕೃತಜ್ಞನಾಗಿದ್ದೇನೆ.
ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾ ತಂಡದ ಪರಂಪರೆಯನ್ನು ಮುಂದುವರಿಸಲು, ಪ್ರತಿಭಾವಂತ ಆಟಗಾರರ ಬೆಳವಣಿಗೆಗೆ ನೆರವಾಗಲು ಮತ್ತು ಅಭಿಮಾನಿಗಳಿಗೆ ಇನ್ನಷ್ಟು ಸಂಭ್ರಮದ ಕ್ಷಣಗಳನ್ನು ನೀಡಲು ಎದುರು ನೋಡುತ್ತಿದ್ದೇನೆ” ಎಂದು ಪೊಲಾರ್ಡ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನನಗೆ ಗೌರವದ ವಿಷಯವಾಗಿದೆ. ಮುಂಬೈ ಇಂಡಿಯನ್ಸ್ ನನ್ನ ಜೀವನ ಮತ್ತು ಕ್ರಿಕೆಟ್ ವೃತ್ತಿಜೀವನದ ಪ್ರಮುಖ ಭಾಗವಾಗಿದೆ. ಈ ತಂಡ, ಆಟಗಾರರು ಹಾಗೂ ಅಭಿಮಾನಿಗಳಾದ ‘ಪಲ್ಟನ್’ ಜೊತೆಗಿನ ನನ್ನ ಬಾಂಧವ್ಯ ನನಗೆ ಬಹಳ ಮಹತ್ವದ್ದಾಗಿದೆ.
ಆಟಗಾರನಾಗಿ ಮತ್ತು ನಂತರ ಕೋಚ್ ಆಗಿ ಈ ಪಯಣದಲ್ಲಿ ಭಾಗಿಯಾಗಿರುವುದರಿಂದ ಮುಂಬೈ ಇಂಡಿಯನ್ಸ್ ತಂಡದ ಮೌಲ್ಯಗಳು ಹಾಗೂ ‘ಬ್ಲೂ ಆ್ಯಂಡ್ ಗೋಲ್ಡ್’ ತಂಡವನ್ನು ಪ್ರತಿನಿಧಿಸುವ ಜವಾಬ್ದಾರಿಯ ಬಗ್ಗೆ ನನಗೆ ಅರಿವಿದೆ. ನನ್ನ ಮೇಲೆ ನಂಬಿಕೆ ಇಟ್ಟಿರುವ ನೀತಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಇಡೀ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾನು ಕೃತಜ್ಞನಾಗಿದ್ದೇನೆ.
ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು, ತಂಡದ ಪರಂಪರೆಯನ್ನು ಮುಂದುವರಿಸಲು, ಯುವ ಪ್ರತಿಭೆಗಳ ಬೆಳವಣಿಗೆಗೆ ನೆರವಾಗಲು ಹಾಗೂ ಅಭಿಮಾನಿಗಳಿಗೆ ಇನ್ನಷ್ಟು ಸಂಭ್ರಮದ ಕ್ಷಣಗಳನ್ನು ನೀಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಕೀರನ್ ಪೊಲಾರ್ಡ್ ಹೇಳಿದ್ದಾರೆ.
ಕೀರನ್ ಪೊಲಾರ್ಡ್ ಅವರ ನೇಮಕವು ತಂಡದ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ, ಹೊಸ ಪ್ರತಿಭೆಗಳನ್ನು ಬೆಳೆಸಲು, ತಂಡದ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಮೈದಾನದ ಒಳಗೆ ಮತ್ತು ಹೊರಗೆ ಶ್ರೇಷ್ಠ ಸಾಧನೆ ಮಾಡುವ ಮುಂಬೈ ಇಂಡಿಯನ್ಸ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ಯಶಸ್ವಿ ವರ್ಷಗಳ ಭಾಗವಾಗಿದ್ದ ಅನುಭವದ ಆಧಾರದ ಮೇಲೆ ಪೊಲಾರ್ಡ್ ತಂಡವನ್ನು ಮುನ್ನಡೆಸಲಿದ್ದು, ಮುಂದಿನ ಅಧ್ಯಾಯವನ್ನು ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

