HomeEntertainmentಅಬ್ಬರಕ್ಕಿಂತ ಅಭಿನಯ ಮುಖ್ಯ ಎಂದಿದ್ದ ʼರಸ್ನಾ ಗರ್ಲ್‌ʼ ; ಇಲ್ಲಿದೆ ಹುಟ್ಟುಹಬ್ಬದಂದೇ ಪ್ರಾಣ ಕಳೆದುಕೊಂಡ ದುರಂತ...

ಅಬ್ಬರಕ್ಕಿಂತ ಅಭಿನಯ ಮುಖ್ಯ ಎಂದಿದ್ದ ʼರಸ್ನಾ ಗರ್ಲ್‌ʼ ; ಇಲ್ಲಿದೆ ಹುಟ್ಟುಹಬ್ಬದಂದೇ ಪ್ರಾಣ ಕಳೆದುಕೊಂಡ ದುರಂತ ಕಥೆ !

ಚಿತ್ರರಂಗದಲ್ಲಿ ಅಮೋಘ ಸಾಧನೆ ಮಾಡಲು ನೂರಾರು ಸಿನಿಮಾಗಳಲ್ಲಿ ನಟಿಸಬೇಕಿಲ್ಲ, ಜನಮನದಲ್ಲಿ ಶಾಶ್ವತವಾಗಿ ಉಳಿಯಲು ಒಂದೊಳ್ಳೆ ಪಾತ್ರ ಮತ್ತು ನಟನೆ ಸಾಕು ಎಂಬುದಕ್ಕೆ ಬಾಲನಟಿ ತರುಣಿ ಸಚ್‌ದೇವ್ ಅತ್ಯುತ್ತಮ ಉದಾಹರಣೆ. ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಕೇವಲ 4 ಸಿನಿಮಾಗಳಲ್ಲಿ ನಟಿಸಿದ್ದರೂ, ಅವರು ಮೂಡಿಸಿದ ಛಾಪು ಅಪಾರವಾದದ್ದು. ಅವರು ಅಗಲಿ 14 ವರ್ಷಗಳೇ ಕಳೆದಿದ್ದರೂ, ಅಭಿಮಾನಿಗಳ ಮನಸ್ಸಿನಲ್ಲಿ ಅವರ ನೆನಪು ಇಂದಿಗೂ ಹಸಿರಾಗಿದೆ.

ಮುಂಬೈನ ಕೈಗಾರಿಕೋದ್ಯಮಿ ಹರೇಶ್ ಸಚ್‌ದೇವ್ ಮತ್ತು ಗೀತಾ ಸಚ್‌ದೇವ್ ದಂಪತಿಯ ಮಗಳಾಗಿ ಮೇ 14, 1998 ರಂದು ಜನಿಸಿದ ತರುಣಿ, ಬಾಲ್ಯದಲ್ಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಜೊತೆಗೂಡಿ ಮಾಡಿದ ಖ್ಯಾತ ‘ರಸ್ನಾ’ ತಂಪು ಪಾನೀಯದ ಜಾಹೀರಾತು ಇಡೀ ದೇಶಾದ್ಯಂತ ಅವರನ್ನು ‘ರಸ್ನಾ ಗರ್ಲ್’ ಎಂದೇ ಮನೆಮಾತಾಗಿಸಿತು. ಇದಷ್ಟೇ ಅಲ್ಲದೆ ಕೋಲ್ಗೇಟ್, ಐಸಿಐಸಿಐ ಬ್ಯಾಂಕ್, ಸಫೋಲಾ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಅವರು ಅಭಿನಯಿಸಿದ್ದರು.

ಮುಂಬೈ ಮೂಲದವರಾಗಿದ್ದರೂ ತರುಣಿ ಅವರ ಚಿತ್ರರಂಗದ ಪಯಣ ಆರಂಭವಾಗಿದ್ದು ಮಲಯಾಳಂ ಚಿತ್ರರಂಗದ ಮೂಲಕ. ನಿರ್ದೇಶಕ ವಿನಯನ್ ಅವರ ‘ವೆಳ್ಳಿನಕ್ಷತ್ರಂ’ ಸಿನಿಮಾದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಅವರ ಮಗಳಾಗಿ ಅತ್ಯುತ್ತಮ ಅಭಿನಯ ನೀಡಿ ಪ್ರೇಕ್ಷಕರ ಮನ ಗೆದ್ದಿದ್ದರು. ಕೇವಲ 5 ನೇ ವಯಸ್ಸಿನಲ್ಲಿಯೇ ಮಲಯಾಳಂ ಸಂಭಾಷಣೆಗಳನ್ನು ಸುಲಭವಾಗಿ ನೆನಪಿಟ್ಟುಕೊಂಡು ನಟಿಸುತ್ತಿದ್ದ ಅವರ ಪ್ರತಿಭೆಗೆ ನಿರ್ದೇಶಕರು ಬೆರಗಾಗಿದ್ದರು. ನಂತರ ಪೃಥ್ವಿರಾಜ್ ಅವರೊಂದಿಗಿನ ಇವರ ಕೆಮಿಸ್ಟ್ರಿ ಜನಪ್ರಿಯಗೊಂಡು ‘ಸತ್ಯಂ’ ಸಿನಿಮಾದಲ್ಲೂ ಈ ಜೋಡಿ ಒಂದಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಬಾಲಿವುಡ್‌ಗೆ ಕಾಲಿಟ್ಟ ತರುಣಿ, ಪ್ರಸಿದ್ಧ ನಿರ್ದೇಶಕ ಆರ್. ಬಾಲ್ಕಿ ಅವರ ‘ಪಾ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರ ಸಹಪಾಠಿಯಾಗಿ ನಟಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದರು. ತಮಿಳಿನ ‘ವೆಟ್ರಿ ಸೆಲ್ವನ್’ ಅವರ ಕೊನೆಯ ಸಿನಿಮಾವಾಯಿತು. ದುರದೃಷ್ಟವಶಾತ್ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನವೇ ಅವರು ಈ ಲೋಕವನ್ನು ತೊರೆದಿದ್ದರು.

ಅಕಾಲಿಕ ಮರಣ ಮತ್ತು ವಿಧಿಯ ಆಟ: 2012 ರ ಮೇ 14 ರಂದು, ಅಂದರೆ ತಮ್ಮ 14 ನೇ ಹುಟ್ಟುಹಬ್ಬದಂದೇ ತರುಣಿ ಮತ್ತು ಅವರ ತಾಯಿ ನೇಪಾಳದ ಜೊಮ್ಸೊಮ್ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಅಗ್ನಿ ಏರ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡರು. ಈ ವಿಮಾನದಲ್ಲಿದ್ದ 21 ಜನರಲ್ಲಿ 15 ಜನರು ಪ್ರಾಣ ಕಳೆದುಕೊಂಡಿದ್ದರು.

ಪ್ರವಾಸಕ್ಕೆ ತೆರಳುವ ಮುನ್ನ ತರುಣಿ ತಮ್ಮ ಸ್ನೇಹಿತರಿಗೆ ನೀಡಿದ್ದ ‘ಬೈ-ಬೈ’ ಸಂದೇಶಗಳು ಮತ್ತು ಮಾಡಿದ್ದ ತಮಾಷೆಯ ಮಾತುಗಳು ಈ ಘಟನೆಯ ನಂತರ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದವು. “ನಾವು ಭೇಟಿಯಾಗುತ್ತಿರುವುದು ಇದೇ ಕೊನೆ ಇರಬಹುದು” ಎಂದು ಸ್ನೇಹಿತರ ಬಳಿ ತಮಾಷೆಯಾಗಿ ಹೇಳಿದ್ದ ತರುಣಿ, ವಿಮಾನ ಏರುವ ಕೆಲವೇ ಕ್ಷಣಗಳ ಮುನ್ನ ತಮ್ಮ ಜೀವದ ಗೆಳತಿಗೆ “ವಿಮಾನ ಅಪಘಾತವಾದರೆ ಏನು ಮಾಡುವುದು?” ಎಂದು ತಮಾಷೆಯ ಸಂದೇಶ ಕಳುಹಿಸಿದ್ದರು. ಆದರೆ ಆ ತಮಾಷೆಯ ಮಾತುಗಳೇ ನಿಜವಾಗಿ, ಭಾರತೀಯ ಚಿತ್ರರಂಗದ ಭರವಸೆಯ ಬಾಲನಟಿಯೊಬ್ಬರ ಪಯಣ ಅತ್ಯಂತ ದುಃಖದಾಯಕವಾಗಿ ಅಂತ್ಯಗೊಂಡಿತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular