HomeInternationalಒಮಾನ್ ಕಡಲತೀರದಲ್ಲಿ ಅಪರೂಪದ ಗುಲಾಬಿ ಬಣ್ಣದ ಡಾಲ್ಫಿನ್‌ಗಳು ಪ್ರತ್ಯಕ್ಷ: ನೀಲಿ ನೀರಿನಲ್ಲಿ ಜಲವಿಹಾರದ ವಿಡಿಯೋ ವೈರಲ್

ಒಮಾನ್ ಕಡಲತೀರದಲ್ಲಿ ಅಪರೂಪದ ಗುಲಾಬಿ ಬಣ್ಣದ ಡಾಲ್ಫಿನ್‌ಗಳು ಪ್ರತ್ಯಕ್ಷ: ನೀಲಿ ನೀರಿನಲ್ಲಿ ಜಲವಿಹಾರದ ವಿಡಿಯೋ ವೈರಲ್

ಒಮಾನ್ ರಾಜಧಾನಿ ಮಸ್ಕತ್ ಸಮೀಪವಿರುವ ಕಾಂಟಾಬ್ ಕಡಲತೀರದಲ್ಲಿ ಅಪರೂಪದ ಗುಲಾಬಿ ಬಣ್ಣದ ಡಾಲ್ಫಿನ್‌ಗಳು ಪ್ರತ್ಯಕ್ಷಗೊಂಡು ಪ್ರವಾಸಿಗರ ಹಾಗೂ ಸ್ಥಳೀಯರ ಗಮನ ಸೆಳೆದಿವೆ. ಕಡಲತೀರದಲ್ಲಿ ವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ನೀಲಿ ನೀರಿನಲ್ಲಿ ಈಜಾಡುತ್ತಿದ್ದ ಈ ಸುಂದರ ಜಲಚರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಒಮಾನ್ ಕೊಲ್ಲಿಯ ನೀಲಿ ನೀರಿನ ಮಧ್ಯೆ ಗುಲಾಬಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಈ ಡಾಲ್ಫಿನ್‌ಗಳ ಅಪರೂಪದ ನೋಟ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಡಾಲ್ಫಿನ್‌ಗಳು ಬೂದು ಬಣ್ಣದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ, ಈ ರೀತಿಯ ವಿಭಿನ್ನ ಬಣ್ಣದ ಡಾಲ್ಫಿನ್‌ಗಳು ಕಾಣಿಸಿಕೊಳ್ಳುವುದು ಅತಿ ವಿರಳ ಎಂದು ತಜ್ಞರು ತಿಳಿಸಿದ್ದಾರೆ. ದಕ್ಷಿಣ ಅಮೆರಿಕಾದ ಅಮೆಜಾನ್ ನದಿಗಳಲ್ಲಿ ಕಂಡುಬರುವ ಬೊಟೊ ಜಾತಿಯ ಡಾಲ್ಫಿನ್‌ಗಳು ವಯಸ್ಸು, ರಕ್ತ ಸಂಚಲನ ಮತ್ತು ಚರ್ಮದ ಬಣ್ಣ ಬದಲಾವಣೆಯಿಂದಾಗಿ ಗುಲಾಬಿ ಬಣ್ಣಕ್ಕೆ ತಿರುಗುವುದುಂಟು. ಆದರೆ ಮಸ್ಕತ್ ಕಡಲತೀರದಲ್ಲಿ ಕಾಣಿಸಿಕೊಂಡಿರುವ ಈ ನಿರ್ದಿಷ್ಟ ಡಾಲ್ಫಿನ್ ಯಾವ ಪ್ರಭೇಡಕ್ಕೆ ಸೇರಿದೆ ಎಂಬುದು ಸದ್ಯಕ್ಕೆ ಅಧಿಕೃತವಾಗಿ ದೃಢಪಟ್ಟಿದೆ.

ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕಾಂಟಾಬ್ ಕಡಲತೀರದಲ್ಲಿ ಈ ಅನಿರೀಕ್ಷಿತ ದೃಶ್ಯವು ಸಮುದ್ರ ಜೀವವೈವಿಧ್ಯತೆಯ ವೈಶಿಷ್ಟ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ. ಒಮಾನ್ ಕರಾವಳಿಯಲ್ಲಿ ವಿವಿಧ ಜಲಚರಗಳು ಕಂಡುಬಂದರೂ, ಈ ರೀತಿಯ ಗುಲಾಬಿ ಬಣ್ಣದ ಡಾಲ್ಫಿನ್‌ಗಳ ಆಗಮನವು ಕಡಲತೀರಕ್ಕೆ ಆಗಮಿಸಿದ ಪ್ರವಾಸಿಗರಿಗೆ ಮರೆಯಲಾರದ ರೋಮಾಂಚನಕಾರಿ ಅನುಭವವನ್ನು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular