HomeEntertainmentಹಿರಿಯ ಕಲಾವಿದರಾದ ತಕ್ಷಣ ವೃತ್ತಿಪರತೆಯಿಂದ ವಿನಾಯಿತಿ ಸಿಗಲ್ಲ: ದಲೆರ್ ಮೆಹಂದಿ ವಿವಾದದ ಕುರಿತು ಸೋನಾ ಮೊಹಪಾತ್ರ...

ಹಿರಿಯ ಕಲಾವಿದರಾದ ತಕ್ಷಣ ವೃತ್ತಿಪರತೆಯಿಂದ ವಿನಾಯಿತಿ ಸಿಗಲ್ಲ: ದಲೆರ್ ಮೆಹಂದಿ ವಿವಾದದ ಕುರಿತು ಸೋನಾ ಮೊಹಪಾತ್ರ ಮಾರ್ಮಿಕ ನುಡಿ

ಬಾಲಿವುಡ್‌ನ ಖ್ಯಾತ ಗಾಯಕಿ ಸೋನಾ ಮೊಹಪಾತ್ರ ಅವರು ಹಿರಿಯ ಗಾಯಕ ದೆಲೆರ್ ಮೆಹಂದಿ ಅವರ ಇತ್ತೀಚಿನ ವಿವಾದಾತ್ಮಕ ಪ್ರದರ್ಶನದ ಕುರಿತು ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ. ಉತ್ತರಾಖಂಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೆಲೆರ್ ಮೆಹಂದಿ ಅವರ ಪ್ರದರ್ಶನವು ಟೀಕೆಗೆ ಗುರಿಯಾದ ಬೆನ್ನಲ್ಲೇ, ಕಲಾವಿದರ ವೃತ್ತಿಪರ ಜವಾಬ್ದಾರಿ ಹಾಗೂ ಪ್ರೇಕ್ಷಕರ ಗೌರವದ ಕುರಿತು ಸೋನಾ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದಾರೆ.

ದೆಹಲಿಯ ಸುಂದರ್ ನರ್ಸರಿಯಲ್ಲಿ ಈ ವರ್ಷದ ಫೆಬ್ರವರಿ ಕೊನೆಯ ಹಾಗೂ ಮಾರ್ಚ್ ಆರಂಭದಲ್ಲಿ ನಡೆದ ಸೂಫಿ ಹೆರಿಟೇಜ್ ಫೆಸ್ಟಿವಲ್ ಅನ್ನು ಸೋನಾ ಮೊಹಪಾತ್ರ ಉಲ್ಲೇಖಿಸಿದ್ದಾರೆ. ಫೆಬ್ರವರಿ 28ರಂದು ತಾವೇ ಸ್ವತಃ ಮೊದಲ ದಿನದ ಕಾರ್ಯಕ್ರಮದಲ್ಲಿ ಪ್ರಮುಖ ಪ್ರದರ್ಶನ ನೀಡಿರುವುದಾಗಿ ತಿಳಿಸಿರುವ ಅವರು, ಮರುದಿನ ಮಾರ್ಚ್ 1ರಂದು ಮುಕ್ತಾಯದ ಕಾರ್ಯಕ್ರಮದಲ್ಲಿ ದೆಲೆರ್ ಮೆಹಂದಿ ಹಾಡಬೇಕಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಹಿರಿಯ ಗಾಯಕನ ಪ್ರದರ್ಶನವನ್ನು ವೀಕ್ಷಿಸುವ ಉತ್ಸಾಹದಿಂದ ತಮ್ಮ ತಂಡದೊಂದಿಗೆ ಅಲ್ಲೇ ಉಳಿದುಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಆದರೆ ಅಂದು ನಡೆದ ಘಟನೆ ತಮಗೆ ಬೇಸರ ತಂದಿದೆ ಎಂದು ಸೋನಾ ಬರೆದುಕೊಂಡಿದ್ದಾರೆ. ಪ್ರದರ್ಶನದ ವೇಳೆ ದೆಲೆರ್ ಮೆಹಂದಿ ಅವರು ಗೊಂದಲಕ್ಕೊಳಗಾದಂತೆ ಕಂಡುಬಂದರು, ಸರಿಯಾಗಿ ಸ್ವರಗಳನ್ನು ಹಿಡಿಯಲು ಪರದಾಡಿದರು ಮತ್ತು ಒಂದೇ ಸಾಲನ್ನು ಪದೇ ಪದೇ ಪುನರಾವರ್ತಿಸಿದರು ಎಂದು ಅವರು ತಿಳಿಸಿದ್ದಾರೆ. ಹಣ ನೀಡಿ ದೊಡ್ಡ ನಿರೀಕ್ಷೆಯೊಂದಿಗೆ ಬಂದಿದ್ದ ಪ್ರೇಕ್ಷಕರು ಹಂತ ಹಂತವಾಗಿ ಸಭಾತ್ಯಾಗ ಮಾಡುವುದನ್ನು ನೋಡಿ ತುಂಬಾ ನೋವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ಕಲಾವಿದರಿಗೆ ಗೌರವ ನೀಡಬೇಕು ಎಂಬ ಕಾರಣಕ್ಕೆ ಅಂದು ತಾವು ಮೌನವಾಗಿದ್ದೆವು, ಆದರೆ ಈ ರೀತಿ ಮೌನವಾಗಿರುವುದು ಸರಿಯೇ ಅಥವಾ ಇದು ತಪ್ಪುಗಳಿಗೆ ಮನ್ನಣೆ ನೀಡಿದಂತಾಗುತ್ತದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿರಿಯ ಕಲಾವಿದರ ಪರಂಪರೆ ಮತ್ತು ವಯಸ್ಸಿಗೆ ತಕ್ಕ ಗೌರವ ನೀಡಬೇಕು ಎಂಬುದು ನಿಜವಾದರೂ, ವೃತ್ತಿಪರ ಜವಾಬ್ದಾರಿಯಿಂದ ಯಾರೂ ಹೊರತಲ್ಲ ಎಂದು ಸೋನಾ ಅಭಿಪ್ರಾಯಪಟ್ಟಿದ್ದಾರೆ. ಪ್ರೇಕ್ಷಕರು ಮತ್ತು ಆಯೋಜಕರು ನಿರಂತರವಾಗಿ ಇಂತಹ ಸಂಕಷ್ಟಗಳನ್ನು ಎದುರಿಸುವುದು ಸರಿಯಲ್ಲ ಎಂದಿರುವ ಅವರು, ಕಲಾವಿದರಂತೆ ಪ್ರೇಕ್ಷಕರಿಗೂ ಪ್ರಾಮಾಣಿಕ ಪ್ರದರ್ಶನ ಪಡೆಯುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular