HomeKarnatakaಸ್ಟಿಂಗ್ ಆಪರೇಷನ್ ಒಳ್ಳೆಯದೇ; ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ ಎಂದ ಶಿವಗಂಗಾ...

ಸ್ಟಿಂಗ್ ಆಪರೇಷನ್ ಒಳ್ಳೆಯದೇ; ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ ಎಂದ ಶಿವಗಂಗಾ ಬಸವರಾಜ್

ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಶಾಸಕ ಶಿವಗಂಗಾ ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಶಿವಗಂಗಾ ಬಸವರಾಜ್, ಸ್ಟಿಂಗ್ ಆಪರೇಷನ್‌ ಒಂದು ರೀತಿ ಒಳ್ಳೆಯದು. ಸ್ಟಿಂಗ್ ಆಪರೇಷನ್ ನಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ, ಯಾರು ಎಲ್ಲೂ ಹೋಗದಂತೆ ಮನೆಕಡೆ ಗಮನ ಹರಿಸುತ್ತಾರೆ. ಈ ರೀತಿ ಮಾಡೋದೂ ಒಂದು ತರಹ ಒಳ್ಳೆಯದು ಅನ್ನಿಸುತ್ತೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟಿಂಗ್ ಆಪರೇಷನ್ ನೋಡಿದ್ರೆ ನಮಗೂ ಭಯ ಅನಿಸುತ್ತೆ. ಯಾವ ತರ ರಾಜಕಾರಣ ಮಾಡಬೇಕು? ಜನರ ನಡುವೆ ಹೇಗೆ ಇರಬೇಕು? ಅನ್ನೋ ಭಯ ಆಗುತ್ತಿದೆ. ಸ್ಟಿಂಗ್ ಮಾಡೋದು ತಪ್ಪು ಈ ವ್ಯವಸ್ಥೆನ ಸರಿ ಪಡಿಸೋ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಇನ್ನೂ ಸ್ಟಿಂಗ್ ಆಪರೇಷನ್‌ ಮಾಡಿ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ ಅವರೆಲ್ಲ ಈ ರೀತಿ ಸ್ಟಿಂಗ್ ಆಪರೇಷನ್‌ಗೆ ಬಗ್ಗೋ ವ್ಯಕ್ತಿ ಅಲ್ಲ. ಒಪ್ಪಂದದ ಪ್ರಕಾರ ರಾಹುಲ್ ಗಾಂಧಿ ಹೇಳಿದಂತೆ ರಾಜೀನಾಮೆ ಕೊಟ್ಟಿದ್ದಾರೆ. 3-2 ಒಪ್ಪಂದ ಆಗಿರಬಹುದು ಅದಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮೂರು ವರ್ಷದ ನಂತರಾನೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದು ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಆಸ್ತಿ, ಮಾಸ್ ಲೀಡರ್. ಅವರನ್ನ ಡಿಸ್ಟರ್ಬ್ ಮಾಡಲು ವಿರೋಧ ಪಕ್ಷದವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಪರ ಆಪ್ತ ಕಾಂಗ್ರೆಸ್ ನಾಯಕರು ನಿಲ್ಲುತ್ತಿಲ್ಲ ವಿಚಾರ ಕುರಿತು ಮಾತನಾಡಿ, ಸಿದ್ದರಾಮಯ್ಯ ಪರ ನಾನು ಯಾವಾಗಲೂ ನಿಲ್ಲುತ್ತೇನೆ. ಸಿದ್ದರಾಮಯ್ಯ ಸಿಂಹ ಇದ್ದಂತೆ ಯಾವುದೇ ಕಾರಣಕ್ಕೂ ಸ್ಟಿಂಗ್ ಆಪರೇಷನ್‌ಗೆ ಹೆದರಲ್ಲ. ಅವ್ರು ಜೆ.ಎಚ್ ಪಟೇಲ್ ಜೊತೆ ಬೆಳೆದ ವ್ಯಕ್ತಿ. ಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆ ಆಗಲಿ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಲಿ. ಈ ರೀತಿಯ ರಾಜಕಾರಣ ಮಾಡಿಕೊಂಡು ಹೋಗಬಾರದು, ಬರ ಇದೆ ಅದರ ಕಡೆ ಎಲ್ಲರೂ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ಮಂತ್ರಿ ಆಗಿದ್ದಾರೆ, ಎಲ್ಲಾ ಪಕ್ಷದವರನ್ನ ಕರೆದುಕೊಂಡು ನಿಯೋಗ ಹೋಗಬೇಕು. ಕುಮಾರಸ್ವಾಮಿಯವರು ಹೋರಾಟ ಮಾಡಲಿ ಅದು ಎಲ್ಲರ ಹಕ್ಕು. ಅದಕ್ಕಿಂತ ಮುಂಚೆ ಬರದ ಬಗ್ಗೆ ಕಾಳಜಿ ವಹಿಸಲಿ. ಏನೇ ಆದ್ರೂ ಕೂಡ ವಿರೋಧ ಪಕ್ಷದವರು ಕಾಂಗ್ರೆಸ್ ನವರ ಕೈವಾಡ ಇದೆ ಅಂತಾರೆ ಎಂದು ದೂರಿದರು.

ಇನ್ನೂ ಡಿ.ಕೆ.ಶಿಶಿವಕುಮಾರ್ ಸ್ಟಿಂಗ್ ಆಪರೇಷನ್ ಪಿತಾಮಹ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ, ಸ್ಟಿಂಗ್ ಆಪರೇಷನ್ ಪಿತಾಮಹ ಯಾರು ಎಂದು ಎಲ್ಲಾ ಜನಕ್ಕೆ ಗೊತ್ತಿದೆ. ಕುಮಾರಸ್ವಾಮಿ ಅವರೇ ನನ್ನ ಬಳಿ ಪೆನ್‌ಡ್ರೈವ್ ಇದೆ ಅಂತಾ ತೋರಿಸುತ್ತಿದ್ದರು. ಅದಾದ ನಂತ್ರ ಯಾರ ಪೆಡ್ರೈವ್ ಹೊರಬಂತು ಅನ್ನೋದು ಗೊತ್ತಿದೆ. ಅವರ ಮನೆಯ ಪೆನ್‌ಡ್ರೈವ್ ಇಟ್ಟುಕೊಂಡೆ ತೋರಿಸಿದ್ದರು. ಡಿಕೆಶಿ ಅವರು ನಮಗೆ ಮೊದಲೇ ಹುಷಾರಾಗಿ ಇರಿ ಅಂತಾ ಹೇಳಿದ್ರು. ರಾಜ್ಯ ಸರ್ಕಾರ ಗ್ಯಾರಂಟಿ, ಜೊತೆ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಮತ್ತೆ 2028ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ನಿಂದ ಯಾವುದೇ ಅಹಿಂದ ನಾಯಕರ ತುಳಿಯುವ ಕೆಲಸ ಆಗುತ್ತಿಲ್ಲ. ಸತೀಶ್ ಜಾರಕಿಹೊಳಿ ಮೇಲೆ ಇಡಿ ರೈಡ್ ಆದಾಗ ಡಿಕೆಶಿ ಅವರು ಮನೆಗೆ ಹೋಗಿ ಧೈರ್ಯ ಹೇಳಿದ್ರು. ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular