HomeKarnatakaರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಃಸಿದ್ಧ: ಆಗ ನನ್ನ ಇನ್ನೊಂದು ಮುಖ ತೋರಿಸ್ತೀನಿ ಎಂದ ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಃಸಿದ್ಧ: ಆಗ ನನ್ನ ಇನ್ನೊಂದು ಮುಖ ತೋರಿಸ್ತೀನಿ ಎಂದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಃಸಿದ್ಧ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಆಗ ನಾನು ನನ್ನ ಇನ್ನೊಂದು ಮುಖವನ್ನು ತೋರಿಸುತ್ತೇನೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಇಲ್ಲದಿದ್ರೆ ಕಾಂಗ್ರೆಸ್​ ಯಾವತ್ತೋ ಮುಗಿದು ಹೋಗ್ತಿತ್ತು. ಅವರ ಜೊತೆ ರಾಜಕೀಯವಾಗಿ ದೊಡ್ಡ ಹೋರಾಟ ಮಾಡಿದ್ದೇನೆ. ಆದರೆ ಈಗ ಸಿದ್ದರಾಮಯ್ಯರನ್ನು ಮುಗಿಸಲು ಏನೆಲ್ಲಾ ನಡೆದಿದೆ? ಯಾವಾಗಲೂ ಅಧಿಕಾರದಲ್ಲಿ ನೀವೇ ಇರ್ತಿರಾ, 1 ವರ್ಷ ಕಳೆಯಲಿ ಏನಾಗುತ್ತೆ ಎಂದು ಗೊತ್ತಾಗಲಿದೆ. ಹಾಸನಾಂಬೆ ದೇವಾಲಯದ ಬಾಗಿಲು ಶೀಘ್ರದಲ್ಲೇ ತೆರೆಯಲಿದ್ದು, ದೇವಾಲಯದಲ್ಲಿ ಕುಳಿತು ಮಾತನಾಡುತ್ತೇನೆ. ಸಿದ್ದರಾಮಯ್ಯ ಯಾಕೆ ಬಾಯಿ ಬಿಡ್ತಿಲ್ಲ ಅನ್ನೋದೆ ನನಗೆ ಆಶ್ಚರ್ಯ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆಂದು ಆ ವ್ಯಕ್ತಿ ಹೇಳಿದ್ದು, ತನಿಖೆ ನಡೆಸಲು ಇನ್ನೇನು ದಾಖಲೆ ಬೇಕು? ಪಕ್ಷದ ಕಾರ್ಯಕರ್ತೆಯನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಹೆಸರು ಹೇಳು ಅಂತಾರೆ. ಸಿದ್ದರಾಮಯ್ಯ ಎಷ್ಟೊತ್ತು ಇದ್ದರು, ಅವರ ದೇಹದ ಗುರುತು ಇದೆಯಾ ಎಂದು ಕಾರ್ಯಕರ್ತೆಯೊಬ್ಬರನ್ನು ಪ್ರಶ್ನೆ ಮಾಡುತ್ತಾರೆ. ಆ ವ್ಯಕ್ತಿಯನ್ನ ಟಚ್​ ಮಾಡೋಕೆ ಆಗ್ತಿಲ್ಲ, ಯಾಕೆ ಟಚ್ ಮಾಡೋಕೆ ಆಗ್ತಿಲ್ಲ? ಸಾಕಷ್ಟು ಪೊಲೀಸ್​ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಕೂಡ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಹಲವು ನಾಯಕರ ಸ್ಟಿಂಗ್ ಆಪರೇಷನ್ ಆಗಿದೆ ಎಂದು ರಾಜಣ್ಣ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಿರಿಯ ಶಾಸಕರ ಬಾಯಿಯನ್ನೇ ಮುಚ್ಚಿಸಿದ್ದಾರೆ. ಒಬ್ಬರು ಮಾಜಿ ಪ್ರಧಾನಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡ್ತಾನೆ. ಈ ಕಾಂಗ್ರೆಸ್ ಸರ್ಕಾರ ಎಲ್ಲಿಗೆ ಹೋಗ್ತಿದೆ ಎಂದವರು ಪ್ರಶ್ನಿಸಿದರು.

ಗೃಹ ಸಚಿವರ ನಡೆ ನೋಡಿದ್ರೆ ಹುನ್ನಾರ ನಡೆದಿದೆ ಎನ್ನಿಸುತ್ತಿದೆ. ನನ್ನನ್ನು ಪ್ರಚೋದಿಸಲು ಸಿಎಂರಿಂದ ನಿರ್ದೇಶನ ತೆಗೆದುಕೊಂಡು ಪ್ರಿಯಾಂಕ್ ಖರ್ಗೆ ಹೀಗೆ ಮಾತನಾಡುತ್ತಿದ್ದಾರೆ. ನನ್ನನ್ನು ಉತ್ತರ ಕುಮಾರ ಅಂತಾರೆ. ಕೆಪಿಎಸ್ ಸಿ ಹಗರಣದ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಎಲ್ಲಿದೆ ಅಂತಾರೆ. ಕೆಪಿಎಸ್​​ಸಿ ಹಗರಣದ ವಿಚಾರದಲ್ಲಿ ಅವರ ಬಳಿ ಉತ್ತರವೇ ಇಲ್ಲ ಎಂದೂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರಿಯಾಂಕ್​​ ಖರ್ಗೆ ಕೂಡ ಕೌಂಟರ್​​ ನೀಡಿದ್ದು, ನಾನು ಯಾರಿಂದಲೂ ನಿರ್ದೇಶನ ತೆಗೆದುಕೊಂಡು ಮಾತನಾಡಲ್ಲ. ಮಣ್ಣಿನ‌ ಮಕ್ಕಳು ಸಿನಿಮಾ ನಿರ್ಮಾಣ ಮಾಡಬಹುದಂತೆ, ಜಾಗ್ವಾರ್ ಆಗಬಹುದಂತೆ. ಆದರೆ ಓರ್ವ ದಲಿತ ಬಲಿತ ಆಗಬಾರದಂತೆ. ಏನ್ರೀ ಕುಮಾರಸ್ವಾಮಿ ಅವರೇ ಲೆಕ್ಕ ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular