HomeEntertainmentಕುಟುಂಬದ ಆಧಾರಸ್ತಂಭ ಅಗಲಿದ ದುಃಖ: ಗಾಯಕಿ ನೀತಿ ಮೋಹನ್ ತಂದೆಯ ಅಗಲಿಕೆಗೆ ಬಾಲಿವುಡ್ ಕಣ್ಣೀರು

ಕುಟುಂಬದ ಆಧಾರಸ್ತಂಭ ಅಗಲಿದ ದುಃಖ: ಗಾಯಕಿ ನೀತಿ ಮೋಹನ್ ತಂದೆಯ ಅಗಲಿಕೆಗೆ ಬಾಲಿವುಡ್ ಕಣ್ಣೀರು

ಖ್ಯಾತ ಗಾಯಕಿ ನೀತಿ ಮೋಹನ್ ಅವರ ತಂದೆ ಬ್ರಿಜ್ ಮೋಹನ್ ಶರ್ಮಾ ಅಕ್ಟೋಬರ್ 15 ರಂದು ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ನಟಿ ಮುಕ್ತಿ ಮೋಹನ್, ನೃತ್ಯಪಟು ಶಕ್ತಿ ಮೋಹನ್ ಹಾಗೂ ಕೃತಿ ಮೋಹನ್ ಅವರ ತಂದೆಯೂ ಆಗಿದ್ದರು. ತಮ್ಮ ತಂದೆಯ ಅಗಲಿಕೆಯ ನೋವನ್ನು ನೀತಿ ಮೋಹನ್ ಅಕ್ಟೋಬರ್ 18 ರ ಭಾನುವಾರದಂದು ಭಾವನಾತ್ಮಕ ಸಂದೇಶದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಂದೆಯ ನಿಧನಕ್ಕೆ ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.

ತಂದೆಯನ್ನು ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನೀತಿ ಮೋಹನ್, ತಮ್ಮ ಕುಟುಂಬಕ್ಕೆ ಅವರು ಮಾರ್ಗದರ್ಶಕ ಬೆಳಕು ಹಾಗೂ ದೊಡ್ಡ ಆಧಾರಸ್ತಂಭವಾಗಿದ್ದರು ಎಂದು ತಿಳಿಸಿದ್ದಾರೆ. ಅವರ ಬುದ್ಧಿವಂತಿಕೆ, ದಯೆ, ಮೌಲ್ಯಗಳು ಮತ್ತು ನಿಷ್ಕಪಟ ಪ್ರೀತಿ ಸದಾ ತಮ್ಮ ಹೃದಯದಲ್ಲಿ ಉಳಿಯಲಿದೆ ಎಂದು ತಿಳಿಸಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶೀರ್ವಾದ, ಕಲಿಕೆ ಮತ್ತು ಸುಂದರ ನೆನಪುಗಳು ಜೀವನದುದ್ದಕ್ಕೂ ಮಾರ್ಗದರ್ಶನ ನೀಡುತ್ತಿರುತ್ತವೆ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಅನುಪಸ್ಥಿತಿಯು ಎಂದಿಗೂ ತುಂಬಲಾರದ ಶೂನ್ಯವನ್ನುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

ನೀತಿ ಮೋಹನ್ ಅವರ ಈ ಪೋಸ್ಟ್ ಬೆನ್ನಲ್ಲೇ ಚಲನಚಿತ್ರ ಮತ್ತು ಸಂಗೀತ ಲೋಕದ ಅನೇಕ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್, ದಿಯಾ ಮಿರ್ಜಾ, ರಾಹುಲ್ ವೈದ್ಯ, ನೇಹಾ ಧೂಪಿಯಾ, ಶ್ರೇಯಸ್ ತಳ್ಪಡೆ ಹಾಗೂ ಮನೀಶ್ ಪಾಲ್ ಸೇರಿದಂತೆ ಹಲವು ಕಲಾವಿದರು ಕುಟುಂಬದ ದುಃಖದಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular