HomeKarnatakaಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ನಾಳೆ ಮಧ್ಯರಾತ್ರಿವರೆಗೂ ಸಂಚರಿಸಲಿದೆ ನಮ್ಮ ಮೆಟ್ರೋ

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ನಾಳೆ ಮಧ್ಯರಾತ್ರಿವರೆಗೂ ಸಂಚರಿಸಲಿದೆ ನಮ್ಮ ಮೆಟ್ರೋ

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಆರ್ ಸಿ ಎಲ್ ಗುಡ್ ನ್ಯೂಸ್ ನೀಡಿದೆ. ನಾಳೆ ಮಧ್ಯರಾತ್ರಿವರೆಗೂ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ ಎಂದು ಮಾಹಿತಿ ನೀಡಿದೆ.

ನಾಳೆ ಅಕ್ಟೋಬರ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ T20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಿ ಮನೆಗೆ ಮರಳುವ ಕ್ರೀಡಾಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ಮೆಟ್ರೋ ರೈಲು ಸೇವೆಗಳ ಸಮಯವನ್ನು ವಿಸ್ತರಿಸಿ ಬೆಂಗಳೂರು ನಮ್ಮ ಮೆಟ್ರೋ ನಿಗಮ ಮಹತ್ವದ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ರಿಕೆಟ್ ಪಂದ್ಯ ಮುಗಿದ ಬಳಿಕ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನಾಳೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮರುದಿನ ಮುಂಜಾನೆ 01:15 ಗಂಟೆಯವರೆಗೆ ವಿಸ್ತರಿಸಲಾಗಿದೆ. ವಿವಿಧ ಪ್ರಮುಖ ಮಾರ್ಗಗಳ ಕೊನೆಯ ರೈಲು ಸಮಯದ ವಿವರ ಇಲ್ಲಿದೆ.

ವೈಟ್‌ಫೀಲ್ಡ್ (ಕಾಡುಗೋಡಿ): ಮಧ್ಯರಾತ್ರಿ 12:00 ಗಂಟೆಗೆ ಕೊನೆಯ ರೈಲು ಹೊರಡಲಿದೆ.

ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಮಾದವಾರ: ಮರುದಿನ ಮುಂಜಾನೆ 12:15 ಗಂಟೆಗೆ ಕೊನೆಯ ರೈಲು ಸಂಚಾರ ಮಾಡಲಿದೆ.

ಬೊಮ್ಮಸಂದ್ರ: ಮಧ್ಯರಾತ್ರಿ 12:00 ಗಂಟೆಗೆ ಕೊನೆಯ ರೈಲು ಇರಲಿದೆ.

ಆರ್.ವಿ. ರಸ್ತೆ (RV Road): ಮರುದಿನ ಮುಂಜಾನೆ 01:30 ಗಂಟೆಗೆ ಕೊನೆಯ ರೈಲು ಸಂಚಾರ ಮಾಡಲಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್): ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಹೊರಡುವ ಕೊನೆಯ ರೈಲು ಮರುದಿನ ಮುಂಜಾನೆ 1:00 ಗಂಟೆಗೆ ಹೊರಡಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ QR ಕೋಡ್:

ಪಂದ್ಯವನ್ನು ವೀಕ್ಷಿಸಿ ವಾಪಸ್ಸಾಗುವಾಗ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರಯಾಣವನ್ನು ಸುಗಮಗೊಳಿಸಲಾಗಿದೆ. ಪ್ರಯಾಣಿಕರು ಎರಡು-ಮಾರ್ಗದ ಪ್ರಯಾಣಕ್ಕಾಗಿ ಡಿಜಿಟಲ್ T-20 ಪಂದ್ಯದ ಟಿಕೆಟ್‌ಗಳಲ್ಲೇ ‘ನಮ್ಮ ಮೆಟ್ರೋ QR ಕೋಡ್’ ಅನ್ನು ಅಳವಡಿಸಲಾಗಿದೆ.

ಇದರ ಮೂಲಕ ಅಭಿಮಾನಿಗಳು ಸುಲಭವಾಗಿ ಮೆಟ್ರೋ ಪ್ರಯಾಣ ಮಾಡಬಹುದು. ಕ್ರೀಡಾಂಗಣದಲ್ಲಿ ಪ್ರವೇಶ/ನಿರ್ಗಮನ ಗೇಟ್‌ಗಳ ಆಧಾರದ ಮೇಲೆ ನಿಗದಿತ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ BMRCL ಕೋರಿದೆ. ಕಬ್ಬನ್ ರಸ್ತೆ ಮೂಲಕವಿರುವ ಗೇಟ್‌ಗಳಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಹಾಗೂ ಲಿಂಕ್ ರಸ್ತೆ ಮೂಲಕವಿರುವ ಗೇಟ್‌ಗಳಿಗೆ ಸಮೀಪವಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸಲು ಸಲಹೆ ನೀಡಲಾಗಿದೆ.

ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ನಿಲ್ದಾಣದ ಪ್ರವೇಶ ಬಿಂದುಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು BMRCL ಕಾಯ್ದುಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular