HomeIndiaBREAKING: ವಿಷಾಹಾರ ಸೇವಿಸಿ ಬಿಎಸ್ ಎಫ್ ನ 78 ಸಿಬ್ಬಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

BREAKING: ವಿಷಾಹಾರ ಸೇವಿಸಿ ಬಿಎಸ್ ಎಫ್ ನ 78 ಸಿಬ್ಬಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಇಂಫಾಲ: ಬೆಳಗಿನ ಉಪಹಾರ ಸೇಸಿದ್ದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಸಿಬ್ಬಂದಿ ಹಾಗೂ ಮೂವರು ನಾಗರಿಕರು ಸೇರಿದಂತೆ 78 ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.

ಮಣಿಪುರದ ಬಿಎಸ್ ಎಫ್ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ. ಕ್ಯಾಂಪ್ ನಲ್ಲಿ ಬೆಳಿಗ್ಗೆ ನೀಡಲಾಗಿದ್ದ ಉಪಹಾರ ಸೇವಿಸಿದ ಬಳಿಕ ಎಸ್ ಎಫ್ ನ 75 ಸಿಬ್ಬಂದಿಗಳು ಹಾಗೂ ಮೂವರು ನಾಗರಿಕರು ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥರಾಗಿದ್ದಾರೆ. ಹಲವರಲ್ಲಿ ಪದೇ ಪದೇ ವಾಂತಿಯಾಗಿದೆ. ಇಡೀ ಕ್ಯಾಂಪ್ ಸಿಬ್ಬಂದಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಸ್ವಸ್ಥರನ್ನು ತಕ್ಷಣ ಇಂಫಾಲದ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾಹಾರ ಸೇವಿಸಿ ಫುಡ್ ಪಾಯಿಸನಿಂಗ್ ಆಗಿದೆ ಎಂದು ಆರ್‌ಐಎಂಎಸ್ (RIMS) ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಡಾ. ರಮೇಶ್ವರ್ ಸಿಂಗ್ ತಿಳಿಸಿದ್ದಾರೆ.

ಬೆಳಗಿನ ಉಪಹಾರ ಸೇವಿಸಿದ ನಂತರ ಬಿಎಸ್‌ಎಫ್‌ನ ಸಂಪೂರ್ಣ ತುಕಡಿಯ ಸಿಬ್ಬಂದಿಗೆ ಪದೇ ಪದೇ ವಾಂತಿಯಿಂದ ಬಳಲಿದ್ದಾರೆ. ತಕ್ಷಣ ಅವರನ್ನು ನಮ್ಮ ಒಪಿಡಿ (OPD) ವಿಭಾಗಕ್ಕೆ ಕರೆತರಲಾಯಿತು. ಇದೊಂದು ಆಹಾರ ವಿಷಬಾಧೆಯ ಪ್ರಕರಣವಾಗಿದೆ. ಅವರೆಲ್ಲರೂ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಾವು ಅವರಿಗೆ ಅಗತ್ಯವಾದ ದ್ರವಾಹಾರವನ್ನು (fluids) ನೀಡುತ್ತಿದ್ದೇವೆ… ಕೆಲವೇ ಗಂಟೆಗಳಲ್ಲಿ ಎಲ್ಲ ರೋಗಿಗಳು ಗುಣಮುಖರಾಗಲಿದ್ದಾರೆ. ಇದರಲ್ಲಿ ಮೂವರು ನಾಗರಿಕರು ಸೇರಿದಂತೆ ಒಟ್ಟು 78 ಬಿಎಸ್‌ಎಫ್ ಸಿಬ್ಬಂದಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಂಧನ ಇಲಾಖೆ ಕಟ್ಟಡದಿಂದ ಹಾರಿ ಕಿರಿಯ ಸಹಾಯಕ ಆತ್ಮಹತ್ಯೆಗೆ ಶರಣು

ಬೆಂಗಳೂರು: ಇಂಧನ ಇಲಾಖೆಯ ಕಟ್ಟಡದ ಮೇಲಿಂದ ಜಿಗಿದು ಕಿರಿಯ ಸಹಾಯಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿರುವ ಇಂಧನ ಇಲಾಖೆ ಕಟ್ಟಡದಲ್ಲಿ ನಡೆದಿದೆ.

48 ವರ್ಷದ ವಜ್ರಕುಮಾರ್ ಆತ್ಮಹತ್ಯೆಗೆ ಶರಣಾದ ನೌಕರ. ಇಂಧನ ಇಲಾಖೆಯ ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಕಟ್ಟಡದ 6ನೇ ಫ್ಲೋರ್‌ನಿಂದ ಬಿದ್ದು ವಜ್ರಕುಮಾರ್ ಸಾವಿಗೆ ಶರಣಾಗಿದ್ದಾರೆ.

ವಜ್ರಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಜ್ರಕುಮಾರ್ ಇಂಧನ ಇಲಾಖೆ ಕಚೇರಿಯಲ್ಲಿ ಕಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಜ್ರಕುಮಾರ್ ಅವರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಜ್ರಕುಮಾರ್‌ಗೆ ಮಕ್ಕಳಿರಲಿಲ್ಲ, ಇತ್ತೀಚಿಗೆ ವಿಚ್ಛೇದನ ಕೂಡ ಪಡೆದುಕೊಂಡಿದ್ದರು. ಅಲ್ಲದೇ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರೂ ಹಣ ಬಂದಿರಲಿಲ್ಲ ಎಂದು ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ. ಇದೂ ಕೂಡ ಅವರು ಆತ್ಮಹತ್ಯೆಗೆ ಶರಣಾಗಲು ಕಾರಣವಿರಬಹುದು ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular