HomeEntertainmentಬಿಡುಗಡೆಗೆ ಸಜ್ಜಾದ 'ರಾಮಾಯಣ ಚಿತ್ರದ ಹೊಸ ಟ್ರೈಲರ್: ವೀಕ್ಷಕರ ವಲಯದಲ್ಲಿ ಹೆಚ್ಚಿದ ಕಾತರ!

ಬಿಡುಗಡೆಗೆ ಸಜ್ಜಾದ ‘ರಾಮಾಯಣ ಚಿತ್ರದ ಹೊಸ ಟ್ರೈಲರ್: ವೀಕ್ಷಕರ ವಲಯದಲ್ಲಿ ಹೆಚ್ಚಿದ ಕಾತರ!

ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಪೌರಾಣಿಕ ಕಥೆಯುಳ್ಳ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬರುವ ನವೆಂಬರ್ 5, 2026 ರಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿರುವ ಈ ಸಿನಿಮಾದ ಎರಡನೇ ಟ್ರೈಲರ್ ಇಂದು ಬಿಡುಗಡೆಯಾಗಲಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಟ್ರೈಲರ್ ಬಿಡುಗಡೆಯಾಗುವ ನಿಖರವಾದ ಸಮಯವನ್ನು ನಿರ್ಮಾಪಕರು ಇನ್ನೂ ಅಧಿಕೃತವಾಗಿ ಪ್ರಕಟಿಸದಿದ್ದರೂ, ಚಿತ್ರದ ಬ್ರಹ್ಮಾಂಡ ಸೆಟ್‌ಗಳು ಮತ್ತು ತಂತ್ರಜ್ಞಾನದ ವೈಭವವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈ ಹೊಸ ಟ್ರೈಲರ್ ಚಿತ್ರದ ಮೇಲಿನ ಹೈಪ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ.

ಬಂದಿರುವ ವರದಿಗಳ ಪ್ರಕಾರ, ಟ್ರೈಲರ್‌ನಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಮೊದಲು ಕಾಣಿಸಿಕೊಳ್ಳಲಿದ್ದು, ಬಳಿಕ ಪ್ರಭು ಶ್ರೀರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಎಂಟ್ರಿ ನೀಡಲಿದ್ದಾರೆ. ಇವರೊಂದಿಗೆ ಸೀತಾ ಮಾತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅಭಿನಯಿಸಿದ್ದು, ನಿತೇಶ್ ತಿವಾರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಸೋನಿ ಪಿಕ್ಚರ್ಸ್ ಜಾಗತಿಕ ಮಟ್ಟದಲ್ಲಿ ವಿತರಣೆ ಮಾಡುತ್ತಿದೆ. ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಅನುಭವ ನೀಡಲು ಚಿತ್ರತಂಡ ಸಜ್ಜಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular