HomeIndiaಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಸಾವಿನ ದವಡೆಗೆ ಸಿಲುಕಿದ ಪ್ರಯಾಣಿಕ! ಕ್ಷಣಾರ್ಧದಲ್ಲಿ ಜೀವ ಉಳಿಸಿದ ಮಹಿಳಾ...

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಸಾವಿನ ದವಡೆಗೆ ಸಿಲುಕಿದ ಪ್ರಯಾಣಿಕ! ಕ್ಷಣಾರ್ಧದಲ್ಲಿ ಜೀವ ಉಳಿಸಿದ ಮಹಿಳಾ ಪೊಲೀಸ್‌ |WATCH VIDEO

ರೈಲಿನಲ್ಲಿ ಪ್ರಯಾಣಿಸುವಾಗ ಸುರಕ್ಷಿತವಾಗಿ, ಸಂತೋಷದಿಂದ ಪ್ರಯಾಣಿಸಬೇಕೆಂದರೆ ರೈಲು ಹತ್ತುವಾಗ ಮತ್ತು ಇಳಿಯುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಆದರೆ ಕೆಲವರು ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ತಮ್ಮ ಜೀವವನ್ನೇ ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಾರೆ. ಇಂತಹ ಘಟನೆಗಳಲ್ಲಿ ಕೆಲವರು ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಇದೀಗ ಸಮಯಪ್ರಜ್ಞೆ ಮತ್ತು ನಿರಂತರ ಎಚ್ಚರಿಕೆ ವ್ಯಕ್ತಿಯೊಬ್ಬರ ಜೀವವನ್ನು ಹೇಗೆ ಉಳಿಸಬಲ್ಲದು ಎಂಬುದಕ್ಕೆ ಹೈದರಾಬಾದ್‌ನ ಕಾಚಿಗುಡ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಕಾಚಿಗುಡ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಬಂದಿದ್ದ ಮಹಬೂಬ್‌ನಗರ–ವಿಶಾಖಪಟ್ಟಣಂ ಎಕ್ಸ್‌ಪ್ರೆಸ್‌ (12862) ರೈಲು ನಿಧಾನವಾಗಿ ಚಲಿಸಲು ಆರಂಭಿಸಿತ್ತು. ಈ ವೇಳೆ ಓರ್ವ ಪ್ರಯಾಣಿಕನು ಆತುರದಿಂದ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದ್ದಾನೆ. ರೈಲು ವೇಗ ಪಡೆದುಕೊಳ್ಳುತ್ತಿದ್ದಂತೆ ಆತನ ಹಿಡಿತ ತಪ್ಪಿ, ಕಾಲು ಜಾರಿ ಪ್ಲಾಟ್‌ಫಾರ್ಮ್‌ ಮತ್ತು ರೈಲ್ವೆ ಹಳಿಗಳ ನಡುವಿನ ಅಪಾಯಕಾರಿ ಜಾಗಕ್ಕೆ ಬೀಳುವ ಹಂತಕ್ಕೆ ತಲುಪಿದ್ದಾನೆ.

ಇದನ್ನು ಗಮನಿಸಿದ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ರೈಲ್ವೆ ರಕ್ಷಣಾ ಪಡೆ (RPF) ಕಾನ್‌ಸ್ಟೆಬಲ್‌ ರೀನಾ ಕುಮಾರಿ ಅವರು ಕ್ಷಣಾರ್ಧದಲ್ಲೇ ಕಾರ್ಯಪ್ರವೃತ್ತರಾಗಿದ್ದಾರೆ. ಯಾವುದೇ ವಿಳಂಬ ಮಾಡದೆ ತಕ್ಷಣ ಪ್ರಯಾಣಿಕನನ್ನು ಹಿಡಿದು ಪ್ಲಾಟ್‌ಫಾರ್ಮ್‌ ಮೇಲೆ ಎಳೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾನ್‌ಸ್ಟೆಬಲ್‌ ರೀನಾ ಕುಮಾರಿ ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ತಕ್ಷಣದ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅವರ ಸಮಯೋಚಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಚಲಿಸುತ್ತಿರುವ ರೈಲನ್ನು ಹತ್ತುವುದು ಅಥವಾ ಇಳಿಯುವುದು ಅತ್ಯಂತ ಅಪಾಯಕಾರಿ. ಆತುರದ ನಿರ್ಧಾರಗಳಿಂದ ಅಮೂಲ್ಯ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳಬಾರದು. ರೈಲು ಸಂಪೂರ್ಣವಾಗಿ ನಿಂತ ಬಳಿಕವೇ ಹತ್ತಬೇಕು ಅಥವಾ ಇಳಿಯಬೇಕು ಎಂದು ಸಲಹೆ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular