HomeKarnatakaಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ; ನೋಂದಣಿಗೆ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ; ನೋಂದಣಿಗೆ ಆಹ್ವಾನ

ಬಳ್ಳಾರಿ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಸರ್ಕಾರದ ಬ್ಯಾಂಕಿಂಗ್, ಎಸ್‌ಎಸ್‌ಸಿ ಹಾಗೂ ಆರ್‌ಆರ್‌ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನೀಡಲು ನಿರ್ಧರಿಸಲಾಗಿದ್ದು, ಅರ್ಹರು ನೋಂದಾಯಿಸಿಕೊಳ್ಳಬಹುದಾಗಿದೆ.

ಆಸಕ್ತರು ಅ.19 ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ದೂ.0821-2515944 ಗೆ ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವ ಪ್ರೊ.ಎಂ.ಪಿ.ಸದಾಶಿವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.17 ರಂದು ನೇರ ಸಂದರ್ಶನ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 17 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಚಿತ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಸಂಸ್ಥೆಯು ತಮ್ಮಲ್ಲಿ ಖಾಲಿ ಇರುವ 20 ಕ್ಕೂ ಹೆಚ್ಚು ಡೆವಲಪ್ಮೆಂಟ್ ಮ್ಯಾನೇಜರ್ (ಟೆಲಿಕಾಲರ್) ಹಾಗೂ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳುವರು.

ಪರವಾನಗಿ ಇಲ್ಲದೆ ಜೈವಿಕ ಗೊಬ್ಬರ ಮಾರಾಟ-ರೂ. 61.20 ಲಕ್ಷ ಮೌಲ್ಯದ ದಾಸ್ತಾನು ಜಪ್ತಿ

ನಗರದಲ್ಲಿ ಯಾವುದೇ ಮಾನ್ಯತೆ ಪಡೆದ ರಸಗೊಬ್ಬರ ಮಾರಾಟ ಪರವಾನಗಿ ಇಲ್ಲದೆ ಅನಧಿಕೃತವಾಗಿ ಸಾವಯವ ಗೊಬ್ಬರ ಹಾಗೂ ಬಯೋಸ್ಟಿಮ್ಯುಲಂಟ್ (ಜೈವಿಕ ಉತ್ತೇಜಕ) ಮಾರಾಟ ಮಾಡುತ್ತಿದ್ದ ಮಂಜುಶ್ರೀ ಮಾರ್ಕೆಟಿಂಗ್ ಮಳಿಗೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಂಟಿ ದಾಳಿ ನಡೆಸಿ, ಬರೋಬ್ಬರಿ ರೂ. 61.20 ಲಕ್ಷ ಮೌಲ್ಯದ ದಾಸ್ತಾನನ್ನು ವಶಪಡಿಸಿಕೊಂಡಿದೆ.

ಮAಗಳವಾರ, ಕೃಷಿ ಇಲಾಖೆಯ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ಉಮೇಶ್, ಬಳ್ಳಾರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಹಾಗೂ ಸಿಬ್ಬಂದಿ, ಮಂಜುಶ್ರೀ ಮಾರ್ಕೆಟಿಂಗ್ ಮಳಿಗೆಯ ಮೇಲೆ ಜಂಟಿ ತಪಾಸಣೆ ಕೈಗೊಂಡಿದ್ದರು.

ಪರಿಶೀಲನೆ ವೇಳೆ, ನಿಯಮಾನುಸಾರ ಅಗತ್ಯವಿರುವ ರಸಗೊಬ್ಬರ ಮಾರಾಟ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಅಪಾರ ಪ್ರಮಾಣದ ಸಾವಯವ ಗೊಬ್ಬರ ಮತ್ತು ಜೈವಿಕ ಉತ್ಪನ್ನಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೃಷಿ ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳದಲ್ಲಿದ್ದ ಅಂದಾಜು ರೂ.61,20,000 ಮೌಲ್ಯದ ಸಂಪೂರ್ಣ ದಾಸ್ತಾನನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕಾನೂನುಬಾಹಿರವಾಗಿ ಕೃಷಿ ಪರಿಕರಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

*ವಿಶೇಷಚೇತನರಿಗೆ ಟಿನ್ ಶೆಡ್ ವಿತರಣೆಗೆ ಅರ್ಜಿ ಆಹ್ವಾನ

ಬಳ್ಳಾರಿ : ಅಮೃತ್ ನಗರೋತ್ಥಾನ ಹಂತ-4 ಯೋಜನೆಯಡಿ ಕುರುಗೋಡು ಪುರಸಭೆ ವ್ಯಾಪ್ತಿಯ ವಿಶೇಷಚೇತನ ಫಲಾನುಭವಿಗಳಿಗೆ ಜೀವನೋಪಾಯಕ್ಕಾಗಿ ಸ್ವಯಂ ವ್ಯಾಪಾರ ಮಾಡಿಕೊಳ್ಳಲು 5 ಟಿನ್ ಶೆಡ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುವುದು.

ಅರ್ಹತೆ ಮತ್ತು ಅಗತ್ಯ ದಾಖಲೆಗಳು:

ಅರ್ಜಿದಾರರು ಕುರುಗೋಡು ಪುರಸಭೆ ವ್ಯಾಪ್ತಿಯ ನಿವಾಸಿಯಾಗಿರಬೇಕು. ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಮುಚ್ಚಳಿಕೆ ಪ್ರಮಾಣ ಪತ್ರ. ಶೇ. 75ಕ್ಕಿಂತ ಹೆಚ್ಚು ದೈಹಿಕ ವಿಕಲಚೇತನರಾಗಿರಬೇಕು ಹಾಗೂ ತಾಲೂಕು/ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಪಡೆದ ಅಂಗವೈಕಲ್ಯ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು.

ಹೆಚ್ಚಿನ ವಿವರಗಳಿಗಾಗಿ ಪುರಸಭೆ ಕಾರ್ಯಾಲಯದ ಸೂಚನಾ ಫಲಕವನ್ನು ಪರಿಶೀಲಿಸಬಹುದು ಅಥವಾ ಸಂಬಂಧಪಟ್ಟ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular