ಶರನ್ನವರಾತ್ರಿಯ ನಾಲ್ಕನೇ ದಿನವಾದ ಇಂದು ಜಗನ್ಮಾತೆ ದುರ್ಗಾದೇವಿಯ ಕೂಷ್ಮಾಂಡ ದೇವಿರೂಪವನ್ನು ಪೂಜಿಸಲಾಗುತ್ತದೆ. ಭಕ್ತರ ಸಂಕಷ್ಟಗಳನ್ನು ದೂರ ಮಾಡಿ, ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಕರುಣಿಸಲಿ ಎಂಬುದು ದೇವಿಯ ಆರಾಧನೆಯ ಆಶಯ. ಹಾಗಾದರೆ ಇಂದಿನ ದಿನ ಮೇಷದಿಂದ ಮೀನದವರೆಗೆ 12 ರಾಶಿಗಳ ಫಲ ಹೇಗಿದೆ? ಉದ್ಯೋಗ, ಹಣಕಾಸು, ಕುಟುಂಬ ಮತ್ತು ವೈಯಕ್ತಿಕ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳಿರಬಹುದು? ಇಲ್ಲಿದೆ ಇಂದಿನ ರಾಶಿಭವಿಷ್ಯ.
ಮೇಷ ರಾಶಿ
ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಅನಗತ್ಯ ಚರ್ಚೆಗಳಿಂದ ದೂರವಿದ್ದು, ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಬಹುದು. ಹಳೆಯ ಹಣಕಾಸಿನ ವ್ಯವಹಾರಗಳನ್ನು ಇತ್ಯರ್ಥಪಡಿಸಿಕೊಳ್ಳುವ ಸಾಧ್ಯತೆಯಿದೆ.ಶುಭಸಂಖ್ಯೆ: 1
ವೃಷಭ ರಾಶಿ
ನಿಮ್ಮ ಭಾವನೆಗಳಿಗೆ ಇತರರು ಬೆಲೆ ನೀಡದಿರುವುದು ಬೇಸರ ತರಿಸಬಹುದು. ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಿರಿ. ಬಾಕಿ ಉಳಿದಿರುವ ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಹೊಸ ವಸ್ತುಗಳ ಖರೀದಿಯನ್ನು ಮುಂದೂಡಬೇಕಾಗಬಹುದು. ಇತರರ ಟೀಕೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.ಶುಭಸಂಖ್ಯೆ: 6
ಮಿಥುನ ರಾಶಿ
ನಕಾರಾತ್ಮಕ ಆಲೋಚನೆಗಳು ನಿಮ್ಮ ನೆಮ್ಮದಿಗೆ ಅಡ್ಡಿಯಾಗಬಹುದು. ಕುಟುಂಬದವರ ಭಾವನೆಗಳನ್ನು ಗೌರವಿಸಿ. ದೂರ ಪ್ರಯಾಣ ಸುಖಕರವಾಗಿರಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಕಾಣಬಹುದು. ಕೃಷಿಯಲ್ಲಿ ತೊಡಗಿರುವವರಿಗೆ ಹೊಸ ಆಲೋಚನೆಗಳು ಪ್ರಯೋಜನ ನೀಡಬಹುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆಯಿದೆ.ಶುಭಸಂಖ್ಯೆ: 3
ಕರ್ಕಾಟಕ ರಾಶಿ
ಇಂದು ಮಾಡುವ ಕೆಲಸಗಳಲ್ಲಿ ಪ್ರಾಮಾಣಿಕತೆ ಮತ್ತು ಮನಃಪೂರ್ವಕ ಪ್ರಯತ್ನ ಮುಖ್ಯವಾಗಲಿದೆ. ಕಲಾವಿದರಿಗೆ ವೃತ್ತಿಯಲ್ಲಿ ಗೌರವ ದೊರೆಯಬಹುದು. ಆರ್ಥಿಕ ಪ್ರಗತಿಗೆ ಹೆಚ್ಚಿನ ಗಮನ ನೀಡುವಿರಿ. ಕಚೇರಿಯ ಕೆಲಸದ ಒತ್ತಡದಿಂದ ಸ್ವಲ್ಪ ಆಯಾಸವಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ.ಶುಭಸಂಖ್ಯೆ: 8
ಸಿಂಹ ರಾಶಿ
ನಿಮ್ಮ ಯೋಜನೆಗಳಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಸರಿಯಾದ ಮಾಹಿತಿ ಪಡೆದು ಮುಂದುವರಿಯುವುದು ಉತ್ತಮ. ಪ್ರಭಾವಿ ವ್ಯಕ್ತಿಗಳ ಸಹಾಯ ದೊರೆಯುವ ಸಾಧ್ಯತೆಯಿದೆ. ಕೆಲವು ಸಂದರ್ಭಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಬಹುದು. ವಾಹನ ಖರೀದಿ ಅಥವಾ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಸೂಕ್ತವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಿ.ಶುಭಸಂಖ್ಯೆ: 7
ಕನ್ಯಾ ರಾಶಿ
ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಮಕ್ಕಳ ವಿವಾಹದ ವಿಚಾರವಾಗಿ ಓಡಾಟ ನಡೆಸಬೇಕಾಗಬಹುದು. ಅಪರಿಚಿತರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ. ನಿಮ್ಮ ವಿದ್ಯಾಭ್ಯಾಸ ಅಥವಾ ವೃತ್ತಿಯ ಗುರಿಯಿಂದ ಗಮನ ಬೇರೆಡೆಗೆ ಹೋಗದಂತೆ ನೋಡಿಕೊಳ್ಳಿ. ಕೆಲಸದ ವಿಚಾರದಲ್ಲಿ ತಾಳ್ಮೆಯಿಂದ ಮುಂದುವರಿಯುವುದು ಉತ್ತಮ.ಶುಭಸಂಖ್ಯೆ: 9
ತುಲಾ ರಾಶಿ
ನೀವು ಅಂದುಕೊಂಡ ಕೆಲಸಗಳು ನಿರೀಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳದೇ ಇರಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕೆಲವು ಹಿನ್ನಡೆಗಳು ಎದುರಾಗುವ ಸಾಧ್ಯತೆಯಿದೆ. ಪರಿಶ್ರಮಕ್ಕೆ ತಕ್ಕ ಮೆಚ್ಚುಗೆ ಸಿಗದಿದ್ದರೂ ನಿರುತ್ಸಾಹಗೊಳ್ಳಬೇಡಿ. ಆಡಳಿತ ಮತ್ತು ಕೆಲಸದ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ.ಶುಭಸಂಖ್ಯೆ: 4
ವೃಶ್ಚಿಕ ರಾಶಿ
ಹೆಚ್ಚುವರಿ ಜವಾಬ್ದಾರಿಗಳು ಮನಸ್ಸಿಗೆ ಒತ್ತಡ ತರಬಹುದು. ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇತರರ ಮಾತುಗಳಿಂದ ಉದ್ವೇಗಕ್ಕೆ ಒಳಗಾಗುವುದನ್ನು ತಪ್ಪಿಸಿ. ನಿಮ್ಮ ಕೌಶಲಕ್ಕೆ ಮೆಚ್ಚುಗೆ ದೊರೆಯಬಹುದು. ತಂದೆಯ ಸಲಹೆಗಳಿಗೆ ಗೌರವ ನೀಡುವುದು ಉತ್ತಮ.ಶುಭಸಂಖ್ಯೆ: 2
ಧನು ರಾಶಿ
ಉದ್ಯೋಗ ಹುಡುಕುತ್ತಿರುವವರಿಗೆ ಸ್ನೇಹಿತರಿಂದ ಸಹಾಯ ಸಿಗಬಹುದು. ಬರಬೇಕಾದ ಹಣ ತಡವಾಗುವ ಸಾಧ್ಯತೆಯಿದೆ. ಉದ್ಯಮಕ್ಕೆ ಸಂಬಂಧಿಸಿದ ಆಲೋಚನೆಗಳಿಗೆ ಆರಂಭದಲ್ಲಿ ನಿರೀಕ್ಷಿತ ಬೆಂಬಲ ಸಿಗದೇ ಇರಬಹುದು. ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವಿರಿ. ಗುರಿ ಸಾಧಿಸಲು ಪರಿಶ್ರಮದ ಜೊತೆಗೆ ಸರಿಯಾದ ಯೋಜನೆಯೂ ಅಗತ್ಯ.ಶುಭಸಂಖ್ಯೆ: 1
ಮಕರ ರಾಶಿ
ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ಸಿಗಬಹುದು. ಸ್ನೇಹಿತರೊಂದಿಗೆ ಸಂತೋಷವಾಗಿ ಸಮಯ ಕಳೆಯುವಿರಿ. ಹಳೆಯ ವಸ್ತುಗಳ ದುರಸ್ತಿಗೆ ಹಣ ಖರ್ಚಾಗಬಹುದು. ಕಷ್ಟದ ಸಂದರ್ಭವನ್ನೂ ಧನಾತ್ಮಕವಾಗಿ ಎದುರಿಸುವಿರಿ. ಆತ್ಮೀಯರನ್ನು ಭೇಟಿಯಾಗುವ ಅವಕಾಶ ದೊರೆಯಬಹುದು.ಶುಭಸಂಖ್ಯೆ: 6
ಕುಂಭ ರಾಶಿ
ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರಬಹುದು. ಮನೆಯ ಕೆಲಸಗಳಿಂದ ಆಯಾಸವಾಗುವ ಸಾಧ್ಯತೆಯಿದೆ. ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಇತರರ ಸಹಾಯ ಪಡೆಯಬೇಕಾಗಬಹುದು. ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸದೆ, ಸದ್ಯದ ಕೆಲಸಗಳತ್ತ ಗಮನ ಹರಿಸಿ.ಶುಭಸಂಖ್ಯೆ: 5
ಮೀನ ರಾಶಿ
ಗೊಂದಲದ ಕಾರಣದಿಂದ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು. ವೃತ್ತಿ ಅಥವಾ ಸಾಮಾಜಿಕ ಜೀವನದಲ್ಲಿ ಸ್ಥಾನಮಾನ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಮೆಚ್ಚುಗೆ ದೊರೆಯಬಹುದು. ಸ್ನೇಹಿತರೊಂದಿಗೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಆಲೋಚನೆ ಮೂಡಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 4

