ಹೈದರಾಬಾದ್: ಸ್ನೇಹಿತನ ಭೇಟಿಗೆಂದು ಹೋದ ಬೆಂಗಳೂರಿನ ಟೆಕ್ಕಿಯೊಬ್ಬರು ಹೈದರಾಬಾದ್ ನಲ್ಲಿ ಅಪಾರ್ಟ್ಮೆಂಟ್ ನಿಂದ ಜಿಗಿದು ಆತ್ಮಹತ್ಯೆಗೆ ಶ್ಹರಣಾಗಿರುವ ಘೋರ ಘಟನೆ ನಡೆದಿದೆ.
ಹೈದರಾಬಾದ್ ನ ನಾನಕ್ ನಗರದಲ್ಲಿ ಈ ಘಟನೆ ನಡೆದಿದೆ. ಸ್ನೇಹಿತನ ಅಪಾರಟ್ ಮೆಂಟ್ ನ 30ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಬೆಂಗಳೂರು ಮೂಲದ ಭರತ್ (29) ಎಂದು ಗುರುತಿಸಲಾಗಿದೆ.
ಭರತ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಅ.12ರ ರಾತ್ರಿ ಈ ಘಟನೆ ನಡೆದಿದೆ. ಭರತ್ ಸ್ನೇಹಿತನನ್ನು ಭೇಟಿಯಾಗಲು ಹೈದರಾಬಾದ್‌ಗೆ ಬಂದಿದ್ದರು. ಹೀಗಾಗಿ ಸ್ನೇಹಿತ ಫ್ಲ್ಯಾಟ್‌ನಲ್ಲಿಯೇ ಉಳಿದುಕೊಂಡಿದ್ದರು. ರಾತ್ರಿ ಅಪಾರ್ಟ್ಮೆಂಟ್‌ನ 30ನೇ ಮಹಡಿಯಿಂದಿ ಜಿಗಿದಿದ್ದು, ಪರಿಣಾಮ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನದ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಭರತ್ ಬರೆದಿದ್ದಾನೆ ಎನ್ನಲಾದ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಂದೆ, ತಾಯಿಗೆ ಕ್ಷಮೆಯಾಚಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕ್ಲಬ್‌ನಲ್ಲಿ ಬಿಯರ್ ಚೆಲ್ಲಿದ್ದಕ್ಕೆ ವ್ಯಕ್ತಿಯನ್ನು ಬಾಟಲಿ, ದೊಣ್ಣೆಯಿಂದ ಹೊಡೆದು ಕೊಂದ ಬೌನ್ಸರ್‌ಗಳು
ದೆಹಲಿ: ಕ್ಲಬ್ ಗೆ ಬಂದ ವ್ಯಕ್ತಿಯೊಬ್ಬ ಬಿಯರ್ ಚೆಲ್ಲಿದ್ದಕ್ಕಾಗಿ ಸಿಟ್ತಿಗೆದ್ದ ಬೌನ್ಸರ್ ಗಳು ಹಾಗೂ ವೇಟರ್ ಗಳು ಆತನ ಮೇಲೆ ಬಾಟಲಿ ಹಾಗೂ ದೊಣ್ಣೆಯಿಂದ ಮಾರಣಂತಿಕವಾಗಿ ಹಲ್ಲೆ ನಡೆಸಿ, ಹೊಡೆದು ಕೊಂದಿರುವ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಸರಾಯ್ ರೋಹಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನೈಟ್‌ಕ್ಲಬ್ ಒಂದರಲ್ಲಿ ಶನಿವಾರ ತಡರಾತ್ರಿ ನಡೆದ ಘಟನೆಯಲ್ಲಿ, ಕ್ಲಬ್ ಮಾಲೀಕರೊಂದಿಗೆ ಇದ್ದ ಮಹಿಳೆಯೊಬ್ಬರ ಮೇಲೆ ಆಕಸ್ಮಿಕವಾಗಿ ಬಿಯರ್ ಚೆಲ್ಲಿದ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದೆ. 29 ವರ್ಷದ ವ್ಯಕ್ತಿಯೊಬ್ಬರನ್ನು ಬೌನ್ಸರ್‌ಗಳು ಥಳಿಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ವ್ಯಕ್ತಿಯನ್ನು ರಘುವೀರ್ ನಗರದ ನಿವಾಸಿ ದಲ್‌ಜೀತ್ ಎಂದು ಗುರುತಿಸಲಾಗಿದೆ. ಅವರು ಪತ್ನಿ, ಎಂಟು ವರ್ಷದ ಮಗ ಮತ್ತು ತಂದೆಯನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ, ದಲ್‌ಜೀತ್ ತನ್ನ ಸ್ನೇಹಿತರ ಗುಂಪಿನೊಂದಿಗೆ ನೈಟ್‌ಕ್ಲಬ್‌ಗೆ ತೆರಳಿದ್ದಾಗ, ಅವರಲ್ಲೊಬ್ಬರು ಸೇವಿಸುತ್ತಿದ್ದ ಬಿಯರ್ ಕ್ಲಬ್ ಮಾಲೀಕರೊಂದಿಗೆ ಇದ್ದ ಮಹಿಳೆಯೊಬ್ಬರ ಮೇಲೆ ಚೆಲ್ಲಿದೆ.
ಈ ಘಟನೆಯು ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ನಂತರ ಕ್ಲಬ್‌ನ ಬೌನ್ಸರ್‌ಗಳು ದಲ್‌ಜೀತ್ ಹಾಗೂ ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.
ತಮ್ಮ ಗುಂಪು ಕ್ಷಮೆಯಾಚಿಸಿದರೂ ಹಲ್ಲೆ ಮುಂದುವರಿಯಿತು ಎಂದು ದಲ್‌ಜೀತ್ ಅವರೊಂದಿಗೆ ಇದ್ದ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ. ಕ್ಲಬ್‌ನ ವೇಟರ್‌ಗಳು ಕೂಡ ಈ ಹಲ್ಲೆಯಲ್ಲಿ ಭಾಗಿಯಾಗಿ, ದಲ್‌ಜೀತ್ ಮತ್ತು ಅವರ ಸ್ನೇಹಿತರನ್ನು ದೊಣ್ಣೆಗಳು ಹಾಗೂ ಗಾಜಿನ ಬಾಟಲಿಗಳಿಂದ ಥಳಿಸಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಖಚಿತಪಡಿಸಿದ್ದಾರೆ.
ದಲ್‌ಜೀತ್ ಅವರ ಸಾವಿಗೆ ಕಾರಣವಾದ ಸಂದರ್ಭಗಳು ಮತ್ತು ತನಿಖೆಯ ಕುರಿತಾದ ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

