HomeKarnatakaಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಿದೆ: ಯೂಸ್ ಆಂಡ್ ಥ್ರೋ ಮಾಡಿದೆ: ಆರ್.ಅಶೋಕ್ ...

ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಿದೆ: ಯೂಸ್ ಆಂಡ್ ಥ್ರೋ ಮಾಡಿದೆ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿದೆ. ಅದಕ್ಕೆ ಕೃತಜ್ಞತೆ ಎಂಬುದೇ ಇಲ್ಲ. ಈಗ ಕೋರ್ಟ್ ಮೆಟ್ಟಿಲೇರುವಂತೆ ಮಾಡಿ, ಯೂಸ್ ಆಂಡ್ ಥ್ರೋ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞತೆ ಎಂಬುದಿಲ್ಲ. ಪಾಪ ಸಿದ್ದರಾಮಯ್ಯನವರನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ನಾನು ಬಹಳ ನೋವಿನಿಂದ, ಒಲ್ಲದ ಮನಸ್ಸಿನಿಂದ ಹೇಳ್ತಿದ್ದೀನಿ. ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಮುರಿದವರು. ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದವರು, ಅನ್ನರಾಮಯ್ಯ ಅವರು. ಆದರೆ ಇವತ್ತು ಸಿದ್ದರಾಮಯ್ಯ ಅವರಿಗೆ ಕೋರ್ಟ್ ಮೆಟ್ಟಿಲೇರುವ ನೋವು ಕೊಟ್ಟಿದ್ದೆ ಕಾಂಗ್ರೆಸ್ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃತಜ್ಞತೆ ಇಲ್ಲದ ಕಾಂಗ್ರೆಸ್, ಕಪಟ ಕಾಂಗ್ರೆಸ್, ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಇದು. ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲೇರುವ ದಯನೀಯ ಸ್ಥಿತಿಗೆ ತಂದಿದ್ದಾರೆ. ಅವರನ್ನು ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ ಬಗ್ಗೆ, ವಿಡಿಯೋಗಳ ಬಗ್ಗೆ ಕೂಡಲೇ ಎಫ್‌ಐಆರ್ ಆಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸರ್ಕಾರದ ಬಿಡಿಗಾಸಿನ ಹಣವನ್ನು ವಾಪಸ್ಸು ಕೊಡ್ತಿದ್ದಾರೆ. ಇದ್ಯಾವುದರ ಬಗ್ಗೆ ಗಮನ ಇಲ್ಲದೇ ಕಾಂಗ್ರೆಸ್ ಸರ್ಕಾರ ಈ ಸ್ಟಿಂಗ್ ಆಪರೇಷನ್, ಸಿಡಿಯಲ್ಲೇ ಮುಳುಗಿ ಹೋಗಿದೆ. ಡಿ.ಕೆ ಶಿವಕುಮಾರ್ ಸಿಎಂ ಆಗಿ ದೆಹಲಿಯಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ. ರಾಜ್ಯದ ಜನರ ಬಗ್ಗೆ ಒಂಚೂರು ಕಾಳಜಿ ಇಲ್ಲದೇ, ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರೆಂದು ಇದೇ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

217 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿದೆ, 46 ಸಾವಿರ ಕೋಟಿ ರೂ. ನಷ್ಟ ಆಗಿದೆ, ಆದರೆ ನೀವು ಭಿಕ್ಷೆ ರೀತಿ 1,200 ಕೋಟಿ ರೂ.ಕೊಟ್ಟಿದ್ದೀರಿ. ದೇವಸ್ಥಾನಕ್ಕೆ ದಕ್ಷಿಣಿಯೇ 500, 1000 ರೂ. ಹಾಕುತ್ತಾರೆ. ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲ. ಬರ ಇದ್ದರೂ ದಸರಾ ಸರಳ ಆಚರಣೆ ಬಿಟ್ಟು, ವಿಜೃಂಭಣೆಯಿAದ ಮಾಡ್ತಿದ್ದಾರೆ. ರೈತನಿಗೆ 2,500 ರೂ. ಕೊಡ್ತಿದ್ದೀರಿ ನಿಮಗೆ ಏನಾದರೂ ಮಾನವೀಯತೆ ಇದೆಯಾ? ವಿಶೇಷ ಅಧಿವೇಶನ ಮಾಡಿ ಏನು ಮಾಡಿದ್ರಿ, ಬರೀ ದುಡ್ಡು ಖರ್ಚು ಮಾಡಿದ್ರಿ ಅಷ್ಟೇ. ಬರಗಾಲದ ಬಗ್ಗೆ, ಸರ್ಕಾರದ ಕ್ರಮಗಳ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸಚಿವರ ಮೇಲೆಯೇ ಸಿಎಂ ಗೂಢಾಚಾರಿಕೆ ನಡೆಸಿದ್ದಾರೆ: 4 ನಿವೃತ್ತ ಪೊಲೀಸ್ ಅಧಿಕಾರಿಗಳ ತಂಡದಿಂದ, ಅತ್ಯಾಧುನಿಕ ಎಕ್ವಿಪ್‌ಮೆಂಟ್ ಮೂಲಕ ಕೃತ್ಯ: ಹೊಸ ಬಾಂಬ್ ಸಿಡಿಸಿದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಜನರು ಕುಡಿತುವ ನೀರಿಗೂ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ, ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ಸಂಸ್ಕೃತಿ ವಿಚಾರಗಳು ಮುನ್ನೆಲೆಗೆ ಬಂದಿರುವುದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಸ್ಟಿಂಗ್, ಸಿಡಿ ಸಂಸ್ಕ್ರ‍ಿತಿ ಇದೆಲ್ಲವೂ ಡಿ.ಕೆ.ಶಿವಕುಮಾರ್ ಅವರದ್ದೇ. ಅವರೇ ಸಚಿವರ ಮೇಲೆ ಗೂಢಾಚಾರಿಕೆ ಮಾಡಿದ್ದಾರೆ ಎಂದು ಆರ‍ೋಪಿಸಿದರು.

ನನಗೆ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ, ಸಿಎಂ ಆದ ನಂತರ ಸದಾಶಿವನಗರದ ಮನೆಯೊಂದರಲ್ಲಿ 4 ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅತ್ಯಾಧುನಿಕ ಎಕ್ವಿಪ್‌ಮೆಂಟ್ ತರಿಸಿ ಸ್ವಂತ ಸಂಪುಟದ ಸಚಿವರ ಮೇಲೆಯೇ ಮಾಹಿತಿ ಸಂಗ್ರಹ ಹಾಗೂ ಫೋನ್ ಟ್ಯಾಪಿಂಗ್ ನಡೆಸಲಾಗುತ್ತಿದೆ. ಸಚಿವರು, ವಿರೋಧ ಪಕ್ಷದವರು ಅಷ್ಟೇ ಅಲ್ಲದೆ ನನ್ನ ಸಿಬ್ಬಂದಿಯ ಫೋನ್‌ಗಳೂ ಟ್ಯಾಪ್ ಆಗುತ್ತಿವೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿದರೆ ಯಾರ್ ಯಾರ ಮೇಲೆ ನಿಗಾ ಇಡಲಾಗಿತ್ತು ಎಂಬುದು ತಿಳಿಯುತ್ತದೆ. ಇಂತಹ ಟ್ರ್ಯಾಪ್ ಮಾಡಲು ಪ್ರತ್ಯೇಕ ತಂಡವೇ ಕೆಲಸ ಮಾಡುತ್ತಿದೆ ಎಂದು ಬಾಂಬ್ ಸಿಡಿಸಿದರು.

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಎಂಬ ವಿಷವೃಕ್ಷಕ್ಕೆ ನೀರೆರೆದು ಬೆಳೆಸಿದ್ದೇ ಡಿ.ಕೆ ಶಿವಕುಮಾರ್‌. ಅವರು ಬೆಳೆಸಿದ ಸಸಿಗಳು ಈಗ ಹೆಮ್ಮರವಾಗಿವೆ, ಅದರ ಫಲವನ್ನು ಈಗ ಅವರೇ ಉಣ್ಣಬೇಕಾಗಿದೆ. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಏನು ಮಾಡಿದ್ರಿ? ಕೆ.ಎನ್. ರಾಜಣ್ಣ ಬಾಯಿ ಮುಚ್ಚಿಸಿದ್ರಿ. ಈಗ 8 ವರ್ಷ ಮುಖ್ಯಮಂತ್ರಿಯಾದ ಅಹಿಂದ ನಾಯಕ ಸಿದ್ದರಾಮಯ್ಯ ಕೂಡ ಕೋರ್ಟ್‌ನಿಂದ ಸ್ಟೇ ತರುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೀರಿ. ಇದು ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದರು.

ಹಾಸನ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ವೇಳೆ ನಡೆದ ಪೆನ್‌ಡ್ರೈವ್ ಹಂಚಿಕೆ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಚುನಾವಣೆಗೆ ಎರಡು ದಿನ ಮುಂಚಿತವಾಗಿ ಈಗಿನ ಹಾಸನ ಎಂಪಿಯ ಸದಾಶಿವನಗರದ ಮನೆಯಲ್ಲಿ ಪೆನ್‌ಡ್ರೈವ್ ರೆಡಿ ಮಾಡಿಸಿ ಹಂಚಲಾಗಿತ್ತು. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಅವರ ಸಂಭಾಷಣೆಯಲ್ಲಿ ದೇವೇಗೌಡರ ಕುಟುಂಬ ಮುಗಿಸುವುದೇ ನಮ್ಮ ಕೆಲಸ ಎಂದಿದ್ದರು. ಡಿಕೆಶಿ ದೂರವಾಣಿಯಲ್ಲಿ ಮಾತನಾಡಿದ ಆಡಿಯೋ ಇದೆ. ನಮ್ಮ ಕುಟುಂಬದ ತಾಯಿಯನ್ನೂ ಬಿಡದೆ ಸೀರೀಸ್ ಸ್ಟೋರಿ ಮಾಡಿಸಿದ್ರು. ಅಂದು ರಾಹುಲ್ ಗಾಂಧಿ 400 ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಂದಿದ್ದರು, ಎಷ್ಟು ಜನ ದೂರು ನೀಡಿದ್ದಾರೆ? ಆದರೂ ನಾವು ಯಾವುದಕ್ಕೂ ಸ್ಟೇ ತರಲಿಲ್ಲ, ನ್ಯಾಯಾಲಯದ ಮೇಲೆ ಗೌರವವಿಟ್ಟು ಎದುರಿಸಿದೆವು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ನೋವು ಏನೆಂದು ನನಗೆ ಅರ್ಥವಾಗುತ್ತದೆ. ನಿಮ್ಮನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ನೋಡಿ. ಆದರೆ ನೀವು ಹೆದರಿ ಸ್ಟೇ ತರಬಾರದು. ಸ್ಟೇ ತರುವುದು ರಕ್ಷಣೆಯಲ್ಲ. ನಿಮ್ಮ ಹಳೆಯ ಗಟ್ಟಿ ಧ್ವನಿ ಹೊರಬರಬೇಕು, ಹೋರಾಟ ಮಾಡಿ. 136 ಶಾಸಕರಿದ್ದಾರೆ, ಸರ್ಕಾರ ಹೇಗೆ ಬೀಳುತ್ತದೆ? ನೀವು ಟ್ರ್ಯಾಪ್ ಆಗಬೇಡಿ. ಈ ಸ್ಟಿಂಗ್ ಆಪರೇಷನ್ ದಂಧೆಗೆ ಸಂಪೂರ್ಣ ಇತಿಶ್ರೀ ಹಾಡಿ ಎಂದು ಸಲಹೆ ನೀಡಿದರು.

ಇದೇ ವೇಳೆ ರಾಜ್ಯದಲ್ಲಿ ಮಾನ-ಮರ್ಯಾದೆ ಹರಾಜಾಗುತ್ತಿರುವ ಈ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತ್ಯ ಹಾಡಲು ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular