ಬಾಲಿವುಡ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ‘ದಿ ಡರ್ಟಿ ಪಿಕ್ಚರ್’ ಸಿನಿಮಾದ ಸೀಕ್ವೆಲ್ ಕುರಿತು ಅಧಿಕೃತ ಸುಳಿವು ಸಿಕ್ಕಿದೆ. ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಅವರು ‘ದಿ ಡರ್ಟಿ ಪಿಕ್ಚರ್ 2’ ನಿರ್ಮಾಣವಾಗುವುದನ್ನು ಖಚಿತಪಡಿಸಿದ್ದು, ಈ ವರ್ಷದ ಅಂತ್ಯದೊಳಗೆ ಚಿತ್ರದ ಅಧಿಕೃತ ಘೋಷಣೆ ಹೊರಬರಲಿದೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
2011ರಲ್ಲಿ ತೆರೆಕಂಡಿದ್ದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ವಿದ್ಯಾ ಬಾಲನ್ ನಾಯಕಿಯಾಗಿ ನಟಿಸಿದ್ದರು. ದಕ್ಷಿಣ ಭಾರತದ ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆಯನ್ನು ಆಧರಿಸಿದ್ದ ಈ ಚಿತ್ರವು ತನ್ನ ಬೋಲ್ಡ್ ಕಥಾಹಂದರ ಹಾಗೂ ಪ್ರಬಲ ನಟನೆಯಿಂದ ವಿಶ್ವಾದ್ಯಂತ ಭಾರಿ ಮೆಚ್ಚುಗೆ ಹಾಗೂ ಪ್ರಶಸ್ತಿಗಳನ್ನು ಗಳಿಸಿತ್ತು.
ಆದರೆ, ಮುಂಬರುವ ‘ದಿ ಡರ್ಟಿ ಪಿಕ್ಚರ್ 2’ ಚಿತ್ರದ ಕಥೆಯು ಮೊದಲ ಭಾಗಕ್ಕಿಂತ ಭಿನ್ನವಾಗಿರಲಿದೆ ಎಂದು ವರದಿ1405ಯಾಗಿದೆ. ಕಳೆದ ದಶಕದಲ್ಲಿ ವಿವಾದಗಳ ಮೂಲಕವೇ ಸದ್ದು ಮಾಡಿದ್ದ ಮತ್ತ ಒಬ್ಬ ವಿವಾದಾತ್ಮಕ ನಾಯಕಿಯ ಜೀವನದ ಕಥೆಯನ್ನು ಈ ಸೀಕ್ವೆಲ್ನಲ್ಲಿ ಪರಿಚಯಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ಬಾರಿಯ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವ ನಾಯಕಿ ಯಾರು ಹಾಗೂ ನಿರ್ದೇಶನದ ಜವಾಬ್ದಾರಿ ಯಾರ ಹೆಗಲೇರಲಿದೆ ಎಂಬ ಕುತೂಹಲ ಸಿನಿಮಾಪ್ರಿಯರಲ್ಲಿ ಗರಿಗೆದರಿದೆ. ಶೀಘ್ರದಲ್ಲೇ ಈ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳು ಹೊರಬೀಳಲಿವೆ.

