HomeEntertainmentಅಭಿಮಾನಿಯ ಕೈಕುಲುಕಲು ನಿರಾಕರಿಸಿದ ಅಮಿತಾಬ್: ವೈರಲ್ ವಿಡಿಯೋಗೆ ನೆಟ್ಟಿಗರ ಪರ-ವಿರೋಧ ಚರ್ಚೆ!

ಅಭಿಮಾನಿಯ ಕೈಕುಲುಕಲು ನಿರಾಕರಿಸಿದ ಅಮಿತಾಬ್: ವೈರಲ್ ವಿಡಿಯೋಗೆ ನೆಟ್ಟಿಗರ ಪರ-ವಿರೋಧ ಚರ್ಚೆ!

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ 84ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಮುಂಬೈನಲ್ಲಿರುವ ತಮ್ಮ ಜಲ್ಸಾ ನಿವಾಸದ ಹೊರಗೆ ಜಮಾಯಿಸಿದ್ದ ಅಭಿಮಾನಿಗಳನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ. ಆದರೆ ಈ ವೇಳೆ ನಡೆದ ಅನಿರೀಕ್ಷಿತ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹುಟ್ಟುಹಬ್ಬದ ವಿಶೇಷ ದಿನದಂದು ಅಭಿಮಾನಿಗಳನ್ನು ಅಭಿನಂದಿಸಲು ಕೆಂಪು ಕುರ್ತಾದಲ್ಲಿ ಹೊರಬಂದ ಅಮಿತಾಬ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರು.

ಈ ಸಂದರ್ಭದಲ್ಲಿ ಯುವತಿಯೊಬ್ಬಳು ಭದ್ರತಾ ಕಾವಲನ್ನು ಮುರಿದುಕೊಂಡು ನೇರವಾಗಿ ಅಮಿತಾಬ್ ಬಚ್ಚನ್ ಬಳಿ ತೆರಳಿ ಕೈಕುಲುಕಲು ಯತ್ನಿಸಿದ್ದಾಳೆ. ಕೂಡಲೇ ಎಚ್ಚೆತ್ತ ಅಂಗರಕ್ಷಕರು ಆಕೆಯನ್ನು ತಡೆದು ಹಿಂದೆ ಕಳುಹಿಸಿದ್ದಾರೆ. ಭದ್ರತಾ ಉಲ್ಲಂಘನೆಯ ಈ ಘಟನೆಯ ನಡುವೆಯೂ ಅಮಿತಾಬ್ ಬಚ್ಚನ್ ಅವರು ಕೈಮುಗಿದು ಹಾಗೂ ಕೈಬೀಸಿ ಅಭಿಮಾನಿಗಳನ್ನು ಸ್ವಾಗತಿಸಿದ್ದು, ಯುವತಿಯ ಕೈಕುಲುಕುವ ವಿನಂತಿಯನ್ನು ವಿನಮ್ರವಾಗಿ ತಿರಸ್ಕರಿಸಿದ್ದಾರೆ. ಬಳಿಕ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದ ಬೃಹತ್ ಹೂವಿನ ಹಾರದ ಮುಂದೆ ನಿಂತು ಧನ್ಯವಾದ ತಿಳಿಸಿ ಒಳಗೆ ತೆರಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನೆಟಿಜನ್‌ಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ನಟ ಆ ಯುವತಿಯ ಆಸೆಯನ್ನು ಮನ್ನಿಸಿ ಕೈಕುಲುಕಬಹುದಿತ್ತು ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಸೆಕ್ಯೂರಿಟಿ ನಿಯಮಗಳನ್ನು ಹಾಗೂ ಸೆಲೆಬ್ರಿಟಿಗಳ ವೈಯಕ್ತಿಕ ಗಡಿಗಳನ್ನು ಎಲ್ಲರೂ ಗೌರವಿಸಬೇಕು ಎಂದು ಬಚ್ಚನ್ ಪರವಾಗಿ ಬ್ಯಾಟ್ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಂದೆಡೆ, ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬಕ್ಕೆ ಚಿರಂಜೀವಿ, ಕಜೋಲ್, ಸಂಜಯ್ ದತ್, ಪ್ರಭಾಸ್, ಕಮಲ್ ಹಾಸನ್, ಸುನಿಲ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವು ದಿಗ್ಗಜರು ಸಾಮಾಜಿಕ ಜಾಲತಾಣಗಳ ಮೂಲಕ ಹಾರೈಕೆಗಳನ್ನು ತಿಳಿಸಿದ್ದಾರೆ. ವೃತ್ತಿಜೀವನದ ಮುಂಚೂಣಿಯಲ್ಲಿರುವ ಬಿಗ್ ಬಿ, ಮುಂಬರುವ ‘ಕಲ್ಕಿ’ ಸೀಕ್ವೆಲ್ ಚಿತ್ರದಲ್ಲಿ ಅಶ್ವತ್ಥಾಮ ಪಾತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ.


For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular