ನವದೆಹಲಿ: ಎಸ್ಐಅರ್ ಅಕ್ರಮ ಖಂಡಿಸಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯ ಜಂತರ್ ಮಂತರರ್ ಗೆ ತೆರಳಲು ಸಿದ್ಧರಾಗಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಯನ್ನು ಶನಿವಾರ ಪೊಲೀಸರು ಗುರುಗ್ರಾಮದ ಅವರ ಮನೆಯಲ್ಲಿಯೇ ವಶಕ್ಕೆ ಪಡೆದಿದ್ದರು. ಒಂದು ದಿನದ ಬಳಿಕ ಇಂದು ಮುಂಜಾನೆ ಅವರನ್ನು ಬಿಡುಗಡೆ ಮಾಡಿದ್ದಾರೆ.
ಬಿಡುಗಡೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿರುವ ಧ್ರುವ ರಾಠಿ, ಅದು ಬಂಧನ ಅಥವಾ ವಶವಲ್ಲ, ನನ್ನನ್ನು ಕಿಡ್ನ್ಯಾಅಪ್ ಮಾಡಿದ್ದರು ಎಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಬಿಡುಗಡೆಯಾದ ನಂತರ, ರಾಠಿ ಬಂಧನದ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಧ್ರುವ್ , ನಾನು ಗುರುಗ್ರಾಮ್ ನಿವಾಸದಲ್ಲಿ ಇದ್ದಾಗ ನನ್ನನ್ನು ಪೊಲೀಸರು ಏಕಾಏಕಿ ಅರೆಸ್ಟ್ ಮಾಡಿದ್ದಾರೆ. ನನ್ನನ್ನು ಕಾನೂನುಬದ್ಧವಾಗಿ ಬಂಧಿಸಲಾಗಿಲ್ಲ, ನಾನಿನ್ನು ಆಗ ಮಲಗಿದ್ದೆ, ಅಪರಿಚಿತರು ಬಂದು ನನ್ನನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ 7:00 ಗಂಟೆಗೆ ಸಾಮಾನ್ಯ ಉಡುಪಿನಲ್ಲಿದ್ದ ಸುಮಾರು 20 ಜನ ನನ್ನ ಮಲಗುವ ಕೋಣೆಗೆ ಪ್ರವೇಶಿಸಿದರು. ನನ್ನನ್ನು ಕರೆದುಕೊಂಡು ಹೋದರು. ನನನ್ನು ಹಲವು ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಲಾಯಿತು. ಸುಮಾರು 22 ರಿಂದ 23 ಗಂಟೆಗಳ ಕಾಲ ನನ್ನ ಕಾನೂನು ಸಲಹೆಗಾರರು ಅಥವಾ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಅವಕಾಶ ಕೊಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನನ್ನ ಮನೆಯಿಂದ ಹೊರಗೆ ಕರೆದೊಯ್ಯುವಾಗ ಸಣ್ಣಪುಟ್ಟ ಗಾಯಗಳು ಕೂಡ ಅಗಿವೆ. ವೀಡಿಯೊದಲ್ಲಿ, ತನ್ನ ಪಾಸ್‌ಪೋರ್ಟ್ ತೋರಿಸಿ ಈಗಲೂ ಕೂಡ ನಾನು ಭಾರತೀಯ ಪ್ರಜೆ. ಭಾರತೀಯ ಪ್ರಜೆಯಾಗಿ, ಶಾಂತಿಯುತ ಪ್ರತಿಭಟನೆಗಳು ಮತ್ತು ಪ್ರಜಾಪ್ರಭುತ್ವ ಚಳುವಳಿಗಳಲ್ಲಿ ಭಾಗವಹಿಸುವ ಮೂಲಭೂತ ಹಕ್ಕು ನನಗೂ ಇದೆ ಎಂದು ಹೇಳಿದ್ದಾರೆ.
ರಾಠಿ ಅವರನ್ನು ಬಿಡುಗಡೆ ಮಾಡಲಾಗಿದ್ದರೂ, ಅವರು ನಿಷೇಧಾಜ್ಞೆಗಳನ್ನು ಉಲ್ಲಂಘಿಸಲು ಅಥವಾ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಮತ್ತೆ ಪ್ರವೇಶಿಸಲು ಪ್ರಯತ್ನಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ಸೂಚಿಸಿದ್ದಾಅರೆ.
ಎಸ್ಐಆರ್ ವಿರೋಧಿಸಿ ಕರೆ ನೀಡಿದ್ದ ಪ್ರತಿಭಟನೆಗೆ ನಿಷೇಧಾಜ್ಞೆಗಳ ನಡುವೆ ಪ್ರತಿಭಟನಾಕಾರರು ಸೇರುವುದನ್ನು ತಡೆಯಲು, ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು ಮತ್ತು ಗುರುಗ್ರಾಮ್‌ನಲ್ಲಿರುವ ಧ್ರುವ್ ರಾಠಿ ನಿವಾಸದಿಂದಲೇ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದರು.
ಸಿಜೆಪಿ ಪ್ರತಿಭಟನೆ: ಅಭಿಜಿತ್ ದೀಪ್ಕೆ, ಸೌರವ್ ದಾಸ್, ಧ್ರುವ್ ರಾಠಿ ಬಿಡುಗಡೆ
ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಅವರನ್ನು ಪೊಲೀಸರು ನಿನ್ನೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿನದೊಳಗೆ ವಶಕ್ಕೆ ಪಡೆದಿದ್ದರು.
ದೆಹಲಿ ಕಂಟೋನ್ಮೆಂಟ್‌ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಿಜೆಪಿ ನಾಯಕರ ಬಿಡುಗಡೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸಿಜೆಪಿ ನಾಯಕ ಅಭಿಜಿತ್ ದಿಪ್ಕೆ, ಪತ್ರಕರ್ತ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಬಿಡುಗಡೆಯಾಗಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ವಿಮಾನ ನಿಲ್ದಾಣದ ಬಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ದೆಹಲಿ ಕಂಟೋನ್ಮೆಂಟ್‌ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಬಿಡುಗಡೆ ಆದೇಶ ಬಂದಿದೆ ಎಂದು ವರದಿ ತಿಳಿಸಿದೆ.
ಇದೇ ವೇಳೆ, ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೈಗೊಂಡ ಭದ್ರತಾ ಕ್ರಮಗಳು, ಮೆಟ್ರೋ ಸೇವೆಗಳ ನಿರ್ವಹಣೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದೆ ಎನ್ನಲಾದ ನ್ಯಾಯಾಂಗ ನಿಂದನೆ ಅರ್ಜಿ ಕುರಿತು ಚರ್ಚೆ ಮುಂದುವರೆದಿದೆ.
ಇದೇ ವೇಳೆ ಪ್ರತಿಭಟನೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ಹಲವು ಕಾರ್ಯಕರ್ತರು ಮತ್ತು ಇತರರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬರ್ ಧ್ರುವ್ ರಾಠಿ ಕೂಡ ಬಿಡುಗಡೆಗೊಂಡಿದ್ದಾರೆ.
ಜಂತರ್ ಮಂತರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತೆಅರಳು ಸಿದ್ಧರಾಗಿದ್ದ ಧ್ರುವ್ ಅವರನ್ನು ಶನಿವಾರ ಗುರುಗ್ರಾಮದ ಸೆಕ್ಟರ್ 56 ರಲ್ಲಿರುವ ಅವರ ನಿವಾಸದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದರು.

