HomeKarnatakaಇನ್ಮುಂದೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಮಾಡಿದರೆ ಕೇಸ್ ದಾಖಲು: ಖಾಸಗಿ ಆಸ್ಪತ್ರೆಗಳಿಗೆ ಸಚಿವ...

ಇನ್ಮುಂದೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಮಾಡಿದರೆ ಕೇಸ್ ದಾಖಲು: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನುಂದೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಮಾಡಿದರೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಸಂಬಂಧ ಹೊಸ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಅದರನ್ವಯ ಬಿಲ್ ಕಟ್ಟಿದ್ರೆ ಮಾತ್ರ ಮೃತದೇಹ ನೀಡುತ್ತೇವೆ ಎಂಬ ಆಸ್ಪತ್ರೆಗಳ ಮೇಲೆ ಕೇಸ್​​ ಹಾಕುವ ಬಗ್ಗೆ ಚಿಂತನೆ ನಡೆದಿದೆ. ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರುಗಳು ಕೇಳಿಬುರುತ್ತಿರುವ ಹಿನ್ನಲೆಯಲ್ಲಿ, ಹೊಸ ನಿಯಮಗಳ ಮೂಲಕ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲು ತಯಾರಿ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕಿತ್ಸಾ ವೆಚ್ಚದ ಬಿಲ್ ಪಾವತಿಸದ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಮೃತದೇಹಗಳನ್ನು ನೀಡದೆ ಸತಾಯಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಇವುಗಳಿಗೆ ಬ್ರೇಕ್ ಹಾಕಲು, ಅಂತಹ ಆಸ್ಪತ್ರೆಗಳ ವಿರುದ್ಧ ನೇರವಾಗಿ ಮೊಕದ್ದಮೆ ದಾಖಲಿಸಲು ಆರೋಗ್ಯ ಇಲಾಖೆ ಹೊಸ ಕಾನೂನು ರೂಪಿಸಲು ಮುಂದಾಗಿದೆ.

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದ್ರೂ ಮೃತಪಟ್ಟರೆ ದುಡ್ಡು ಕಟ್ಟಿ ಮೃತದೇಹ ಪಡೆಯಬೇಕು. ದುಡ್ಡು ಇಲ್ಲ ಎಂದು ಪರದಾಡುವ ಕುಟುಂಬಕ್ಕಿದು ಆರ್ಥಿಕ ಹೊರೆಯಾಗಲಿದೆ. ದುಡ್ಡಿಗಾಗಿ ಮೃತದೇಹ ಇಟ್ಟಕೊಂಡು ಸತಾಯಿಸುವ ಕೆಲಸ ಆಗಬಾರದು. ಈ ಬಗ್ಗೆ 2007-18 ಎರಡೂ ಸಲ ಕಾನೂನು ಬಂದಿದ್ರು ಸಮರ್ಪಕ ಅನುಷ್ಠಾನವಾಗಿಲ್ಲ. ಆದರೆ ನಾನು ಇದನ್ನ ಶೇ.100ರಷ್ಟು ಅನುಷ್ಠಾನ ಮಾಡುತ್ತೇನೆ. 2018ರಲ್ಲಿ ಶ್ಯೂರಿಟಿ ಪಡೆದು ಬಾಡಿ ನೀಡುವ ಕಾನೂನು ಮಾಡಲಾಗಿತ್ತು. ಆಸ್ಪತ್ರೆಗಳ ಬಿಲ್ ನೀಡಿಲ್ಲ ಅಂದರೆ ಕೇಸ್ ಹಾಕಬಹುದು ಅಂತಲೂ ಇತ್ತು. ಹೀಗಾಗಿ ಕೇಸ್ ಯಾಕೆ ಅಂತ ಸಾಲ ಮಾಡಿ ಜನರು ದುಡ್ಡು ಕಟ್ಟುತ್ತಿದ್ದಾರೆ. ಹೀಗಾಗಿ ಈ ಕಾನೂನಿನ ಬದಲಾವಣೆ ಮಾಡಬೇಕಿದೆ. ಆಸ್ಪತ್ರೆಯ ಸಂಘಗಳು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಿ ಹೊಸ ಕಾನೂನು ರೂಪಿಸಲು ಯೋಚನೆ ಮಾಡುತ್ತಿದ್ದೇನೆ ಎಂದವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಈ ಹೊಸ ಚಿಂತನೆಯಿಂದ ನಮಗೆ ಸಮಸ್ಯೆಯಾಗುತ್ತೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷೆ ಡಾ.ಶೋಭಾ ಪ್ರಕಾಶ್ ತಿಳಿಸಿದ್ದಾರೆ. ICUನಲ್ಲಿ ಚಿಕಿತ್ಸೆ, ಮೆಡಿಸಿನ್ ನೀಡುರುತ್ತೇವೆ. ಈಗ ಮೃತಪಟ್ಟ ಮೇಲೆ ಬಿಲ್ ಇಲ್ಲದೆ ಮೃತದೇಹ ನೀಡಿ ಅಂದ್ರೆ ಕಷ್ಟ. ಸಚಿವರ ನಿರ್ಧಾರ ಸರಿ ಇದೆ, ಆದ್ರೆ ಇದಕ್ಕೆ ಪರ್ಯಾಯ ಕ್ರಮವಹಿಸಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಜೊತೆ ಚರ್ಚೆ ಮಾಡಬೇಕು ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ರಾಜಕಾರಣಿಗಳ ಒಡೆತನದ ಹೋಟೆಲ್, ಕ್ಲಬ್ ಗಳ ಮೇಲೆ ಪೊಲೀಸರ ದಿಢೀರ್ ದಾಳಿ

ಬೆಳಗಾವಿ ಕುಂದಾನಗರ ಬೆಳಗಾಅವಿಯಲ್ಲಿ ಪ್ರಭಾವಿ ರಾಜಕಾರಣಿಗಳ ಒಡೆತನದ ಪ್ರತಿಷ್ಠಿತ ಕ್ಲಬ್ ಮತ್ತು ಹೋಟೆಲ್​ಗಳ ಮೇಲೆ ಬೆಳಗಾವಿ ಕಮಿಷನರ್​​ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ದಿಢೀರ್ ದಾಳಿ ನಡೆದಿದೆ.

40ಕ್ಕೂ ಹೆಚ್ಚು ಕಡೆ ಪೊಲೀಸರು ದಾಳಿ ನಡೆಸಿದ್ದು, ನಿಯಮ ಗಾಳಿಗೆ ತೂರಿ ಕ್ಲಬ್ ನಡೆಸುತ್ತಿರುವುದು ಬೆಳಕಿಗೆ ಬಂದ ಕಾರಣ ಕ್ಲಬ್ ಮತ್ತು ಪಬ್​ಗಳ ಬಾಗಿಲನ್ನು ಮುಚ್ಚಿಸಿದ್ದಾರೆ. ದಾಳಿ ವೇಳೆ ಕೆಲವು ಕಡೆಗಳಲ್ಲಿ ಅಪ್ರಾಪ್ತರು ಕೂಡ ಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಇನ್ನು ದಾಳಿ ವಿಚಾರ ಸಂಬಂಧ ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಪ್ರತಿಕ್ರಿಯಿಸಿದ್ದು, ಕ್ಲಬ್, ಹೊಟೆಲ್, ಡಾಬಾಗಳ ಮೇಲೆ ದಾಳಿ ಮಾಡಿದ್ದೇವೆ. ಅಪ್ರಾಪ್ತರು ಬರುವ ಬಗ್ಗೆ ಐಡಿ ಕಾರ್ಡ್ ಪರಿಶೀಲಿಸಿದ್ದೇವೆ. ಕೆಲವು ಕಡೆಗಳಲ್ಲಿ ನಿಯಮಗಳನ್ನ ಮೀರಿದ್ದು ಕಂಡು ಬಂದಿದೆ. ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ರಾತ್ರಿ 11ರ ನಂತರ ಎಲ್ಲವೂ ಬಂದ್ ಮಾಡಲು ಸೂಚನೆ ನೀಡಲಾಗಿದ್ದು, ದಾಂಡಿಯಾ ವೇಳೆ ಹೆಣ್ಣು ಮಕ್ಕಳ ಸುರಕ್ಷತೆಗೂ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ, ನಿಗದಿತ ಡೆಸಿಬಲ್ ಮೀರಿ ಕಿವಿಗಡಚಿಕ್ಕುವ ಶಬ್ದದೊಂದಿಗೆ ಡಿಜೆ/ಸೌಂಡ್ ಸಿಸ್ಟಮ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಗಾಳಿಗೆ ತೂರಿದ ಸ್ಥಳಗಳ ವಿರುದ್ಧವೂ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.

ಪರವಾನಗಿ ನಿಯಮಾವಳಿಗಳು, ನಿಗದಿತ ಸಮಯ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಕ್ಲಬ್ ಮತ್ತು ಪಬ್‌ಗಳನ್ನು ಪೊಲೀಸರು ಸ್ಥಳದಲ್ಲೇ ಬಾಗಿಲು ಹಾಕಿಸಿದ್ದಾರೆ.

ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವುದು ಮೊದಲ ಆದ್ಯತೆ. ಎಷ್ಟೇ ಪ್ರಭಾವಿ ವ್ಯಕ್ತಿಗಳ ಸಂಸ್ಥೆಗಳಾಗಿದ್ದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸುವ, ಅಪ್ರಾಪ್ತರಿಗೆ ಪ್ರವೇಶ ನೀಡುವ ಹಾಗೂ ನಿಗದಿತ ಸಮಯ ಮೀರಿ ವ್ಯವಹರಿಸುವ ಯಾವುದೇ ಅಡ್ಡೆಗಳಿಗೂ ರಿಯಾಯಿತಿ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular