HomeKarnatakaಮೈಸೂರು ದಸರಾ ಮಹೋತ್ಸವ: ಕೆಎಸ್‌ಟಿಡಿಸಿ ವತಿಯಿಂದ 7 ವಿಶೇಷ ಪ್ರವಾಸ ಪ್ಯಾಕೇಜ್‌ ಘೋಷಣೆ: ಇಲ್ಲಿದೆ ಮಾಹಿತಿ

ಮೈಸೂರು ದಸರಾ ಮಹೋತ್ಸವ: ಕೆಎಸ್‌ಟಿಡಿಸಿ ವತಿಯಿಂದ 7 ವಿಶೇಷ ಪ್ರವಾಸ ಪ್ಯಾಕೇಜ್‌ ಘೋಷಣೆ: ಇಲ್ಲಿದೆ ಮಾಹಿತಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದಸರಾ ಮಹೋತ್ಸವ ಹಾಗೂ ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ದಸರಾಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ.

ದಸರಾ ವೀಕ್ಷಣೆಗೆ ಬರುವ ಜನರು ಕೇವಲ ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯದ ಪ್ರಮುಖ ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಾಕೃತಿಕ ತಾಣಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಕೆಎಸ್‌ಟಿಡಿಸಿ ವತಿಯಿಂದ 7 ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಮೈಸೂರು ನಗರದ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಜನಪ್ರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಅಕ್ಟೋಬರ್ 11 ರಿಂದ ಆರಂಭಿಸಲಾಗುತ್ತಿದೆ.

ಮೈಸೂರಿನ ಅರಮನೆ ಹಾಗೂ ನಗರದ ಭವ್ಯತೆಯನ್ನು ಮೇಲ್ಭಾಗದಿಂದ ವೀಕ್ಷಿಸಲು ‘ಅಂಬಾರಿ’ ಓಪನ್ ಡೆಕ್ ಬಸ್ ಅತ್ಯಂತ ಜನಪ್ರಿಯವಾಗಿದೆ. ದಸರಾ ಹಿನ್ನೆಲೆಯಲ್ಲಿ ಈ ಬಸ್‌ಗಳ ಸಂಚಾರವನ್ನು ಹೆಚ್ಚಿಸಲಾಗಿದೆ.

ಅಕ್ಟೋಬರ್ 11 ರಿಂದ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಪ್ರತಿ ಒಂದು ಗಂಟೆಗೊಮ್ಮೆ ಬಸ್ ಸಂಚರಿಸಲಿದೆ. ದರ ಪ್ರತಿ ವ್ಯಕ್ತಿಗೆ 250 ರೂ.ಇರಲಿದೆ.

ನಗರದ ಝಗಮಗಿಸುವ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಸಂಜೆ 6:30, ರಾತ್ರಿ 8:00 ಹಾಗೂ ರಾತ್ರಿ 9:30ಕ್ಕೆ ವಿಶೇಷ ಟ್ರಿಪ್‌ಗಳು ಇರಲಿವೆ. ಕೆಳಗಿನ ಡೆಕ್ ಪ್ರತಿ ಸೀಟಿಗೆ 250 ರೂ. ಮೇಲಿನ ಡೆಕ್ ಪ್ರತಿ ಸೀಟಿಗೆ 500 ರೂ.ಇರಲಿದೆ.

ನಗರದ ಪ್ರಮುಖ ವೃತ್ತಗಳು, ಅರಮನೆಯ ಸುತ್ತಮುತ್ತಲಿನ ಪ್ರದೇಶಗಳು, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಅತ್ಯಾಕರ್ಷಕ ದೀಪಾಲಂಕಾರವಿರುವ ಪ್ರಮುಖ ರಸ್ತೆಗಳಲ್ಲಿ ‘ಅಂಬಾರಿ’ ಬಸ್ ಸಾಗಲಿದೆ.

7 ಪ್ರಮುಖ ಪ್ರವಾಸ ಪ್ಯಾಕೇಜ್‌ಗಳು

ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಒಂದು ದಿನ ಹಾಗೂ ಎರಡು ದಿನಗಳ ಅವಧಿಯ 7 ವೈವಿಧ್ಯಮಯ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ.

ಮೈಸೂರು ಸ್ಥಳೀಯ: ಮೈಸೂರಿನ ಪ್ರಮುಖ ಐತಿಹಾಸಿಕ ತಾಣಗಳ ವೀಕ್ಷಣೆ.

ಊಟಿ ಪ್ರವಾಸ: ಪ್ರಕೃತಿ ಪ್ರಿಯರಿಗಾಗಿ ಊಟಿಯ 2 ದಿನಗಳ ವಾರಾಂತ್ಯದ ಪ್ರವಾಸ.

ಬೇಲೂರು – ಹಳೆಬೀಡು – ಶ್ರವಣಬೆಳಗೊಳ: ಹೊಯ್ಸಳ ವಾಸ್ತುಶಿಲ್ಪ ಹಾಗೂ ಜೈನ ಧಾರ್ಮಿಕ ತಾಣಗಳ ಐತಿಹಾಸಿಕ ಪ್ರವಾಸ.

ಕೊಡಗು ಪ್ರವಾಸ: ಮಂಜಿನ ನಗರಿ ಮಡಿಕೇರಿ ಮತ್ತು ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ.

ಶಿವನಸಮುದ್ರ ಪ್ಯಾಕೇಜ್: ಜಲಪಾತ ಹಾಗೂ ಸುತ್ತಮುತ್ತಲಿನ ರಮಣೀಯ ಪ್ರದೇಶಗಳ ಭೇಟಿ.

ನಂಜನಗೂಡು ಮತ್ತು ಧಾರ್ಮಿಕ ತಾಣಗಳು: ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಸ್ಥಾನ ಸೇರಿದಂತೆ ಸುತ್ತಮುತ್ತಲಿನ ದೇವಾಲಯಗಳ ದರ್ಶನ.

ಪ್ರಾಕೃತಿಕ ಮತ್ತು ಪಾರಂಪರಿಕ ತಾಣಗಳ ವೀಕ್ಷಣೆ: ಮೈಸೂರು ಭಾಗದ ಇತರೆ ಪ್ರಮುಖ ಹೆರಿಟೇಜ್ ಸ್ಪಾಟ್‌ಗಳನ್ನು ಒಳಗೊಂಡ ಯೋಜನೆ.

ಹೆಚ್ಜಿನಮಾಹಿತಿ ಮತ್ತು ಮುಂಗಡ ಬುಕ್ಕಿಂಗ್‌ಗಾಗಿ

ಕೆಎಸ್‌ಟಿಡಿಸಿಯ ಈ ಕೆಳಗಿನ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆಗಳು: ಬೆಂಗಳೂರು: 080-4334 4334 / 35 / 36 / 42

ಅಧಿಕೃತ ವೆಬ್‌ಸೈಟ್: http://www.kstdc.co ಸಂಪರ್ಕಿಸಬಹುದು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular