ಬೆಂಗಳೂರು: ಶರನ್ನವರಾತ್ರಿ ಹಿನ್ನೆಲೆಯಲ್ಲಿ ಶೃಂಗೇರಿಯ ಶ್ರೀ ಶಾರದಾ ಪೀಠದ ವತಿಯಿಂದ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ಶಾರದಾಂಬ ದೇವಾಯದಲ್ಲಿ ಇಂದು ಅಕ್ಟೋಬರ್ 10ರಿಂದ ಶ್ರೀ ಶಾರದಾ ಮಹಾಭಿಷೇಕ ಹಾಗೂ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.
ಇಂದಿನಿಂದ ಅಕ್ಟೋಬರ್ 26ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 10ರ ಶನಿವಾರದಿಂದ ಅಕ್ಟೋಬರ್ 26ರ ಸೋಮವಾರದವರೆಗೆ ಈ ಧಾರ್ಮಿಕ ಮಹೋತ್ಸವ ನಡೆಯಲಿದೆ. ಶ್ರೀ ಶಾರದಾಂಬ ದೇವಿಯ ಆರಾಧನೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿರುವ ಈ ಮಹೋತ್ಸವದಲ್ಲಿ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಲು ಕೋರಲಾಗಿದೆ.
ಬೆಂಗಳೂರು ಗಿರಿನಗರದಲ್ಲಿರುವ ಶ್ರೀ ಶೃಂಗೇರಿ ಶಾರದಾಂಬ ದೇವಸ್ಥಾನದಲ್ಲಿ ಇಂದಿನಿಂದ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ಉತ್ತರಾಧಿಕಾರಿಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ಅಕ್ಟೋಬರ್ 10ರಂದು ಶಾರದಾಂಬ ದೇವಿಯ ಮಹಾಭಿಷೇಕ ನೆರವೇರಿಸಲು ಅನುಮತಿ ದೊರೆತಿದೆ.
ಅಕ್ಟೋಬರ್ 11ರ ಭಾನುವಾರದಿಂದ ಆರಂಭವಾಗುವ ಶರನ್ನವರಾತ್ರಿ ಉತ್ಸವವು ಅಕ್ಟೋಬರ್ 26ರ ಸೋಮವಾರದವರೆಗೆ ನಡೆಯಲಿದೆ. ಆಶ್ವಯುಜ ಶುಕ್ಲ ಪಾಡ್ಯದಿಂದ ಪೂರ್ಣಿಮೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಈ ಸಂದರ್ಭದಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ, ವಿವಿಧ ಸೇವೆಗಳನ್ನು ಸಲ್ಲಿಸುವ ಮೂಲಕ ಶ್ರೀ ಶಾರದಾಂಬೆ ಹಾಗೂ ಜಗದ್ಗುರುಗಳ ದಿವ್ಯ ಆಶೀರ್ವಾದ ಪಡೆಯುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ದಿನಾಂಕ ಮತ್ತು ವಾರ ಅಲಂಕಾರ ವಿಶೇಷ ಪೂಜೆ ಮತ್ತು ಹೋಮದ ವಿವರ
10.10.2026 – ಶನಿವಾರ ಹರಿದ್ರಾಲಂಕಾರ, ಜಗತ್ಪ್ರಸೂತಿಕಾ ಶ್ರೀ ಶಾರದಾ ಮಹಾಭಿಷೇಕ
11.10.2026 – ಭಾನುವಾರ ಬ್ರಾಹ್ಮೀ (Brahmi) ಮಹಾಗಣಪತಿ ಹೋಮ
12.10.2026 – ಸೋಮವಾರ ಮಾಹೇಶ್ವರಿ (Maheshwari) ರುದ್ರಹೋಮ
13.10.2026 – ಮಂಗಳವಾರ ಕೌಮಾರಿ (Koumari) ನವಗ್ರಹ ಸಹಿತ ಮಹಾಮೃತ್ಯುಂಜಯ ಹೋಮ
14.10.2026 – ಬುಧವಾರ ವೈಷ್ಣವಿ (Vaishnavi) ಲಕ್ಷ್ಮೀನಾರಾಯಣ ಹೃದಯ ಹೋಮ
15.10.2026 – ಗುರುವಾರ ಇಂದ್ರಾಣಿ (Indrani) ಲಲಿತಾ ಹೋಮ
16.10.2026 – ಶುಕ್ರವಾರ ವೀಣಾ ಸರಸ್ವತಿ (Veenasaraswathi) ವಿದ್ಯಾಸರಸ್ವತಿ ಹೋಮ
17.10.2026 – ಶನಿವಾರ ಅಶ್ವವಾಹಿನಿ (Ashwavahini) ಶ್ರೀಸೂಕ್ತ ಹೋಮ
18.10.2026 – ಭಾನುವಾರ ದುರ್ಗಾ (Durga) ದುರ್ಗಾ ಹೋಮ
19.10.2026 – ಸೋಮವಾರ ಅನ್ನಪೂರ್ಣಾ (Annapurna) ವಿಷ್ಣು ಸಹಸ್ರನಾಮ ಹೋಮ
20.10.2026 – ಮಂಗಳವಾರ ರಾಜರಾಜೇಶ್ವರಿ (Rajarajeshwari) ಧನ್ವಂತರಿ ಹೋಮ
21.10.2026 – ಬುಧವಾರ ಸ್ವರ್ಣವಸ್ತ್ರ ಸಹಿತ ಗಜಲಕ್ಷ್ಮಿ ಚಂಡಿಕಾ ಹೋಮ ಪೂರ್ಣಾಹುತಿ
22.10.2026 – ಗುರುವಾರ ಕಾಮಧೇನು (Kamadhenu) ಸ್ವಯಂವರ ಪಾರ್ವತಿ ಹೋಮ

