HomeKarnatakaಫಾರ್ಮ್ 7 ದುರ್ಬಳಕೆ ಆರೋಪ: ಎಫ್ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್

ಫಾರ್ಮ್ 7 ದುರ್ಬಳಕೆ ಆರೋಪ: ಎಫ್ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ ಐ ಆರ್) ವೇಳೆ ತಪ್ಪು ಮಾಹಿತಿ ನೀಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಫಾರ್ಮ್ 7 ಸಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್​ಐಆರ್​ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್​ ದೂರು ಆಧರಿಸಿ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಮಲ್ಲೇಶ್ವರಂನ ಬೂತ್ ಏಜೆಂಟ್ ವಸಂತಲಕ್ಷ್ಮೀ ಮತ್ತು ದೀಪಕ್ ಸಿಂಗ್​​ ವಿರುದ್ಧ ಎಫ್​​ಐಆರ್ ದಾಖಲಾಗಿತ್ತು. ಎಫ್‌ಐಆರ್ ರದ್ದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠ, ಇದು ಮೇಲ್ನೋಟಕ್ಕೇ ಆತುರದ ದೂರು ಎಂದು ಅಭಿಪ್ರಯಾಪಟ್ಟಿದೆ. ಅಲ್ಲದೇ ಎಫ್​ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಬಿಎಲ್ಎಗಳಾಗಿ ವೋಟರ್ ಲಿಸ್ಟ್​ನಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ತೀರ್ಮಾನಿಸಲು ಅವಕಾಶವಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.

ಅರ್ಜಿದಾರರ ವಾದಕ್ಕೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಅನೂಪ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, 50 ಅರ್ಜಿ ಸಲ್ಲಿಸಬಹುದು, ಆದರೆ 778 ಫಾರಂ 7 ಸಲ್ಲಿಸಿದ್ದಾರೆ. ದುರುದ್ದೇಶದಿಂದ ಮತದಾರರನ್ನ ಡಿಲೀಟ್ ಮಾಡಲು ಯತ್ನಿಸಿದ್ದಾರೆ ಎಂದು ವಾದಿಸಿದರು.

ವಿಚಾರಣೆ ವೇಳೆ ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರು ಸರ್ಕಾರದ ಪರ ವಕೀಲರಿಗೆ ಕೆಲ ಪ್ರಶ್ನೆ ಮಾಡಿದರು. 50ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಯಾವ ಕಾಯ್ದೆಯಡಿ ಅಪರಾಧ? ಫಾರ್ಮ್ 7 ಸಲ್ಲಿಸಿದಾಗ ಆ ಬಗ್ಗೆ ಅಧಿಕಾರಿಗಳು ವಿಚಾರಣೆ ಮಾಡುತ್ತಾರಲ್ಲವೇ? ತಪ್ಪು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ತೀರ್ಮಾನಿಸುತ್ತಾರಲ್ಲವೇ? ಡಿಲೀಟ್ ಆಗುವ ಜನರಿಗೂ ನೋಟಿಸ್ ನೀಡುವುದಿಲ್ಲವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಮತದಾರರು ಇಂಥವರಿಗೇ ಮತ ಹಾಕಿದ್ದಾರೆಂದು ತಿಳಿಯುವುದಿಲ್ಲವಲ್ಲ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಇದು ಮೇಲ್ನೋಟಕ್ಕೇ ಆತುರದ ದೂರು ಎಂದು ಅಭಿಪ್ರಯಾಪಟ್ಟಿದೆ. ಅಲ್ಲದೇ ಎಫ್ಐಆರ್ ಗೆ ತಡೆ ನೀಡಿದೆ.

ನಾವು ಪ್ರತಿಭಟನೆ ಮಾಡೇ ಮಾಡ್ತೇವೆ: ನಮ್ಮ ಆಂದೋಲನ ನಿಲ್ಲುವುದಿಲ್ಲ: ಮೂಲಭೂತ ಹಕ್ಕಿಗೆ ಅನುಮತಿ ಅಗತ್ಯವಿಲ್ಲ ಎಂದ ಸಿಜೆಪಿ ನಾಯಕ ಅಭಿಜಿತ್ ದಿಪ್ಕೆ

ನವದೆಹಲಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಾಳೆ ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿಯ ಜಂತರ್-ಮಂತರ್ ನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಆದರೆ ಸಿಜೆಪಿ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮೆಟ್ರೋ ಸ್ಟೇಷನ್ ಗಳನ್ನು ಬಂದ್ ಮಾಡಲಾಗಿದೆ. ಹಲವು ರೈಲು ಸಂಚಾರ ಕೂಡ ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ ಕೂಡ ಸಿಜೆಪಿ ಪ್ರತಿಭಟನೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಜೆಪಿ ಮುಖ್ಯಸ್ಥ ಅಭಿಜಿತ್ ದಿಪ್ಕೆ, ನಾವು ಪ್ರತಿಭಟನೆ ಮಾಡಿಯೇ ಮಾಡುತ್ತೇವೆ. ನಮ್ಮ ಹೋರಾಟ ಮುಂದುವರೆಯಲಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಧರಣಿ ನಡೆಯಲಿದೆ ಎಂದಿದ್ದಾರೆ.

ನಮ್ಮ ಆಂದೋಲನ ನಿಲ್ಲುವುದಿಲ್ಲ. ಜಂತರ್ ಮಂತರ್ ನಿಗದಿತ ಪ್ರತಿಭಟನಾ ಸ್ಥಳವಾಗಿದೆ. ಸಂವಿಧಾನದ ವಿಧಿ 19 ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನೀಡುತ್ತದೆ. ಹಾಗಿದ್ದಾಗ ಅನುಮತಿ ಪಡೆಯುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ.

ಎಸ್​ಐಆರ್​ ಪ್ರಕ್ರಿಯೆಯ ವಿಚಾರವಾಗಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “13 ಕೋಟಿ ಮತಗಳನ್ನು ತೆಗೆದುಹಾಕುವ ಮೊದಲು ಅವರು ಅನುಮತಿ ಪಡೆದಿದ್ದರೆ? ಹಾಗಿರುವಾಗ ಚುನಾವಣೆಯಲ್ಲಿ ಅಕ್ರಮ ಎಸಗುವವರ ವಿರುದ್ಧ ನಾವು ಪ್ರತಿಭಟನೆ ನಡೆಸಬಾರದು ಎಂದು ಹೇಳುವುದು ಎಷ್ಟು ಸರಿ? ಇದು ಸಾಧ್ಯವಿಲ್ಲ. ದೇಶವನ್ನು ಉಳಿಸಲು ನಾವು ಪ್ರತಿಭಟನೆ ನಡೆಸುತ್ತೇವೆ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ದೇಶದಾದ್ಯಂತ ಸಾವಿರಾರು ಯುವಕರನ್ನು ಬಂಧಿಸಲಾಗುತ್ತಿದೆ ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ದಿಪ್ಕೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರ ಈ ಹೇಳಿಕೆ ಬಂದಿದೆ. ಇಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ದಿಪ್ಕೆ, “ನಮ್ಮ ಅಕ್ಟೋಬರ್ 10ರ ಪ್ರತಿಭಟನೆಗೆ ಮುನ್ನ ಬಿಜೆಪಿ ಸರ್ಕಾರವು ದೇಶಾದ್ಯಂತ ಸಾವಿರಾರು ಯುವಕರನ್ನು ವಶಕ್ಕೆ ಪಡೆದಿದೆ. ಈ ಬೆದರಿಕೆ ತಂತ್ರಗಳು ನಡೆಯುವುದಿಲ್ಲ ಮೋದಿಯವರೇ. ಈ ದೇಶದ ಯುವಕರು ಇನ್ನು ಮುಂದೆ ನಿಮಗೆ ಹೆದರುವುದಿಲ್ಲ” ಎಂದು ಹೇಳಿದ್ದರು.

ಎಸ್​ಐಆರ್​ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಮತ್ತು ಸಿಜೆಪಿ ಆಗ್ರಹಿಸುತ್ತಿವೆ. ಆಂತರಿಕ ಸಭೆಯಲ್ಲಿ ಇಬ್ಬರು ಚುನಾವಣಾ ಆಯುಕ್ತರು ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಲು ಒಪ್ಪಿರಲಿಲ್ಲ ಮತ್ತು ಆಕ್ಷೇಪಣೆಗಳನ್ನು ಎತ್ತಿದ್ದರು ಎಂದು ವರದಿಯಾದ ಬಳಿಕ ಅವರ ರಾಜೀನಾಮೆಗೆ ಆಗ್ರಹ ತೀವ್ರಗೊಂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular