HomeEntertainmentಹಾಲಿವುಡ್‌ನಲ್ಲಿ ಅಚ್ಚರಿಯ ಸುದ್ದಿ ವೈರಲ್: ಸಿಡ್ನಿ ಸ್ವೀನಿ-ಮರ್ಲಿನ್ ಮನ್ನ್ರೊ ನಡುವೆ ಇದೆ ರಕ್ತಸಂಬಂಧ!

ಹಾಲಿವುಡ್‌ನಲ್ಲಿ ಅಚ್ಚರಿಯ ಸುದ್ದಿ ವೈರಲ್: ಸಿಡ್ನಿ ಸ್ವೀನಿ-ಮರ್ಲಿನ್ ಮನ್ನ್ರೊ ನಡುವೆ ಇದೆ ರಕ್ತಸಂಬಂಧ!

ಹಾಲಿವುಡ್‌ ಯುವ ನಟಿ ಸಿಡ್ನಿ ಸ್ವೀನಿ ಹಾಗೂ ದಂತಕಥೆ ಮರ್ಲಿನ್ ಮನ್ನ್ರೊ ಅವರನ್ನು ‘ಈ ಪೀಳಿಗೆಯ ಮರ್ಲಿನ್ ಮನ್ನ್ರೊ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹೆಚ್ಚಾಗಿ ಹೋಲಿಸುತ್ತಿದ್ದರು. ಆದರೆ ಈ ಹೋಲಿಕೆ ಬರಿ ನೋಟಕ್ಕೆ ಮಾತ್ರ ಸೀಮಿತವಾಗಿರದೆ, ಇಬ್ಬರ ಡಿಎನ್‌ಎ ಹಾಗೂ ವಂಶಾವಳಿಯಲ್ಲೂ ಸಂಬಂಧವಿದೆ ಎಂಬ ಆಸಕ್ತಿಕರ ವಿಚಾರ ವಂಶಾವಳಿ ಅಧ್ಯಯನ ಸಂಸ್ಥೆ ‘ಮೈಹೆರಿಟೇಜ್’ (MyHeritage) ನಡೆಸಿದ ಸಂಶೋಧನೆಯಿಂದ ಹೊರಬಿದ್ದಿದೆ.

9ನೇ ತಲೆಮಾರಿನ ಸಹೋದರಿಯರು (Ninth Cousins Once Removed):

‘ಮೈಹೆರಿಟೇಜ್’ ಸಂಶೋಧನೆಯ ಪ್ರಕಾರ, ಸಿಡ್ನಿ ಸ್ವೀನಿ ಮತ್ತು ಮರ್ಲಿನ್ ಮನ್ನ್ರೊ ಅವರ ತಂದೆಯ ವಂಶಾವಳಿಯ ಮೂಲ ಒಂದೇ ಆಗಿದೆ. 1600ರ ದಶಕದಲ್ಲಿ ಮ್ಯಾಸಚೂಸೆಟ್ಸ್‌ನ ಸ್ಯಾಂಡ್‌ವಿಚ್‌ನಲ್ಲಿ ನೆಲೆಸಿದ್ದ ‘ಎಜ್ರಾ ಪೆರ್ರಿ’ (Ezra Perry) ಎಂಬ ವ್ಯಕ್ತಿಯು ಇಬ್ಬರ ಪೂರ್ವಜನಾಗಿದ್ದಾನೆ. ಸಿಡ್ನಿ ಅವರ ತಂದೆ ಸ್ಟೀವನ್ ಸ್ವೀನಿ ಹಾಗೂ ಮರ್ಲಿನ್ ಅವರ ತಂದೆ ಚಾರ್ಲ್ಸ್ ಸ್ಟಾನ್ಲಿ ಗಿಫರ್ಡ್ ಅವರ ಕುಟುಂಬದ ಕೊಂಡಿಗಳು ಎಜ್ರಾ ಪೆರ್ರಿಗೆ ತಲುಪುತ್ತವೆ. ಈ ಮೂಲಕ ಇಬ್ಬರೂ ನಟಿಯರು ‘ನೈಂತ್ ಕಸಿನ್ಸ್, ಒನ್ಸ್ ರಿಮೂವ್ಡ್’ (9th Cousins, Once Removed) ಎಂಬ ದೂರದ ಸಂಬಂಧವನ್ನು ಹೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2026ರ ಸಾಂತಾ ಬಾರ್ಬರಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿಡ್ನಿ ಸ್ವೀನಿ ಅವರು 1952ರಲ್ಲಿ ಮರ್ಲಿನ್ ಮನ್ನ್ರೊ ತೊಟ್ಟಿದ್ದ ಶೈಲಿಯ ವಿಂಟೇಜ್ ಉಡುಪು ಧರಿಸಿ ಗಮನ ಸೆಳೆದಿದ್ದರು.

ಡಕೋಟಾ ಜಾನ್ಸನ್ ಕೂಡ ಸಂಬಂಧಿ!

ಮತ್ತೊಂದು ಆಸಕ್ತಿಕರ ವಿಷಯವೆಂದರೆ, ಮ್ಯಾಗಿ ಗಿಲೆನ್ಹಾಲ್ ಅವರ ‘ಫ್ಲೆಶ್ ಇಂಪ್ಯಾಕ್ಟ್’ ಕಿರುಚಿತ್ರದಲ್ಲಿ ಮರ್ಲಿನ್ ಮನ್ನ್ರೊ ಪಾತ್ರದಲ್ಲಿ ನಟಿಸಿದ್ದ ನಟಿ ಡಕೋಟಾ ಜಾನ್ಸನ್ ಕೂಡ ಮರ್ಲಿನ್ ಅವರ 9ನೇ ತಲೆಮಾರಿನ ಸಂಬಂಧಿ (9th Cousin, Three Times Removed) ಎಂದು ಮೈಹೆರಿಟೇಜ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಸಿಡ್ನಿ ಸ್ವೀನಿ ಮತ್ತು ಡಕೋಟಾ ಜಾನ್ಸನ್ ನಡುವೆಯೂ ದೂರದ ರಕ್ತಸಂಬಂಧವಿರುವುದು ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular