ಬೆಂಗಳೂರು: ಹೋಟೆಲ್, ಪಿಜಿ, ಆಹಾರ ಮಳಿಗೆಗಳ ಮೇಲೆ ದಾಳಿ ಬಳಿಕ ಇದೀಗ ಕರ್ನಾಟಕದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು, ಮೈಸೂರು, ರಾಯಚೂರು ಸೇರಿದಂತೆ ರಾಜ್ಯದ 45 ಅಸ್ ಕ್ರೀಂ ಘಟಕಗಳ ಮೇಲೆ ಏಕಕಾಲಕ್ಕೆ ದಾಅಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ದಾಳಿ ವೇಳೆ ಅವಧಿ ಮೀರಿದಐಸ್‌ಕ್ರೀಂ, ಹಾಲು, ಬಿಸ್ಕತ್ ಮತ್ತು ಕೊಬ್ಬರಿ ಪುಡಿ ಸೇರಿದಂತೆ ವಿವಿಧ ಆಹಾರ ಸಾಮಗ್ರುಗಳು ಪತ್ತೆಯಾಗಿವೆ.
ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನಲ್ಲಿರುವ ಸಾವರ ಐಸ್‌ಕ್ರೀಂ ಕೆಫೆ, ಬಿಳೇಕಹಳ್ಳಿಯ ಬನ್ನೇರುಘಟ್ಟ ರಸ್ತೆಯ ಎನ್ ಎಂಟರ್‌ಪ್ರೈಸಸ್, ಮೈಸೂರಿನ ಜಾನ್ ಕ್ಯಾಂಡಿ ಐಸ್‌ಕ್ರೀಂ ತಯಾರಿಕಾ ಘಟಕ ಮತ್ತು ರಾಯಚೂರಿನ ಜೆಮಿನಿ ಐಸ್‌ಕ್ರೀಂ ತಯಾರಿಕಾ ಘಟಕ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ತಪಾಸಣೆ ವೇಳೆ ಐಸ್‌ಕ್ರೀಂ, ಹಾಲು, ಹಾಲಿನ ಪುಡಿ, ಫ್ಲೇವರಿಂಗ್ ಪದಾರ್ಥಗಳು ಮತ್ತು ಸಕ್ಕರೆ ಸೇರಿದಂತೆ ಒಟ್ಟು 70 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಗುಣಮಟ್ಟದ ಪರಿಶೀಲನೆಗಾಗಿ ರವಾನಿಸಲಾಗುತ್ತಿದೆ.
ಆಹಾರ ಉತ್ಪನ್ನಗಳ ಮೇಲೆ ಲೇಬಲಿಂಗ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆಯ ಪರಿಶೀಲನೆಗಾಗಿ ಈ ದಾಳಿ ನಡೆಸಲಾಗಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು 64 ಪಿಜಿಗಳ ಮೇಲೆ ದಾಳಿ ನಡೆಸಿ, ನೈರ್ಮಲ್ಯ ವ್ಯವಸ್ಥೆ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳ ಕುರಿತು ಪರಿಶೀಲನೆ ನಡೆಸಿದ್ದರು. ಅದಕ್ಕೂ ಮುನ್ನ ಹೋಟೆಲ್, ರೆಸ್ಟೋರೆಂಟ್ಗಳ ಮೇಲೆ ಸರಣಿ ದಾಳಿ ನಡೆಸಿದ್ದವು. ಮತ್ತೊಂದೆಡೆ, ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ತಯಾರಿಕಾ ಜಾಲವೊಂದು ಪತ್ತೆಯಾಗಿತ್ತು. ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಇಲಾಖೆ ಕೈಗೊಂಡಿದ್ದ ಹಿಂದಿನ ಕಾರ್ಯಾಚರಣೆಗಳ ಬೆನ್ನಲ್ಲೇ ಇದೀಗ ಮತ್ತಷ್ಟು ಘಟಕಗಳ ಮೇಲೆ ದಾಳಿ ನಡೆಸಲಾಗಿದೆ.
ಸಾರಿಗೆ ನೌಕರರ 2,500 ಕೋಟಿ ರೂಪಾಯಿ ಪಿಎಫ್ ಹಣ ದುರ್ಬಳಕೆ ಆರೋಪ: ಅಧಿಕಾರಿಗಳ ವಿರುದ್ಧ ಆಕ್ರೋಶ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು, ಚಾಲಕರು, ನಿರ್ವಾಹಕರ 2,500 ಕೋಟಿ ರೂಪಾಯಿ ಪಿಎಫ್ ಹಣ ದುರ್ಬಳಕೆಯಾಅಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳ ವಿರುದ್ಧ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್ ಟಿಸಿ, ಎನ್ ಡಬ್ಲ್ಯೂ ಕೆ ಎಸ್ ಆರ್ ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ನೌಕರರು ತಮ್ಮ ಭವಿಷ್ಯದ ಭದ್ರತೆಗಾಗಿ ಹಾಗೂ ಕಷ್ಟಕಾಲದ ಬಳಕೆಗಾಗಿ ಕಷ್ಟಪಟ್ಟು ಕಟ್ಟಿದ್ದ ಸಾವಿರಾರು ಕೋಟಿ ರೂಪಾಯಿ ಪಿಎಫ್ ಹಣ ದುರ್ಬಳಕೆಯಾಗಿದೆ.
ಸಾರಿಗೆ ನಿಗಮಗಳ ಸುಮಾರು 1 ಲಕ್ಷದ 10 ಸಾವಿರ ನೌಕರರ ಪೈಕಿ ಸುಮಾರು 2,500 ಕೋಟಿ ರೂಪಾಯಿ ಪಿಎಫ್ ಹಣ ಟ್ರಸ್ಟ್ ತಲುಪದೇ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಿಯಮಗಳ ಪ್ರಕಾರ ನೌಕರರ ವೇತನದಲ್ಲಿ ಕಡಿತಗೊಳಿಸುವ ಪಿಎಫ್ ಹಣವನ್ನು ಸಂಸ್ಥೆಯ ಇತರೆ ಖರ್ಚುಗಳಿಗೆ ಬಳಸುವಂತಿಲ್ಲ. ಆದರೆ, ನಿಗಮಗಳು ಈ ಹಣವನ್ನು ಡೀಸೆಲ್ ಖರೀದಿ ಹಾಗೂ ನೌಕರರ ಮಾಸಿಕ ವೇತನ ಪಾವತಿಯಂತಹ ಸ್ವಂತ ಖರ್ಚುಗಳಿಗೆ ಬಳಸಿಕೊಂಡಿವೆ ಎನ್ನಲಾಗಿದೆ.
ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ ಶೇ 12 ರಷ್ಟು ಹಣ ಕಡಿತಗೊಳಿಸಿ, ನಿಗಮವೂ ಅಷ್ಟೇ ಪ್ರಮಾಣದ ಪಾಲು ಸೇರಿಸಿ ಪಿಎಫ್ ಟ್ರಸ್ಟ್‌ಗೆ ಪಾವತಿಸಬೇಕಿರುತ್ತದೆ. ಬಿಎಂಟಿಸಿ ಒಂದೇ ನಿಗಮದಿಂದ ತಿಂಗಳಿಗೆ 28 ಕೋಟಿ ರೂ.ನಂತೆ ವರ್ಷಕ್ಕೆ 336 ಕೋಟಿ ರೂ. ಪಾವತಿಯಾಗಬೇಕಿದ್ದು, ಒಟ್ಟು 1,000 ಕೋಟಿ ರೂ. ಬಾಕಿಯಿದೆ. ಇನ್ನುಳಿದ ಕೆಎಸ್‌ಆರ್‌ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಿಂದ ಸುಮಾರು 1,500 ಕೋಟಿ ರೂಪಾಯಿ ಹಣ ಪಾವತಿಯಾಗದೇ ಉಳಿದಿದೆ.
ಕಳೆದ ಎರಡು ತಿಂಗಳಿನಿಂದ ಮಗಳ ಮದುವೆ, ಮಕ್ಕಳ ಶಾಲಾ ಫೀಸು ಹಾಗೂ ವೈದ್ಯಕೀಯ ತುರ್ತು ಅಗತ್ಯಗಳಿಗಾಗಿ ಪಿಎಫ್ ಹಣ ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿರುವ ನೌಕರರಿಗೆ ಹಣ ಕ್ಲೈಮ್ ಆಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.

