ಬೆಂಗಳೂರು- ವಿಶ್ವವಿಖ್ಯಾತ ಮೈಸೂರು ದಸರಾ-2026ರ ಉತ್ಸವವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರು ಹಾಗೂ ಜನಪ್ರತಿನಿಧಿಗಳಿಗೆ ದಿನವಾರು ಜವಾಬ್ದಾರಿ ವಹಿಸಿ, ನಿಗದಿತ ದಿನಗಳಲ್ಲಿ ಮೈಸೂರಿನಲ್ಲಿ ತಪ್ಪದೇ ಭಾಗವಹಿಸುವಂತೆ ಸೂಚಿಸಿದ್ದಾರೆ.
ವಿಧಾನಸೌಧದಿಂದ ಅಕ್ಟೋಬರ್ 6ರಂದು ಹೊರಡಿಸಿರುವ ಟಿಪ್ಪಣಿಯಲ್ಲಿ, ತಮ್ಮ ಇಲಾಖಾ ವ್ಯಾಪ್ತಿಯಿಂದ ಆಯೋಜಿಸಲಾಗುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಸಂಬಂಧಪಟ್ಟ ಸಚಿವರು ಭಾಗವಹಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ದಸರಾ ರಾಜ್ಯದ ಪ್ರಮುಖ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಉತ್ಸವವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಸಮನ್ವಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.
ಸಮನ್ವಯದ ಜವಾಬ್ದಾರಿ
ಯತೀಂದ್ರ, ತಂಗಡಗಿಗೆ ಸಮನ್ವಯದ ಹೊಣೆ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ದಸರಾ ಅವಧಿಯಲ್ಲಿ ಮೈಸೂರಿನಲ್ಲಿಯೇ ಇದ್ದು, ಪ್ರತಿದಿನ ನಡೆಯುವ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಸಮನ್ವಯದ ಜವಾಬ್ದಾರಿ ನಿರ್ವಹಿಸುವಂತೆ ಸಿಎಂ ಸೂಚಿಸಿದ್ದಾರೆ.
ಪ್ರತಿ ವರ್ಷ ದಸರಾ ಉತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು, ಯುವಜನ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದಲ್ಲದೆ, ಜಂಬೂಸವಾರಿ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯವೂ ಪ್ರಮುಖವಾಗುತ್ತದೆ.
ಪ್ರವಾಸೋದ್ಯಮ ಮಹತ್ವ
ಪ್ರವಾಸೋದ್ಯಮಕ್ಕೆ ದಸರಾ ಪ್ರಮುಖ ವೇದಿಕೆ
ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಉತ್ಸವವಾಗಿರದೆ, ರಾಜ್ಯದ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುವ ಉತ್ಸವವಾಗಿದೆ. ಹೀಗಾಗಿ ಉತ್ಸವದ ದಿನಗಳಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯ ಮೂಲಕ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಸಾರ್ವಜನಿಕರೊಂದಿಗೆ ನೇರ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಹಿಂದಿನ ವರ್ಷಗಳ ದಸರಾ ಉತ್ಸವಗಳಲ್ಲಿಯೂ ಗಣ್ಯರು, ಸಚಿವರು ಹಾಗೂ ಜನಪ್ರತಿನಿಧಿಗಳು ವಿವಿಧ ದಿನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಅಕ್ಟೋಬರ್ 11ರಿಂದ 21ರವರೆಗೆ ದಿನವಾರು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿರುವುದು ಉತ್ಸವದ ಕಾರ್ಯಕ್ರಮಗಳ ನಿರಂತರ ಮೇಲ್ವಿಚಾರಣೆಗೆ ಸರ್ಕಾರ ಒತ್ತು ನೀಡಿರುವುದನ್ನು ತೋರಿಸುತ್ತದೆ.
ದಸರಾ ಉತ್ಸವವನ್ನು ಯಾವುದೇ ಲೋಪವಿಲ್ಲದೆ, ಸಾಂಸ್ಕೃತಿಕ ವೈಭವ ಮತ್ತು ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ ನಡೆಸುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ವಿವಿಧ ಹಂತಗಳಲ್ಲಿ ಸೂಚನೆ ನೀಡಲಾಗಿದ್ದು, ಮುಖ್ಯಮಂತ್ರಿ ನೀಡಿರುವ ಹೊಸ ನಿರ್ದೇಶನದ ಹಿನ್ನೆಲೆಯಲ್ಲಿ ಸಚಿವರ ಭಾಗವಹಿಸುವಿಕೆಯೂ ಇದೀಗ ಅಧಿಕೃತ ವೇಳಾಪಟ್ಟಿಯ ರೂಪ ಪಡೆದಿದೆ.
ವಿಜಯದಶಮಿ ದಿನದ ಪ್ರಮುಖರು
ಅಕ್ಟೋಬರ್ 21, 2026 (ವಿಜಯದಶಮಿ ವಿಶೇಷ):
ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಂಪುಟದ ಎಲ್ಲಾ ಮಾನ್ಯ ಸಚಿವರು
ರಾಜ್ಯದ ಎಲ್ಲಾ ಲೋಕಸಭಾ ಹಾಗೂ ರಾಜ್ಯಸಭಾ ಸಂಸದರು
ರಾಜ್ಯದ ಎಲ್ಲಾ ವಿಧಾನಸಭಾ ಹಾಗೂ ವಿಧಾನ ಪರಿಷತ್ ಶಾಸಕರು
ಸಮರ್ಪಕ ಉಸ್ತುವಾರಿ
ಸಮನ್ವಯ ಹಾಗೂ ಮೇಲ್ವಿಚಾರಣೆ ಹೊಣೆ:
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಶಿವರಾಜ್ ತಂಗಡಗಿ ಅವರು ದಸರಾ ಮಹೋತ್ಸವದ ಪೂರ್ಣ ದಿನಗಳಲ್ಲಿ ಮೈಸೂರಿನಲ್ಲಿಯೇ ಮೊಕ್ಕಾಂ ಹೂಡಿ, ಸಮಸ್ತ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಸಮನ್ವಯದ ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ದಿನಾಂಕವಾರು ಭಾಗವಹಿಸುವ ಗಣ್ಯರ ವಿವರ:
ಅಕ್ಟೋಬರ್ 11,
ಮುಖ್ಯಮಂತ್ರಿ(ಡಿ.ಕೆ. ಶಿವಕುಮಾರ್)
ಉಪ ಮುಖ್ಯಮಂತ್ರಿಗಳು
ಯತೀಂದ್ರ ಸಿದ್ದರಾಮಯ್ಯ
ಶಿವರಾಜ್ ತಂಗಡಗಿ
ಅಕ್ಟೋಬರ್ 12, 2026:
ಕೆ.ಹೆಚ್. ಮುನಿಯಪ್ಪ
ರಘುಮೂರ್ತಿ
ಅಕ್ಟೋಬರ್ 13, 2026:
ಕೆ.ಜೆ. ಜಾರ್ಜ್
ಎನ್. ಚಲುವರಾಯಸ್ವಾಮಿ
ಪುಟ್ಟರಂಗಶೆಟ್ಟಿ
ಅಕ್ಟೋಬರ್ 14,
ಕೆ.ಎಸ್. ಬಸವಂತಪ್ಪ
ಬೈರತಿ ಸುರೇಶ್
ಅಕ್ಟೋಬರ್ 15,
ಸತೀಶ್ ಜಾರಕಿಹೊಳಿ
ಈಶ್ವರ್ ಖಂಡ್ರೆ
ಹೆಚ್.ಸಿ. ಬಾಲಕೃಷ್ಣ
ಅಕ್ಟೋಬರ್ 16,
ರಾಮಲಿಂಗಾ ರೆಡ್ಡಿಶ್
ಬಸವರಾಜ್ ರಾಯರೆಡ್ಡಿ
ಶಿವಲಿಂಗೇಗೌಡ
ಅಕ್ಟೋಬರ್ 17,
ಎಸ್.ಎಸ್. ಮಲ್ಲಿಕಾರ್ಜುನ್
ನರೇಂದ್ರಸ್ವಾಮಿ
ಅಜಯ್ ಸಿಂಗ್
ಅಕ್ಟೋಬರ್ 18,
ಕೃಷ್ಣ ಬೈರೇಗೌಡ
ಮಧು ಬಂಗಾರಪ್ಪಶ
ರುದ್ರಪ್ಪ ಲಮಾಣಿ
ಅಕ್ಟೋಬರ್ 19,
ಬಿ.ಝೆಡ್. ಝಮೀರ್ ಅಹಮದ್ ಖಾನ್
ರಿಜ್ವಾನ್ ಅರ್ಷದ್
ಲಕ್ಷ್ಮಣ ಸವದಿ
ಅಕ್ಟೋಬರ್ 20,
ಶರಣ ಪ್ರಕಾಶ್ ಪಾಟೀಲ್
ಸಂತೋಷ್ ಲಾಡ್

