HomeIndiaನಾನಾ ಪಾಟೇಕರ್ ನಿಧನ: "ನಾವೆಲ್ಲರೂ ಒಂದು ದಿನ ಹೋಗಲೇಬೇಕು" – ಸಾವಿನ ಕುರಿತು ಮಾತನಾಡಿದ 4...

ನಾನಾ ಪಾಟೇಕರ್ ನಿಧನ: “ನಾವೆಲ್ಲರೂ ಒಂದು ದಿನ ಹೋಗಲೇಬೇಕು” – ಸಾವಿನ ಕುರಿತು ಮಾತನಾಡಿದ 4 ದಿನಗಳಲ್ಲೇ ಬಾಲಿವುಡ್‌ನ ಹಿರಿಯ ನಟ ಅಗಲಿಕೆ

ಮುಂಬೈ- ನಿಧನ ಹೊಂದುವುದಕ್ಕೆ ಕೇವಲ 4 ದಿನಗಳ ಹಿಂದೆ (ಅಕ್ಟೋಬರ್ 4) ಗೋವಾದ ಡೋನಾ ಪೌಲಾದಲ್ಲಿ ನಡೆದ ‘ಸಾಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್’ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಾನಾ ಪಾಟೇಕರ್, ಜೀವನ ಮತ್ತು ಸಾವಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದರು.

ಮರಾಠಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, “ನಾವೆಲ್ಲರೂ ಒಂದು ದಿನ ಹೋಗಲೇಬೇಕು. ನಾಳೆ ನಾನು ಇಲ್ಲೇ ಇರುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಅಂತಿಮವಾಗಿ ಆ ಹಂತವನ್ನು ತಲುಪುತ್ತದೆ. ಆದರೆ ಅದು ಸಂಭವಿಸುವ ಮೊದಲು, ನಾನು ಏನು ಮಾಡಬೇಕೆಂದು ಬಯಸುತ್ತೇನೋ ಅದನ್ನು ಮಾಡಲು ನನಗೆ ಸಾಧ್ಯವಾಗುತ್ತದೆಯೇ?” ಎಂದು ಹೇಳಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಅವರ ಸಮಾಜಸೇವೆಯನ್ನು ಸಹ ಸ್ಮರಿಸಿದ್ದರು.

ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ

ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1951 ಜನವರಿ 1 ರಂದು ಜನಿಸಿದ ನಾನಾ ಪಾಟೇಕರ್, 1978 ರಲ್ಲಿ ‘ಗಮನ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ‘ಸಲಾಮ್ ಬಾಂಬೆ’, ‘ಪರಿಂದಾ’, ‘ತಿರಂಗಾ’, ‘ಕ್ರಾಂತಿವೀರ್’, ‘ಖಾಮೋಶಿ’, ‘ಅಬ್ ತಕ್ ಛಪ್ಪನ್’, ‘ರಾಜನೀತಿ’ ಹಾಗೂ ಗಂಭೀರ ಪಾತ್ರಗಳಷ್ಟೇ ಅಲ್ಲದೆ ‘ವೆಲ್‌ಕಮ್’ ಸಿನಿಮಾದ ‘ಉದಯ್ ಶೆಟ್ಟಿ’ಯಂತಹ ಹಾಸ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.

3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಭಿನಯ ಮಾತ್ರವಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಮತ್ತು ಸೇನಾ ಯೋಧರ ಕುಟುಂಬಗಳಿಗೆ ತಮ್ಮ ಎನ್‌ಜಿಒ ಮೂಲಕ ನೆರವು ನೀಡುವ ಮೂಲಕ ಸಾಮಾಜಿಕ ಕಾಳಜಿಯನ್ನೂ ಮೆರೆದಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular