HomeEntertainment2027ಕ್ಕೆ ಮುಂದೂಡಲ್ಪಟ್ಟ 'ಫೌಜಿ' ಸಿನಿಮಾ: ಹುಟ್ಟುಹಬ್ಬದಂದಾದರೂ ವೀಡಿಯೊ ಝಲಕ್ ನೀಡುತ್ತಾ ಚಿತ್ರತಂಡ?

2027ಕ್ಕೆ ಮುಂದೂಡಲ್ಪಟ್ಟ ‘ಫೌಜಿ’ ಸಿನಿಮಾ: ಹುಟ್ಟುಹಬ್ಬದಂದಾದರೂ ವೀಡಿಯೊ ಝಲಕ್ ನೀಡುತ್ತಾ ಚಿತ್ರತಂಡ?

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಫೌಜಿ’ (Fauzi) ಪ್ರಮುಖವಾದದ್ದು. ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪೀರಿಯಡ್ ವಾರ್ ಆಕ್ಷನ್ ಡ್ರಾಮಾ ಸಿನಿಮಾದ ಚಿತ್ರೀಕರಣವು ಬಹಳ ದಿನಗಳಿಂದ ನಡೆಯುತ್ತಿದೆಯಾದರೂ, ಇದುವರೆಗೆ ಚಿತ್ರತಂಡದಿಂದ ಕೇವಲ ಒಂದೆರಡು ಪೋಸ್ಟರ್‌ಗಳು ಮಾತ್ರ ಹೊರಬಂದಿವೆ. ಯಾವುದೇ ಅಧಿಕೃತ ವೀಡಿಯೊ ಝಲಕ್ ಬಿಡುಗಡೆಯಾಗಿಲ್ಲ.

ಕಳೆದ ವರ್ಷ ಪ್ರಭಾಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ಚಿತ್ರದ ದೊಡ್ಡ ಅಪ್‌ಡೇಟ್ ಬರಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆಗ ಕೇವಲ ಫಸ್ಟ್ ಲುಕ್ ಪೋಸ್ಟರ್ ಮಾತ್ರ ಬಿಡುಗಡೆಯಾಗಿತ್ತು. ಇದೀಗ ಪ್ರಭಾಸ್ ಅವರ 47ನೇ ಜನ್ಮದಿನ ಹತ್ತಿರವಾಗುತ್ತಿದ್ದು, ಈ ಬಾರಿಯಾದರೂ ತಯಾರಕರು ‘ಫೌಜಿ’ ಚಿತ್ರದ ವಿಶೇಷ ವೀಡಿಯೊ ಟೀಸರ್ ಅಥವಾ ಝಲಕ್ ನೀಡಲಿದ್ದಾರೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.

ಈ ಮೊದಲು ಡಿಸೆಂಬರ್ 3, 2026 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವು 2027ಕ್ಕೆ ಮುಂದೂಡಲ್ಪಟ್ಟ ನಂತರ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಚಿತ್ರತಂಡವಿನ್ನೂ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ, ಅಕ್ಟೋಬರ್ 23 ರಂದು ಪ್ರಭಾಸ್ ಹುಟ್ಟುಹಬ್ಬದ ಸವಿನೆನಪಿನಲ್ಲಿ ವಿಶೇಷ ಟೀಸರ್ ಅಥವಾ ಗ್ಲಿಂಪ್ಸ್ ಹಂಚಿಕೊಳ್ಳುವ ಸಾಧ್ಯತೆಯಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಆದಾಗ್ಯೂ, ಈ ಬಗ್ಗೆ ನಿರ್ಮಾಪಕರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ, ವೈ. ರವಿಶಂಕರ್ ಹಾಗೂ ಟಿ-ಸೀರೀಸ್‌ನ ಭೂಷಣ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿಶಾಲ್ ಚಂದ್ರಶೇಖರ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಇಮಾನ್ವಿ ಇಸ್ಮಾಯಿಲ್, ರಾಹುಲ್ ರವೀಂದ್ರನ್, ಮಿಥುನ್ ಚಕ್ರವರ್ತಿ, ಚೈತ್ರಾ ಜೆ ಆಚಾರ್ ಹಾಗೂ ಜಯಪ್ರದಾ ಸೇರಿದಂತೆ ದೊಡ್ಡ ತಾರಾಗಣವಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular