HomeKarnatakaಜಿಬಿಎ ವ್ಯಾಪ್ತಿಯಲ್ಲಿ 5 ಪೊಲೀಸ್ ಕಮಿಷನರೇಟ್ ರಚನೆ, ಸರ್ಕಾರದ ತುಘಲಕ್ ಆಡಳಿತಕ್ಕೆ ಉದಾಹರಣೆ: ಆರ್. ಅಶೋಕ್

ಜಿಬಿಎ ವ್ಯಾಪ್ತಿಯಲ್ಲಿ 5 ಪೊಲೀಸ್ ಕಮಿಷನರೇಟ್ ರಚನೆ, ಸರ್ಕಾರದ ತುಘಲಕ್ ಆಡಳಿತಕ್ಕೆ ಉದಾಹರಣೆ: ಆರ್. ಅಶೋಕ್

ಬೆಂಗಳೂರು: ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ತುಘಲಕ್ ಆಡಳಿತಕ್ಕೆ ಇನ್ನೊಂದು ಉದಾಹರಣೆಯಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ಇಷ್ಟು ವರ್ಷಗಳಿಂದ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಐದು ಕಮಿಷನರೇಟ್‌ ಗಳಾಗಿ ವಿಭಜಿಸುವ ಅಗತ್ಯ ಇರಲಿಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಭಜಿಸಿದ ನಂತರ ಆಡಳಿತ ಮತ್ತು ಹಣಕಾಸಿನ ಸಮಸ್ಯೆ ಎದುರಾಗಿದೆ. ಯಾವುದೇ ಯೋಜನೆಗೂ ಪಾಲಿಕೆಗಳ ಬಳಿ ಹಣವಿಲ್ಲ. ಅದಕ್ಕಾಗಿಯೇ ಜನರಿಂದ ಕಸ, ಪಾರ್ಕಿಂಗ್ ಎಂದು ದಂಡಗಳನ್ನೇ ಆದಾಯ ಸಂಗ್ರಹದ ಮೂಲ ಮಾಡಿಕೊಳ್ಳಲಾಗಿದೆ. ಈಗ ಪೊಲೀಸ್ ಇಲಾಖೆಯನ್ನೂ ಇದೇ ರೀತಿಯಲ್ಲಿ ವಿಭಜಿಸಿ, ಮತ್ತೆ ಹೊಸ ಶುಲ್ಕಗಳನ್ನು ತಂದರೂ ಅಚ್ಚರಿ ಪಡಬೇಕಿಲ್ಲ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಅನೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಯೋಗ್ಯತೆ ಇಲ್ಲದಿರುವಾಗ, ಹೊಸದಾಗಿ 1,022 ಹುದ್ದೆಗಳಿಗೆ ಹಣಕಾಸು ಎಲ್ಲಿಂದ ತರುತ್ತೀರಿ? ಕಚೇರಿಗಳ ನಿರ್ಮಾಣಕ್ಕೆ, ಹೊಸ ಜಾಗಗಳಿಗೆ ಅನುದಾನ ಎಲ್ಲಿದೆ? ಕೇವಲ ಘೋಷಣೆಗಳನ್ನು ಮಾಡಿ ನಂತರ ಜಾರಿ ಮಾಡದೆ ಸಬೂಬು ಹೇಳುವ ನಾಟಕ ಮಾಡಬೇಡಿ. ಇದರ ಬದಲು ಈಗ ಇರುವ ವ್ಯವಸ್ಥೆಗೆ ಹೆಚ್ಚು ಅನುದಾನ ನೀಡಿ ಬಲಪಡಿಸಿ ಎಂದು ಸಲಹೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ 3ನೇ ಸುತ್ತಿನ ಸೀಟು ಹಂಚಿಕೆ ಅಂತಿಮ ಫಲಿತಾಂಶ ಪ್ರಕಟ: 656 ಸೀಟು ಬಾಕಿ

ಬೆಂಗಳೂರು: UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಅ.10ರೊಳಗೆ ಶುಲ್ಕ ಪಾವತಿಸಿ, ಅ.11ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು.

ಈ ಹಿಂದೆ ಪಾವತಿಸಿದ್ದ ಶುಲ್ಕ ಮತ್ತು ಕಾಷನ್ ಡೆಪಾಸಿಟ್ ಅನ್ನು ಈ ಸುತ್ತಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು, ಮೂಲ ದಾಖಲೆಗಳ ಸಮೇತ ಹೋಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು.

ಒಟ್ಟು 12,010 ವೈದ್ಯಕೀಯ ಸೀಟುಗಳ ಪೈಕಿ ಇದುವರೆಗೂ 11,354 ಸೀಟು ಹಂಚಿಕೆಯಾಗಿ ಇನ್ನೂ‌ 656 ಸೀಟು ಬಾಕಿ ಉಳಿದಿವೆ. ದಂತ ವೈದ್ಯಕೀಯ ಕೋರ್ಸ್ ನಲ್ಲಿ ಎಲ್ಲ 2,689 ಸೀಟೂ ಹಂಚಿಕೆಯಾಗಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸ್

UGNEET-26: ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಆಪ್ಷನ್ಸ್ ದಾಖಲಿಸಲು ಅ.7ರಂದು ಮಧ್ಯಾಹ್ಬ 2 ಗಂಟೆಯಿಂದ ಅ.12ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ.

ಯುಜಿ ನೀಟ್ ರಾಂಕ್ ಇರುವ ಅರ್ಹರು ಆಪ್ಷನ್ಸ್ ದಾಖಲಿಸಬಹುದು. ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆದಿರುವ ಹಾಗೂ 3ನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವವರು ಆಯುಷ್ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಈಗಾಗಲೇ ಅರ್ಜಿ ಸಲ್ಲಿಸಿ, ವೆರಿಫಿಕೇಷನ್ ಸ್ಲಿಪ್ ಹೊಂದಿರುವ ಅಭ್ಯರ್ಥಿಗಳು ಮಾತ್ರ ಆಪ್ಷನ್ಸ್ ದಾಖಲಿಸಬಹುದು.

ಸೀಟು ಹಂಚಿಕೆಯಾಗಿ ಈಗಾಗಲೇ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ದಾಖಲೆ ಪಡೆಯುವುದನ್ನು ಖಾತರಿಪಡಿಸಿಕೊಂಡ ನಂತರವೇ ಆಪ್ಷನ್ಸ್ ದಾಖಲಿಸುವ ಕೆಲಸ ಮಾಡಿ. ಆಪ್ಷನ್ಸ್ ದಾಖಲಿಸಿ, ಸೀಟು ಹಂಚಿಕೆ ನಂತರ ದಾಖಲೆ ಇಲ್ಲದೆ ಪರದಾಡಬೇಡಿ. ಒಮ್ಮೆ ಆಯುಷ್ ಸೀಟು ಹಂಚಿಕೆ ನಂತರ ಹಿಂದಿನ ಸೀಟು ತನ್ನಿಂದಾನೆ ರದ್ದಾಗಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular