ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ದಿನದ ಗ್ರಹಗಳ ಸ್ಥಾನ ಮತ್ತು ಶುಭ ಯೋಗಗಳ ಪರಿಣಾಮ ಕೆಲವು ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಉದ್ಯೋಗ, ಹಣಕಾಸು ಮತ್ತು ಹೂಡಿಕೆ ವಿಚಾರಗಳಲ್ಲಿ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಬಾರಿ ಶನಿ ಮೀನ ರಾಶಿಯಲ್ಲಿ, ಸೂರ್ಯ ಕನ್ಯಾ ರಾಶಿಯಲ್ಲಿ ಮತ್ತು ಶುಕ್ರ ತುಲಾ ರಾಶಿಯಲ್ಲಿದ್ದಾನೆ. ಗುರು ಕರ್ಕಾಟಕ ರಾಶಿಯಲ್ಲಿರುವುದು ಕೂಡ ಕೆಲವರಿಗೆ ಶುಭ ಫಲ ನೀಡಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಹಸ್ತ ನಕ್ಷತ್ರ ಹಾಗೂ ಐಂದ್ರ ಯೋಗದ ಸಂಯೋಗವೂ ಇರಲಿದೆ. ಈ ಗ್ರಹಗಳ ಸ್ಥಾನಗಳ ಪರಿಣಾಮ ಮೂರು ರಾಶಿಯವರಿಗೆ ವಿಶೇಷವಾಗಿರಲಿದೆ ಎಂದು ಹೇಳಲಾಗಿದೆ.
ಕನ್ಯಾ ರಾಶಿ
ಮಹಾಲಯ ಅಮಾವಾಸ್ಯೆಯ ಬಳಿಕ ಕನ್ಯಾ ರಾಶಿಯವರಿಗೆ ಅದೃಷ್ಟ ಕೈಹಿಡಿಯಬಹುದು. ಬಹುಕಾಲದಿಂದ ಮಾಡುತ್ತಿರುವ ಪ್ರಯತ್ನಗಳಿಗೆ ಫಲ ಸಿಗುವ ಸಾಧ್ಯತೆ ಇದೆ. ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಮೆಚ್ಚುಗೆ ದೊರೆಯಬಹುದು.
ಈ ಅವಧಿಯಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ವಾಹನ ಖರೀದಿಸುವ ಆಸೆಯೂ ಈಡೇರಬಹುದು. ಹಿಂದಿನ ಹೂಡಿಕೆಗಳಿಂದ ಲಾಭ ಸಿಗುವ ಸಾಧ್ಯತೆ ಇದ್ದು, ಹಣಕಾಸಿನ ವಿಚಾರದಲ್ಲಿ ಅನುಕೂಲಕರ ಬೆಳವಣಿಗೆ ಕಂಡುಬರಬಹುದು. ಮದುವೆ ವಿಚಾರದಲ್ಲೂ ಕುಟುಂಬದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ಸಮಯದಲ್ಲಿ ಹಲವು ಅವಕಾಶಗಳು ಎದುರಾಗಬಹುದು. ಹಳೆಯ ಪರಿಚಯಸ್ಥರು ಅಥವಾ ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಕೆಲವು ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಹಣಕಾಸಿನ ವಿಚಾರದಲ್ಲೂ ಉತ್ತಮ ಬೆಳವಣಿಗೆ ಕಾಣಬಹುದು. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು ಮುಂದಿನ ದಿನಗಳಲ್ಲಿ ಲಾಭ ತರಬಹುದು. ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶವೂ ಸಿಗಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಬಯಸಿದ ಯಶಸ್ಸು ಸಿಗುವ ಸಾಧ್ಯತೆ ಇದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಇದರಿಂದ ಕೆಲಸದಲ್ಲಿ ಪ್ರಗತಿಗೂ ಸಹಾಯವಾಗಬಹುದು.
ಮಕ್ಕಳ ವಿಚಾರದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ. ಸರ್ಕಾರಿ ವಲಯದಿಂದಲೂ ಪ್ರಮುಖ ಮಾಹಿತಿ ಸಿಗಬಹುದು. ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಗೆ ಗುರುತ ದೊರೆಯುವ ಸಾಧ್ಯತೆ ಇದ್ದು, ಹೊಸ ಅವಕಾಶಗಳೂ ಸಿಗಬಹುದು.ಕುಟುಂಬದಲ್ಲೂ ಸಂತಸದ ವಾತಾವರಣ ಇರಲಿದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

