HomeKarnatakaನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು? ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ: ...

ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು? ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ: ಹಾಸನ ಡಿಸಿ ಲತಾಕುಮಾರಿ ನಡೆಗೆ ಗರಂ ಆದ ರೇವಣ್ಣ

ಹಾಸನ: ಹಾಸನದ ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರವಾಗಿ ಎಸ್​ಪಿ ಶುಭನ್ವಿತಾಗೆ ಡಿಸಿ ಲತಾಕುಮಾರಿ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್​.ಡಿ.ರೇವಣ್ಣ ಲೇವಡಿ ಮಾಡಿದ್ದಾರೆ. ನನಗೆ ಯಾವುದೇ ನೋಟಿಸ್ ಬಂದಿಲ್ಲ, ಎಸ್​​ಪಿಗೇ ನೋಟಿಸ್​ ಕೊಟ್ಟ ಮೇಲೆ ನನಗೂ ನೋಟಿಸ್​ ಕೊಡಬಹುದು. ಪಾಪ ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತನಾಡಲ್ಲ. ಎಸ್​ಪಿಗೆ ಜಿಲ್ಲಾಧಿಕಾರಿ ಯಾಕೆ ನೋಟಿಸ್​ ಕೊಟ್ಟಿದ್ದಾರೆಂದು ಗೊತ್ತಿಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

72 ವರ್ಷದಿಂದ ಗಣಪತಿ ಉತ್ಸವ ನಡೆಸಿಕೊಂಡು ಬಂದಿದ್ದಾರೆ. ದೇವಿಗೆರೆಯಲ್ಲಿ ಗಣಪತಿ ಬಿಡಲು ಅನುಮತಿ ಕೊಡಿಸಿ ಎಂದು ಕೇಳಿದರು. ನಾನು ತಹಶೀಲ್ದಾರ್​ಗೆ ಕೇಳಿದಾಗ ಎಲ್ಲಾ ಡಿಸಿಯವರದ್ದು ಎಂದು ಹೇಳಿದರು. ಬೇರೆಯವರಿಗೆ ಜಿಲ್ಲಾಧಿಕಾರಿ ಹೇಗೆ ಅನುಮತಿ ಕೊಟ್ಟರು? ಯಾವ ಕಾರಣದಿಂದ ಪೆಂಡಾಲ್ ಗಣಪತಿಗೆ ನಿಷೇಧ ಹೇರಿದರು? ಯಾವುದೇ ಘಟನೆ ಆದರು, ಏನೇ ಆದರೂ ಪೊಲೀಸರು ಬೇಕಿಲ್ಲ. ತಾನೇ ಕ್ರಮ ಕೈಗೊಳ್ತೀನಿ ಎಂದ ಮೇಲೆ ಪೂರ್ತಿ ಬೆಂಬಲ ಕೊಡೋಣ. ಹಾಸನ ಜಿಲ್ಲೆಯನ್ನು ಶಾಂತ ರೀತಿಯಿಂದ ನಡೆಸಿಕೊಂಡು ಹೋಗಲಿ. ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.

ಏನೇನು ನಡೆದಿದೆ ಎಲ್ಲದರ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಇದೇ ವೇಳೆ ಶಾಸಕ ಸ್ವರೂಪ್‌ಪ್ರಕಾಶ್​​ಗೂ ತಿಳಿಸಿದ ಹೆಚ್.ಡಿ‌.ರೇವಣ್ಣ, ಅಂತಹ ಪರಿಸ್ಥಿತಿ ಬಂದರೆ ಕೋರ್ಟ್ ಮತ್ತು ಲೋಕಾಯುಕ್ತ ಇದೆ. ಇನ್ನೂ ಕೆಲ ವಿಚಾರ ಇದೆ, ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ ಎಂದಿದ್ದಾರೆ.

ಇದೇ ವೇಳೆ ನೈಸ್ ಯೋಜನೆ ವಿಚಾರದಲ್ಲಿ ಹೆಚ್‌ಡಿಕೆ ಸಿಎಂ ಆಗಿದ್ದಾಗ ಸಮ್ಮನಿದ್ದರು ಎಂಬ ಅಬಕಾರಿ ಸಚಿವ ಶಿವಲಿಂಗೇಗೌಡ ಹೇಳಿಕೆಗೂ ಹೆಚ್‌.ಡಿ.ರೇವಣ್ಣ ತಿರುಗೇಟು ನೀಡಿದ್ದು, ನೈಸ್ ರಸ್ತೆ ವಿಚಾರದ ತನಿಖೆಗೆ ರಚನೆಯಾಗಿದ್ದ ಸದನ ಸಮಿತಿಯಲ್ಲಿ ಇದೇ ಶಿವಲಿಂಗೇಗೌಡ ಜೆಡಿಎಸ್‌ ಪಕ್ಷದಿಂದ ಸದಸ್ಯರಾಗಿದ್ದರು. ಜಯಚಂದ್ರ ನೇತೃತ್ವದ ಸಮಿತಿಗೆ ನಾನೇ ಸದಸ್ಯನಾಗಬೇಕೆಂದು ಹೋಗಿದ್ದರು. ಆಗ ಏನೆಂದು ಬರೆದುಕೊಟ್ಟಿದ್ದಾರೆಂದು ಕೇಳಿ. ನೈಸ್ ಯೋಜನೆ ವಿಚಾರದಲ್ಲಿ ಯಾರು ದುಡ್ಡು ಹೊಡೆದಿದ್ದಾರೆ ಎಂದು ಎಲ್ಲವನ್ನೂ ಪಾಯಿಂಟ್‌ ಮಾಡಿ ಇಟ್ಕೊಂಡಿದ್ದೀನಿ. ಬೆಂಡೆತ್ತಿ ಹಾಕ್ತೀನಿ ಅಂದಿದ್ದರು. ಅರಸೀಕೆರೆಯ ಜೇನುಕಲ್ ಸಿದ್ದೇಶ್ವರನ ಮೇಲೆ ಆಣೆ ಮಾಡಿ ಏನು ಬರೆದುಕೊಟ್ಟಿದಾರೆಂದು ಆಣೆ ಮಾಡಿ ಸಾರ್ವಜನಿಕವಾಗಿ ಹೇಳಲಿ ಎಂದು ಶಿವಲಿಂಗೇಗೌಡರಿಗೆ ರೇವಣ್ಣ ಸವಾಲು ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular